ಬೆಂಗಳೂರಿನ ಅಪಾರ್ಟ್ಮೆಂಟ್​ನಲ್ಲಿ ಶನಿವಾರ ಬೆಳಗಿನ ಜಾವ ಓಡಾಡಿರುವ ಚಿರತೆ ಪತ್ತೆಗೆ ದ್ರೋಣ್ ಬಳಕೆ

|

Updated on: Oct 30, 2023 | 7:06 PM

ದ್ರೋಣ್ ಚಿರತೆಯನ್ನು ಪತ್ತೆ ಮಾಡಲು ಸಹಾಯ ಮಾಡಬಹುದು, ಆದರೆ ಅದರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುವ ಅವಶ್ಯಕತೆಯಿದೆ. ಈ ಭಾಗದ ನಿವಾಸಿಗಳು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ರಾತ್ರಿ ಸಮಯದಲ್ಲಿ ನಿರಾತಂಕದಿಂದ ಓಡಾಡಬೇಕಾದರೆ, ವ್ಯಾಘ್ರನನ್ನು ಆದಷ್ಟು ಬೇಗ ಹಿಡಿಯಲೇಬೇಕು.

ಬೆಂಗಳೂರು: ಬೊಮ್ಮನಹಳ್ಳಿ ಸಿಂಗಸಂದ್ರಲ್ಲಿರುವ ಎಸಿಅಸ್ ಲೇಔಟ್ (ACS Layout) ಅಪಾರ್ಟ್ಮೆಂಟ್ ವೊಂದರ ಸೆಲ್ಲರ್ ಮತ್ತು ಮೊದಲ ಮಹಡಿಯಲ್ಲಿ ಅಕ್ಟೋಬರ್ 28 ರ ಬೆಳಗಿನ ಜಾವ ಚಿರತೆಯೊಂದು (leopard) ಓಡಾಡಿದ ದೃಶ್ಯ ಅಲ್ಲಿನ ನಿವಾಸಿಗಳನ್ನಯ ಭಯಗ್ರಸ್ತರನ್ನಾಗಿ ಮಾಡಿದೆ. ಆವರ ಆತಂಕ ಸಹಜವಾದದ್ದೇ ಮತ್ತು ಅದನ್ನು ಅರ್ಥ ಮಾಡಿಕೊಡಿರುವ ಅರಣ್ಯ ಇಲಾಖೆ ಸಿಬ್ಬಂದಿ (forest department staff) ಒಂದು ದ್ರೋಣ್ (drone) ಮೂಲಕ ಚಿರತೆಯನ್ನು ಪತ್ತೆ ಮಾಡುವ ಕೆಲಸ ಆರಂಭಿಸಿದ್ದಾರೆ. ಸಿಂಗಸಂದ್ರದಲ್ಲಿರುವ ಆಪಾರ್ಟ್ ಮೆಂಟ್ ಗಳ ನಡುವೆ ಸುಮಾರು ನಾಲ್ಕೂವರೆ ಎಕರೆಯಷ್ಟು ಅರಣ್ಯ ಪ್ರದೇಶವಿದ್ದು ಚಿರತೆ ಅಲ್ಲಿಂದಲೇ ಬಂದಿರಬಹುದು ಅಥವಾ ಅಲ್ಲೇ ಅಡಗಿರಬಹದು ಎಂದು ಶಂಕಿಸಲಾಗಿದೆ. ದ್ರೋಣ್ ಚಿರತೆಯನ್ನು ಪತ್ತೆ ಮಾಡಲು ಸಹಾಯ ಮಾಡಬಹುದು, ಆದರೆ ಅದರೊಂದಿಗೆ ಕೂಂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ನಡೆಸುವ ಅವಶ್ಯಕತೆಯಿದೆ. ಈ ಭಾಗದ ನಿವಾಸಿಗಳು ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ, ರಾತ್ರಿ ಸಮಯದಲ್ಲಿ ನಿರಾತಂಕದಿಂದ ಓಡಾಡಬೇಕಾದರೆ, ವ್ಯಾಘ್ರನನ್ನು ಆದಷ್ಟು ಬೇಗ ಹಿಡಿಯಲೇಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:59 pm, Mon, 30 October 23

Follow us on