ಬೆಂಗಳೂರು ಬೊಮ್ಮನಹಳ್ಳಿ ಪ್ರದೇಶದಲ್ಲಿ ಅಪಾರ್ಟ್ಮೆಂಟ್​ವೊಂದಕ್ಕೆ ನುಗ್ಗಿದ ಚಿರತೆ, ನಿವಾಸಿಗಳಲ್ಲಿ ತೀವ್ರ ಆತಂಕ

ಬೆಂಗಳೂರು ಬೊಮ್ಮನಹಳ್ಳಿ ಪ್ರದೇಶದಲ್ಲಿ ಅಪಾರ್ಟ್ಮೆಂಟ್​ವೊಂದಕ್ಕೆ ನುಗ್ಗಿದ ಚಿರತೆ, ನಿವಾಸಿಗಳಲ್ಲಿ ತೀವ್ರ ಆತಂಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 30, 2023 | 4:46 PM

ಬೆಳಗಿನ ಜಾವದಲ್ಲಿ ಸಾಮಾನ್ಯವಾಗಿ ವಯಸ್ಕರು ಮಾರ್ನಿಂಗ್ ವಾಕ್ ಗೆ ಅಂತ ಹೊರಬೀಳುತ್ತಾರೆ. ಇಲ್ಲವೇ ಗೃಹಿಣಿಯರು ಹಾಲು ಖರೀದಿಸಲು ಬರೋದುಂಟು. ಸದ್ಯ, ಅಂಥದ್ದೇನೂ ಆಗಿಲ್ಲ. ವಸತಿ ಸಮುಚ್ಛಯದಲ್ಲಿ ಅಳವಡಿಸಲಾಗಿರುವ ಕೆಮೆರಾಗಳಲ್ಲಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿದೆ.

ಬೆಂಗಳೂರು: ಕಾಡಿಗೆ ಹತ್ತಿರದ ಊರುಗಳಲ್ಲಿ, ಊರ ಹೊರಗಿನ ಬೆಟ್ಟದಲ್ಲಿ ಅಥವಾ ದೇವಸ್ಥಾದಲ್ಲಿ ಚಿರತೆ (leopard) ಕಾಣಿಸಿದರೆ ಅಚ್ಚರಿಯೇನೂ ಆಗದು, ಈಗ ಅದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಅಕ್ಟೋಬರ್ 28ರ ಬೆಳಗಿನ ಸಮಯ ನಗರದ ಬೊಮ್ಮನಹಳ್ಳಿಯ (Bommanahalli) ಕೂಡ್ಲು ಮತ್ತು ಸಿಂಗಸಂದ್ರ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ! ದೃಶ್ಯಗಳಲ್ಲಿ ಕಾಣಿಸುತ್ತಿರುವ ಚಿರತೆ ಸಿಂಗಸಂದ್ರದ (Singasandra) ಒಂದು ಅಪಾರ್ಟ್ ಮೆಂಟನ್ನು ಹೊಕ್ಕಿದೆ. ಅದೃಷ್ಟವಶಾತ್, ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಜನ ಇನ್ನೂ ನಿದ್ರಿಸುತ್ತಿದ್ದರೆಂದು ಕಾಣುತ್ತದೆ. ಬೆಳಗಿನ ಜಾವದಲ್ಲಿ ಸಾಮಾನ್ಯವಾಗಿ ವಯಸ್ಕರು ಮಾರ್ನಿಂಗ್ ವಾಕ್ ಗೆ ಅಂತ ಹೊರಬೀಳುತ್ತಾರೆ. ಇಲ್ಲವೇ ಗೃಹಿಣಿಯರು ಹಾಲು ಖರೀದಿಸಲು ಬರೋದುಂಟು. ಸದ್ಯ, ಅಂಥದ್ದೇನೂ ಸಂಭವಿಸಿಲ್ಲ. ವಸತಿ ಸಮುಚ್ಛಯದಲ್ಲಿ ಅಳವಡಿಸಲಾಗಿರುವ ಕೆಮೆರಾಗಳಲ್ಲಿ ಚಿರತೆ ಓಡಾಡುವ ದೃಶ್ಯ ಸೆರೆಯಾಗಿದೆ. ಫುಟೇಜ್ ವೀಕ್ಷಿಸಿದ ಬಳಿಕ ಬೊಮ್ಮನಹಳ್ಳಿ, ಹೆಚ್ ಎಸ್ ಆರ್ ಮತ್ತು ಬಿಟಿಎಮ್ ಲೇಔಟ್ ಗಳಲ್ಲಿ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ