ಮಾಜಿ ವಿಧಾನಸಭಾಧ್ಯಕ್ಷ ಮತ್ತು ಮಾಜಿ ಸಚಿವ ಡಿಬಿ ಚಂದ್ರೇಗೌಡ ವಿಧಿವಶ, ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ
ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿ ಕೆಲಸಮಾಡಿದ್ದರು. ಕಾಂಗ್ರೆಸ್, ಜನತಾ ಪಾರ್ಟಿಯ ಬಳಿಕ ತಮ್ಮ ರಾಜಕೀಯ ಬದುಕಿನ ಕೊನೆಯ ಅಧ್ಯಾಯದಲ್ಲಿ ಬಿಜೆಪಿ ಸೇರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಾಳೆ ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಅಂತ ಕುಟುಂಬದ ಮೂಲಗಳು ತಿಳಿಸಿವೆ.
ಚಿಕ್ಕಮಗಳೂರು: ರಾಜ್ಯದ ಹಿರಿಯ ರಾಜಕಾರಣಿ ಮತ್ತು ಜನ ಪ್ರತಿನಿಧಿಯಾಗಿ ರಾಜ್ಯಕ್ಕೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಹಾಗೂ ಕಾನೂನುಗಳ ಅಪರಿಮಿತ ಜ್ಞಾನ ಹೊಂದಿದ್ದ (legal expert) ಡಿಬಿ ಚಂದ್ರೇಗೌಡ (DB Chandre Gowda) ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಸ್ವಗ್ರಾಮ ದಾರದಹಳ್ಳಿಯಲ್ಲಿ (Daradahalli) ನಿಧನ ಹೊಂದಿದ್ದಾರೆ. 87-ವರ್ಷ ವಯಸ್ಸಿನವರಾಗಿದ್ದ ಚಂದ್ರೇಗೌಡರು ಕುಟುಂಬದ ಮೂಲಗಳ ಪ್ರಕಾರ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ತಲಾ ಮೂರು ಬಾರಿ ಶಾಸಕ ಮತ್ತು ಸಂಸದರಾಗಿ ಆಯ್ಕೆಯಾಗಿದ್ದ, ಅಪ್ತರಿಂದ ಡಿಬಿಸಿ ಎಂದು ಕರೆಸಿಕೊಳ್ಳುತ್ತಿದ್ದ ಗೌಡರು ಪತ್ನಿ ಹಾಗೂ 4 ಪುತ್ರಿಯರನ್ನು ಅಗಲಿದ್ದಾರೆ. 1971 ರಲ್ಲಿ ಚಿಕ್ಕಮಗಳೂರುನಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದ ಅವರು 1978ರಲ್ಲಿ ಪುನರಾಯ್ಕೆ ಗೊಂಡಿದ್ದರು. ಆದರೆ ದಿವಂಗತ ಪ್ರಧಾನ ಮಂತ್ರಿ ಇಂದಿರಾಗಾಂಧಿಯವರಿಗಾಗಿ ಸ್ಥಾನ ತೆರವುಗೊಳಿಸಿ ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ರಾಜ್ಯದ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದ ಡಿಬಿಸಿ; ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ವಿಧಾನಸಭಾಧ್ಯಕ್ಷರಾಗಿ ಕೆಲಸಮಾಡಿದ್ದರು. ಕಾಂಗ್ರೆಸ್, ಜನತಾ ಪಾರ್ಟಿಯ ಬಳಿಕ ತಮ್ಮ ರಾಜಕೀಯ ಬದುಕಿನ ಕೊನೆಯ ಅಧ್ಯಾಯದಲ್ಲಿ ಬಿಜೆಪಿ ಸೇರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. ಮೂಡಿಗೆರೆಯ ಅಡ್ಯಂತಾಯ ರಂಗಮಂದಿರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ನಾಳೆ ದಾರದಹಳ್ಳಿಯ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಅಂತ ಕುಟುಂಬದ ಮೂಲಗಳು ತಿಳಿಸಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ