ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟೀಕಿಸುವ ಭರದಲ್ಲಿ ಲಕ್ಷ್ಮಣ ರೇಖೆ ದಾಟಿದ ಸಿದ್ದರಾಮಯ್ಯ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 04, 2023 | 11:15 AM

ಸಿದ್ದರಾಮಯ್ಯ ಮುಂದುವರಿದು, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರೆದುರು ನಾಯಿಮರಿಗಳಂತೆ ನಿಂತಿರುತ್ತೀರಿ...’ ಅನ್ನುತ್ತಾರೆ.

ವಿಜಯನಗರ: ಇದು ಬೇಕಿರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು (Siddaramaiah) ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಟೀಕಿಸುವ ಭರದಲ್ಲಿ ಎಲ್ಲೆ ಮೀರಿದ್ದು ದುರದೃಷ್ಟಕರ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತಾಡುವಾಗ ಸಿದ್ದರಾಮಯ್ಯ ಮೊದಲು ಬೊಮ್ಮಾಯಿ ಅವರನ್ನು ‘ತಾಕತ್ತಿದ್ರೆ, ದಮ್ಮಿದ್ರೆ’ ಅಂತ ಅಣಕಿಸುತ್ತಾರೆ. ಯಾಕೆಂದರೆ, ಹಿಂದೆ ಬಿಜೆಪಿ ಸಮಾವೇಶದಲ್ಲಿ ಬೊಮ್ಮಾಯಿ ಅವರು ಇವೇ ಶಬ್ದಗಳನ್ನು ಕಾಂಗ್ರೆಸ್ ನಾಯಕರ ವಿರುದ್ಧ ಬಳಸಿದ್ದರು. ಆದರೆ ಸಿದ್ದರಾಮಯ್ಯ ಮುಂದುವರಿದು, ‘ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರೆದುರು ನಾಯಿಮರಿಗಳಂತೆ ನಿಂತಿರುತ್ತೀರಿ…’ ಅನ್ನುತ್ತಾರೆ. ಈ ಪದಬಳಕೆ ಸಿದ್ದರಾಮಯ್ಯನವರಿಗೆ ಶೋಭೆ ತರುವಂಥದಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ