ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವೆ ಸದನದಲ್ಲಿ ಮಾತಿನ ಚಕಮಕಿ!
ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಅವರು ತನಿಖೆಗೆ ಆದೇಶ ನೀಡಲಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ, ಅವರನ್ನು ಯಾರು ತಡೆದಿದ್ದಾರೆ ಅಂತ ಹೇಳಿದ ಸಿದ್ದರಾಮಯ್ಯ ಬಜೆಟ್ ಅಧಿವೇಶನ ನಡೆಯುತ್ತಿರಬೇಕಾದರೆ ಈ ವಿಷಯವನ್ನು ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡುತ್ತಿರುವ ಔಚಿತ್ಯವನ್ನು ಪ್ರಶ್ನಿಸಿದರು.
ಈಗ ಜಾರಿಯಲ್ಲಿರುವ ಕರ್ನಾಟಕ ವಿಧಾನಮಂಡಲದ ಬಜೆಟ್ ಅಧಿವೇಶನ ಹಲವು ವಿರಾವೇಶದ ವಾಗ್ದಾಳಿಗಳಿಗೆ ಸಾಕ್ಷಿಯಾಗುತ್ತಿದೆ ಮಾರಾಯ್ರೇ. ಕೇವಲ ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ನಡುವೆ ಸದನದಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಇಂದು (ಗುರುವಾರ) ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ವಾಕ್ಸಮರ ನಡೆಯಿತು. ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹಿಂದೊಮ್ಮೆ ಒಂದೇ ಪಕ್ಷದ ಧುರೀಣರಾಗಿದ್ದರು. ಸಿದ್ದರಾಮಯ್ಯನವರು ಜೆಡಿ(ಎಸ್) ತೊರೆದು ಕಾಂಗ್ರೆಸ್ ಸೇರಿದ ದಿನದಿಂದ ಅವರ ಮತ್ತು ಕುಮಾರಸ್ವಾಮಿ ಮಧ್ಯೆ ಮಾತಿನ ಜಗಳ ನಡೆಯುತ್ತಿದೆ, ಇದು ರಾಜ್ಯದ ಜನೆತೆಗೆ ಗೊತ್ತಿದೆ. ಗುರುವಾರ ಸದನದಲ್ಲಿ ಈಗಲ್ಟನ್ ರೆಸಾರ್ಟ್ ವಿಷಯ ಚರ್ಚೆಗೆ ಬಂದಾಗ ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿ ಟೀಕೆ ಮಾಡಲಾರಂಭಿಸಿದರು.
ಇದರಿಂದ ರೊಚ್ಚಿಗೆದ್ದ ಸಿದ್ದರಾಮಯ್ಯನವರು, ರೆಸಾರ್ಟ್ ವಿಷಯದಲ್ಲಿ ಅಕ್ರಮ ನಡೆದಿದ್ದರೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಯಾಕೆ ತನಿಖೆ ನಡೆಸಲಿಲ್ಲ? ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಅವರು ತನಿಖೆಗೆ ಆದೇಶ ನೀಡಲಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ, ಅವರನ್ನು ಯಾರು ತಡೆದಿದ್ದಾರೆ ಅಂತ ಹೇಳುತ್ತಾ ಬಜೆಟ್ ಅಧಿವೇಶನ ನಡೆಯುತ್ತಿರಬೇಕಾದರೆ ಈ ವಿಷಯವನ್ನು ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡುತ್ತಿರುವ ಔಚಿತ್ಯವನ್ನು ಪ್ರಶ್ನಿಸಿದರು.
‘ಇದು ಬಜೆಟ್ ಗೆ ಸಂಬಂಧಿಸಿದ ವಿಷಯಯವಲ್ಲವೇ,’ ಎಂದು ಕುಮಾರಣ್ಣ ಕೇಳಿದಾಗ ಸಿದ್ದರಾಮಯ್ಯನವರು, ‘ನನ್ನ ದೃಷ್ಟಿಯಲ್ಲಿ ಅಲ್ಲವೆಂದು ಹೇಳುತ್ತಾ, ಕಳೆದ ವರ್ಷ ಯಾಕೆ ಇದನ್ನು ಪ್ರಸ್ತಾಪಿಲಿಲ್ಲ,’ ಎಂದು ಪ್ರಶ್ನಿಸುತ್ತಾರೆ. ‘ನಾವು ಅಧಿಕಾರಲ್ಲಿದ್ದಾಗ ನೀವು ವಿರೋಧಪಕ್ಷದಲ್ಲಿದ್ದಾಗ್ಯೂ ಈ ವಿಷಯವನ್ನು ಮಾತಾಡಲಿಲ್ಲ, ನೀವು ಮುಖ್ಯಮಂತ್ರಿಯಾಗಿದ್ದಾಗಲೂ ಸುಮ್ಮನಿದ್ದಿರಿ,’ ಎಂದು ಸಿದ್ದರಾಮಯ್ಯ ಹೇಳುತ್ತಾರೆ.
ಅದಾದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಉಳಿದ ಸದಸ್ಯರು ಸಹ ಎದ್ದುನಿಂತು ಜೋರು ಜೋರಾಗಿ ಮಾತಾಡಲು ಆರಂಭಿಸಿದ್ದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗುತ್ತದೆ.
ಇದನ್ನೂ ಓದಿ: ಬೇರೆ ಸಮಯದಲ್ಲಿ ಸದನ ಕರೆಯಿರಿ ಅಂತಾರೆ, ಕರೆದ್ರೆ ಚರ್ಚೆನೇ ಮಾಡೊಲ್ಲ: ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಅಸಮಾಧಾನ