ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಜಿ ಪರಮೇಶ್ವರ್ ಮಾನವೀಯತೆ ಮೆರೆದರು
ಅಪಘಾತಕ್ಕೀಡಾಗಿ ನೆಲಕ್ಕೆ ಬಿದ್ದು ಸಹಾಯ ಯಾಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಮ್ಮ ಬೆಂಗಾವಲು ಪಡೆ ವಾಹನವೊಂದರಲ್ಲಿ ಮಧುಗಿರಿ ಆಸ್ಪತ್ರೆಗೆ ಸೇರಿಸಲು ನೆರವಾಗಿ ತಮ್ಮಲ್ಲಿನ ಮಾನವೀಕಯ ಕಳಕಳಿಯನ್ನು ಪ್ರದರ್ಶಿಸಿದ್ದಾರೆ.
Tumakuru: ನಮ್ಮ ರಾಜಕಾರಣಿಗಳು (ಎಲ್ಲರೂ ಅಲ್ಲ) ಸಂದರ್ಭದ ಎದುರಾದಾಗಲೆಲ್ಲ ಮಾನವೀಯತೆ ಮೆರೆದು ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಜನರ ಪ್ರೀತಿಗೆ ಪಾತ್ರರಾಗುತ್ತಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ (G Parameshwar) ಅವರು ಶುಕ್ರವಾರ ರಾತ್ರಿ ಮಧುಗಿರ (Madhugiri) ತಾಲ್ಲೂಕಿನ ಕೆರೆಗಳಪಾಳ್ಯದ ಬಳಿ ಅಪಘಾತಕ್ಕೀಡಾಗಿ ನೆಲಕ್ಕೆ ಬಿದ್ದು ಸಹಾಯ ಯಾಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಮ್ಮ ಬೆಂಗಾವಲು ಪಡೆ (convoy) ವಾಹನವೊಂದರಲ್ಲಿ ಮಧುಗಿರಿ ಆಸ್ಪತ್ರೆಗೆ ಸೇರಿಸಲು ನೆರವಾಗಿ ತಮ್ಮಲ್ಲಿನ ಮಾನವೀಕಯ ಕಳಕಳಿಯನ್ನು ಪ್ರದರ್ಶಿಸಿದ್ದಾರೆ. ಅವರ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos