ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದರೆ ಬಿಸಿ ಪಾಟೀಲ್ ಬಂಡಾಯವೇಳುವ ಲಕ್ಷಣ ಸ್ಪಷ್ಟವಾಗಿದೆ
ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು ಮತ್ತು ಅವರೀಗ ಶಾಸಕರೂ ಆಗಿದ್ದಾರೆ, ತಾನಾದರೋ ಸೋತು ಮನೆಯಲ್ಲಿ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಟಿಕೆಟ್ ತನಗೆ ಮಾತ್ರ ನೀಡಬೇಕು. ತನ್ನ ಮೌನವನ್ನು ಬಿಜೆಪಿ ನಾಯಕರು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಪಾಟೀಲ್ ಹೇಳಿದರು. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬೆಂಬಲಿಗರನ್ನು ಮತ್ತು ಕಾರ್ಯಕರ್ತರನ್ನು ಕೇಳಿ ಮುಂದಿನ ನಡೆ ನಿರ್ಧರಿಸುವುದಾಗಿ ಪಾಟೀಲ್ ಹೇಳಿದರು.
ಹಾವೇರಿ: ಲೋಕಸಭಾ ಚುನಾವಣೆಯಲ್ಲಿ (Lok Sabha polls) ತಮ್ಮ ಮಗ ಹಾವೇರಿ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿಗದ್ದಾನೆ ಅಂತ ಕೆಎಸ್ ಈಶ್ವರಪ್ಪ (KS Eshwarappa) ಹೇಳಿರದಿದ್ದರೆ ಪ್ರಾಯಶಃ ಪಕ್ಷದ ಮಾಜಿ ಶಾಸಕ ಬಿಸಿ ಪಾಟೀಲ್ (BC Patil) ಸುಮ್ಮನಿರುತ್ತಿದ್ದರು. ಪಾಟೀಲ್ ಗೆ ಈಶ್ವರಪ್ಪ ಬಗ್ಗೆ ಸಿಟ್ಟು, ಅಸಮಾಧಾನಗಳಿವೆ. ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದವರಿಂದ ಪಕ್ಷದಲ್ಲಿ ಶಿಸ್ತು ಹಾಳಾಗಿದೆ ಅಂತ ಈಶ್ವರಪ್ಪ ಒಮ್ಮೆ ಹೇಳಿದಾಗ ಪಾಟೀಲ್ ಸಿಡಿದೆದ್ದಿದ್ದರು. ಇಲ್ಲಿ ಅವರು ಆಡುತ್ತಿರುವ ಮಾತನ್ನು ಕೇಳಿ. ಬಿಜೆಪಿ ತನಗೆ ಮಾತ್ರ ಟಿಕೆಟ್ ಕೊಡಬೇಕು, ಯಾಕೆಂದರೆ ಬಿಜೆಪಿಗೋಸ್ಕರ ತಾನು ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಬಿಟ್ಟು ಬಿಜೆಪಿ ಸೇರಿ 4 ವರ್ಷಗಳ ಅಧಿಕಾರ ನಡೆಸಲು ನೆರವಾಗಿದ್ದೇನೆ. ತಾನು ಮಾಡಿರುವ ತ್ಯಾಗ ದೊಡ್ಡದು ಮತ್ತು ಅದಕ್ಕೆ ಬೆಲೆ ಸಿಗಬೇಕು ಎಂದು ಪಾಟೀಲ್ ಹೇಳುತ್ತಾರೆ. ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತ್ತು ಮತ್ತು ಅವರೀಗ ಶಾಸಕರೂ ಆಗಿದ್ದಾರೆ, ತಾನಾದರೋ ಸೋತು ಮನೆಯಲ್ಲಿ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಟಿಕೆಟ್ ತನಗೆ ಮಾತ್ರ ನೀಡಬೇಕು. ತನ್ನ ಮೌನವನ್ನು ಬಿಜೆಪಿ ನಾಯಕರು ದೌರ್ಬಲ್ಯವೆಂದು ಪರಿಗಣಿಸಬಾರದು ಎಂದು ಪಾಟೀಲ್ ಹೇಳಿದರು. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಬೆಂಬಲಿಗರನ್ನು ಮತ್ತು ಕಾರ್ಯಕರ್ತರನ್ನು ಕೇಳಿ ಮುಂದಿನ ನಡೆ ನಿರ್ಧರಿಸುವುದಾಗಿ ಪಾಟೀಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಈಶ್ವರಪ್ಪರ ಮಕ್ಕಳಾಟವೇ ಬಿಜೆಪಿಯಲ್ಲಿ ಅಶಿಸ್ತಿಗೆ ಕಾರಣವಾಗಿದೆ, ವಲಸಿಗರಿಂದಲ್ಲ: ಬಿಸಿ ಪಾಟೀಲ್, ಮಾಜಿ ಶಾಸಕ