ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನ ಸಿಗದೇ ಹೋಗಿದ್ದಕ್ಕೆ ಸಿಟಿ ರವಿ ನಿಸ್ಸಂದೇಹವಾಗಿ ಹತಾಷರಾಗಿದ್ದಾರೆ!

|

Updated on: Nov 11, 2023 | 5:08 PM

ಆದರೆ ಬಿಜೆಪಿ ಕಾರ್ಯಕರ್ತರು ಸೈದ್ಧಾಂತಿಕ ನೆಲೆಗಟ್ಟಿಲ್ಲಿ ಕೆಲಸ ಮಾಡುತ್ತಾರೆ, ರಾಜ್ಯ ಬಿಜೆಪಿ ಘಟಕ ಒಂದು ತಂಡದಂತೆ ಕೆಲಸ ಮಾಡುತ್ತದೆ, ಅಧ್ಯಕ್ಷರಾದವರು ಸೂಕ್ತವಾದ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಮಾಧ್ಯಮ ಪ್ರತಿನಿಧಿಗಳು ಪ್ರಾಯಶಃ ಮೊದಲ ಬಾರಿಗೆ ರವಿಯವರು ಪದಗಳಿಗೆ ತಡಕಾಡುವುದನ್ನು ನೋಡಿರಬಹುದು.

ಬೆಂಗಳೂರು: ಬಿಜೆಪಿ ನಾಯಕ ಸಿಟಿ ರವಿಯ (CT Ravi) ಮುಖದಲ್ಲಿ ನಿರಾಸೆ ಮಡುಗಟ್ಟಿದೆ. ಬಿಜೆಪಿ ರಾಜ್ಯ ಘಟಕ ಅಧ್ಯಕ್ಷನ ಸ್ಥಾನಕ್ಕೆ ಅವರೂ ಆಕಾಂಕ್ಷಿಯಾಗಿದ್ದರು. ಆದರೆ ಅದೀಗ ಬಿವೈ ವಿಜಯೇಂದ್ರ (BY Vijayendra) ಪಾಲಾಗಿದೆ. ಕುಟುಂಬ ರಾಜಕಾರಣವನ್ನು (dynastic politics) ವಿರೋಧಿಸುವ ಬಿಜೆಪಿ, ವಿಜಯೇಂದ್ರಗೆ ಪಟ್ಟ ನೀಡಿದ್ದು ಯಾಕೆ ಅಂತ ಪ್ರಶ್ನೆ ಕೇಳಿದಾಗ ರವಿಯವರಲ್ಲಿ ಉತ್ತರವಿಲ್ಲ, ಅದು ನನಗೂ ಒಂದು ಪ್ರಶ್ನೆಯೇ ಎನ್ನುವ ಅವರು ಇದೇ ವಿಷಯದ ಸುತ್ತ ಪ್ರಶ್ನೆಗಳು ಎದ್ದಾಗ ಸೆಂಟಿಮೆಂಟಲ್ ಅಗಿ ಬಿಡುತ್ತಾರೆ. ನಗರದ ಹೋಟೆಲೊಂದರಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು ತನ್ನನ್ನು ಮಾತಿನಲ್ಲಿ ಸಿಕ್ಹಾಕಿಸುವ ಪ್ರಯತ್ನ ನಡೆದಿದೆ, ಹಿಂದೆ ಯಾರನ್ನಾದರೂ ನೋಯಿಸುವ ಹಾಗೆ ಮಾತಾಡಿದ್ದರೆ ದಯವಿಟ್ಟು ಕ್ಷಮಿಸಿ ಅಂತ ಕೈ ಮುಗಿಯುತ್ತಾರೆ. ವಿಷಯದ ಬಗ್ಗೆ ತಾನೀಗ ಮಾತಾಡೋದು ಸರಿಯಲ್ಲ, ಮಾತು ತಪ್ಪು ಅರ್ಥಗಳನ್ನು ಕಲ್ಪಿಸುತ್ತದೆ, ಏನಾದರೂ ಹೇಳಿದರೆ ನೀವು ಹಿಂದೆ ಹೀಗೆ ಹೇಳಿದ್ದು ಅಂತ ಆಗಿನ ವಿಡಿಯೋಗಳನ್ನು ತೋರಿಸುತ್ತೀರಿ ಅಂತ ರವಿ ಹೇಳಿದರು. ಆದರೆ ಬಿಜೆಪಿ ಕಾರ್ಯಕರ್ತರು ಸೈದ್ಧಾಂತಿಕ ನೆಲೆಗಟ್ಟಿಲ್ಲಿ ಕೆಲಸ ಮಾಡುತ್ತಾರೆ, ರಾಜ್ಯ ಬಿಜೆಪಿ ಘಟಕ ಒಂದು ತಂಡದಂತೆ ಕೆಲಸ ಮಾಡುತ್ತದೆ, ಅಧ್ಯಕ್ಷರಾದವರು ಸೂಕ್ತವಾದ ಮಾರ್ಗದರ್ಶನ ನೀಡುತ್ತಾರೆ ಎಂದು ಹೇಳಿದರು. ಮಾಧ್ಯಮ ಪ್ರತಿನಿಧಿಗಳು ಪ್ರಾಯಶಃ ಮೊದಲ ಬಾರಿಗೆ ರವಿಯವರು ಪದಗಳಿಗೆ ತಡಕಾಡುವುದನ್ನು ನೋಡಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Sat, 11 November 23

Follow us on