ನಿಯತ್ತಿನ ಮುಖವಾಡ ಹಾಕಿಕೊಂಡವರಿಗೆ ಈ ವಾರ ಕಿಚ್ಚನ ಕ್ಲಾಸ್; ಸಜ್ಜಾಗಿದೆ ಪಂಚಾಯ್ತಿ ವೇದಿಕೆ
5ನೇ ವಾರದಲ್ಲಿ ಕೆಲವು ಸ್ಪರ್ಧಿಗಳ ಅಸಲಿ ಬಣ್ಣ ಬಯಲಾಗಿದೆ. ದೊಡ್ಮನೆಯಲ್ಲಿ ಡ್ರೋನ್ ಪ್ರತಾಪ್, ಮೈಕೆಲ್ ಅವರ ಆಟದ ವೈಖರಿ ಬೇರೆ ಬೇರೆ ರೀತಿ ಆಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ವಾರದ ಪಂಚಾಯ್ತಿ ವೇದಿಕೆ ಸಿದ್ಧವಾಗಿದೆ. ತಪ್ಪು ಮಾಡಿದವರಿಗೆ ಕ್ಲಾಸ್ ತೆಗೆದುಕೊಳ್ಳಲು ಕಿಚ್ಚ ಸುದೀಪ್ ಅವರು ರೆಡಿ ಆಗಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ 5ನೇ ವಾರ ಹಲವು ಟ್ವಿಸ್ಟ್ಗಳು ಸಿಕ್ಕಿವೆ. ಕೆಲವರು ನಿಯತ್ತಾಗಿ ಆಟ ಆಡಿದ್ದಾರೆ. ಇನ್ನೂ ಕೆಲವರು ನಿಯತ್ತಿನ ಮುಖವಾಡ ಹಾಕಿಕೊಂಡಿದ್ದಾರೆ. ಈ ವಾರದಲ್ಲಿ ಕೆಲವು ಸ್ಪರ್ಧಿಗಳ ಅಸಲಿ ಬಣ್ಣ ಬಯಲಾಗಿದೆ. ಡ್ರೋನ್ ಪ್ರತಾಪ್, ಮೈಕೆಲ್ (Michael Ajay) ಅವರ ಆಟದ ವೈಖರಿ ಬೇರೆ ಬೇರೆ ರೀತಿ ಆಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲು ವಾರದ ಪಂಚಾಯ್ತಿ ವೇದಿಕೆ ಸಿದ್ಧವಾಗಿದೆ. ತಪ್ಪು ಮಾಡಿದವರಿಗೆ ಕ್ಲಾಸ್ ತೆಗೆದುಕೊಳ್ಳಲು ಕಿಚ್ಚ ಸುದೀಪ್ (Kichcha Sudeep) ಅವರು ರೆಡಿ ಆಗಿದ್ದಾರೆ. ಇದರ ಝಲಕ್ ತೋರಿಸುವ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಸಂಚಿಕೆ ನ.11ರ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದ್ದು, ಜಿಯೋ ಸಿನಿಮಾದಲ್ಲಿ 24 ಗಂಟೆಯೂ ಲೈವ್ ನೋಡಬಹುದಾಗಿದೆ. ಈ ವಾರ ನಾಮಿನೇಟ್ ಆದವರ ಪೈಕಿ ಶನಿವಾರ ಯಾರು ಸೇವ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.