33ನೇ ವಯಸ್ಸಿಗೆ ದುರಂತ ಅಂತ್ಯ ಕಂಡ ಟ್ವಿಶಾ ಶರ್ಮಾ ಜೀವನ; ಸಾವಿಗೆ ಕಾರಣ ಏನು?

Updated on: May 18, 2026 | 8:39 PM

ಮದುವೆ ಬಳಿಕ ನಟಿ, ಮಾಡೆಲ್ ಟ್ವಿಶಾ ಶರ್ಮಾ ಅವರ ಜೀವನ ನರಕ ಆಯಿತು. ಗಂಡನ ಜೊತೆ ಜಗಳ ಮಾಡಿಕೊಂಡ ಕೆಲವೇ ನಿಮಿಷಗಳ ನಂತರ ಅವರ ಸಾವಿನ ಸುದ್ದಿ ಹೊರಬಿತ್ತು. ಸಾಯುವುದಕ್ಕೂ ಮುನ್ನ ಪೋಷಕರಿಗೆ ಕರೆ ಮಾಡಿ ತಮ್ಮ ನೋವನ್ನು ಅವರು ತೋಡಿಕೊಂಡಿದ್ದರು.

ನಟಿ, ಮಾಡೆಲ್ ಟ್ವಿಶಾ ಶರ್ಮಾ (Twisha Sharma) ಅವರ ನಿಧನದ ಸುದ್ದಿ ಭಾರಿ ಸಂಚಲನ ಮೂಡಿಸಿದೆ. 2012ರಲ್ಲಿ ಮಿಸ್ ಪುಣೆ ಆಗಿದ್ದ ಟ್ವಿಶಾ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಮಾಡೆಲ್ ಆಗಿ ಅವರು ಗುರುತಿಸಿಕೊಂಡಿದ್ದರು. ಕೆಲವೇ ತಿಂಗಳ ಹಿಂದೆ ಹೈಪ್ರೊಫೈಲ್ ಕುಟುಂಬಕ್ಕೆ ಸೊಸೆಯಾಗಿ ಹೋಗಿದ್ದರು. ಆದರೆ ಮದುವೆ ಬಳಿಕ ಅವರ ಜೀವನ ನರಕ ಆಯಿತು. ಗಂಡನ ಜೊತೆ ಜಗಳ ಮಾಡಿಕೊಂಡ ಬಳಿಕ ಅವರ ಸಾವಿನ ಸುದ್ದಿ ಬಂದಿದೆ. ಸಾಯುವುದಕ್ಕೂ ಮುನ್ನ ಪೋಷಕರಿಗೆ ಕರೆ ಮಾಡಿ ತಮ್ಮ ನೋವನ್ನು ಅವರು ತೋಡಿಕೊಂಡಿದ್ದರು. ಟ್ವಿಶಾ ಶರ್ಮಾ ಸಾವಿನ (Twisha Sharma Death) ಸುತ್ತ ಹಲವು ಅನುಮಾನದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅವರ ಪತಿ ಸಮರ್ಥ್ ಸಿಂಗ್ ಓರ್ವ ಕ್ರಿಮಿನಲ್ ಲಾಯರ್. ಟ್ವಿಶಾ ಸಾವಿನ ನಂತರ ಸಮರ್ಥ್ ತಲೆ ಮರೆಸಿಕೊಂಡಿದ್ದಾರೆ. ಸಮರ್ಥ್ ತಾಯಿ ಗಿರಿಬಾಲಾ ಸಿಂಗ್ ಅವರು ಜಡ್ಜ್ ಆಗಿದ್ದರು. ಇಂಥ ಹೈಪ್ರೋಫೈಲ್ ಕುಟುಂಬಕ್ಕೆ ಸೊಸೆಯಾಗಿ ಹೋದ ಟ್ವಿಶಾ ಶರ್ಮಾ ಮಸಣ ಸೇರುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More