MP Renukacharya: ಬಿಜೆಪಿ ಸೋಲಿಗೆ ಎಳೆಎಳೆಯಾಗಿ ಕಾರಣ ಬಿಚ್ಚಿಟ್ಟ ರೇಣುಕಾಚಾರ್ಯ
MP Renukacharya: ನನಗೆ ನಿನ್ನೆ ನೋಟಿಸ್ ಬಂದಿದೆ. ಲಿಖಿತವಾಗಿ ಒಂದು ವಾರದಲ್ಲಿ ಉತ್ತರ ಕೊಡುವಂತೆ ತಿಳಿಸಿದ್ದಾರೆ. ಆದರೆ ಸಭೆಗೆ ಬರುವಂತೆ ಕರೆ ಮಾಡಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ತಾಯಿ ಸಮಾನ. ಮೋದಿ ವಿಶ್ವ ನಾಯಕರು, ಪಕ್ಷದ ವಿರುದ್ಧ ಮಾತನಾಡಿಲ್ಲ -ರೇಣುಕಾಚಾರ್ಯ
ಬೆಂಗಳೂರಿನಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ: ಅವರು ಹೇಳಿದ್ದು ಇಷ್ಟು -ಯಡಿಯೂರಪ್ಪ ಅವರನ್ನು 2013 ರಲ್ಲಿ ಪಕ್ಷದಿಂದ ಹೊರಗೆ ಕಳಿಸಿದರು. ಆಗ ಪಕ್ಷ ಹೀನಾಯ ಸೋಲು ಕಂಡಿತು. ಮೋದಿ, ಶಾ ಅವರು ಕರೆದು ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷ ಮಾಡಿದರು. ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡಿದರು. ಕೇಂದ್ರದ ಕೆಲವು ನಾಯಕರನ್ನು ಭೇಟಿ ಮಾಡಿ ಮಾತಾಡಿದ್ದೆ. ಪಕ್ಷದ ವಾಸ್ತವ ಸ್ಥಿತಿ ಹೇಳಿ ಬಂದಿದ್ದೆ. ಕರ್ನಾಟಕದಲ್ಲಿ ಇದೇ ಪರಿಸ್ಥಿತಿ ಇದ್ರೆ ಪಕ್ಷ ಗೆಲ್ಲುವುದಿಲ್ಲ ಎಂದೂ ಹೇಳಿ ಬಂದಿದ್ದೆ. ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಆದರೆ ಬೊಮ್ಮಾಯಿ ಅವರ ಕೈ ಕಟ್ಟಿಹಾಕಿದರು. ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ಹಿರಿಯರನ್ನು ಮಾಡಬೇಕಿತ್ತು. ಒಳ ಮೀಸಲಾತಿಯಿಂದ 45 ಕ್ಷೇತ್ರಗಳಲ್ಲಿ ಸೋಲು ಆಯಿತು. ಅಕ್ಕಿ ಕೊಡಲಿಲ್ಲ, ಎನ್ ಪಿಎಸ್ ಕೊಡಲಿಲ್ಲ. ಇದರಿಂದ ಬಿಜೆಪಿಗೆ ಸೋಲು ಆಯಿತು. ನಾಲ್ಕು ಗೋಡೆಗಳ ಮಧ್ಯೆ ಇದೆಲ್ಲಾ ಹೇಳಿದ್ದೆವು. ಯಡಿಯೂರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದೆವು. ಆದರೆ ಅದ್ಯಾವುದನ್ನೂ ಕೇಳಲಿಲ್ಲ. ಯಡಿಯೂರಪ್ಪ ನವರಿಗೆ ಕೆಳಗಿಳಿಯುವಂತೆ ಯಾರೆಲ್ಲಾ ಒತ್ತಡ ಹಾಕಿದ್ರು ನನಗೆ ಗೊತ್ತಿದೆ. ಯಡಿಯೂರಪ್ಪನವರ ಕಣ್ಣೀರಿನಲ್ಲಿ ಪಕ್ಷ ಕೊಚ್ಚಿ ಹೊಯ್ತು. ಸತ್ಯ ಹೇಳಿದ್ರೆ ನಿಮಗೆ ಕೋಪ ಬಂತಾ? ಯಡಿಯೂರಪ್ಪನವರು ಯಾರ ವಿರುದ್ಧವೂ ಮಾತನಾಡುವಂತೆ ನಮಗೆ ಹೇಳಿಲ್ಲ. ಯಡಿಯೂರಪ್ಪನವರಿಗೆ ಅಪಮಾನ ಮಾಡಿದರು ಎಂದು ಹೇಳಿದರು.
ನನಗೆ ನಿನ್ನೆ ನೋಟಿಸ್ ಬಂದಿದೆ. ಲಿಖಿತವಾಗಿ ಒಂದು ವಾರದಲ್ಲಿ ಉತ್ತರ ಕೊಡುವಂತೆ ತಿಳಿಸಿದ್ದಾರೆ. ಆದರೆ ಸಭೆಗೆ ಬರುವಂತೆ ಕರೆ ಮಾಡಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ತಾಯಿ ಸಮಾನ. ಮೋದಿ ವಿಶ್ವ ನಾಯಕರು, ಪಕ್ಷದ ವಿರುದ್ಧ ಮಾತನಾಡಿಲ್ಲ. ಅನಿವಾರ್ಯವಾಗಿ ನನ್ನ ನೋವನ್ನು ಹೇಳಿದ್ದೇನೆ. ಪಕ್ಷದಲ್ಲಿ ಶಿಸ್ತು ಪಾಲನಾ ಸಮಿತಿ ಇದೆ ಎಂದು ನಿನ್ನೆ ಮಧ್ಯಾಹ್ನ ನನಗೆ ಗೊತ್ತಾಗಿದ್ದು. ರೇಣುಕಾಚಾರ್ಯಗೆ ನೋಟಿಸ್ ಕೊಟ್ಟ ಮೇಲೆ ಈ ಸಮಿತಿ ಇದೆ ಎಂದು ಗೊತ್ತಾಯ್ತು! ನನಗೊಬ್ಬನಿಗೆ 6ಏಕೆ ನೋಟಿಸ್ ಕೊಟ್ಟಿದ್ದಾರೆ? ಬೇರೆಯವರು ಎಷ್ಟು ಮಂದಿ ಮಾತನಾಡಿದ್ದಾರೆ, ಅವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ? ಪಕ್ಷ ಕಟ್ಟಿದ ಯಡಿಯೂರಪ್ಪ ನವರನ್ನು ಇಳಿಸಿದ್ರು. ಈಶ್ವರಪ್, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಯವರನ್ನು ಮುಗಿಸಿದ್ರಿ. ಯಡಿಯೂರಪ್ಪನವರಿಗೆ ಎಲ್ಲಾ ಸಮುದಾಯವನ್ನು ತೆಗೆದುಕೊಂಡು ಹೋಗುವ ಶಕ್ತಿ ಇದೆ. ಯಡಿಯೂರಪ್ಪನವರ ಪರ ಯಾರು ವಾಸ್ತವಾಂಶ ಹೇಳ್ತಾರೋ ಅವರನ್ನು ದೂರ ಗುರಿ ಮಾಡುವ ಕೆಲಸ ಮಾಡ್ತಾರೆ ಎಮದು ರೇಣುಕಾಚಾರ್ಯ ಕಿಡಿಕಾರಿದರು.
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

