ಮೈಸೂರಿಗೆ ಬಂದ ವಿಜಯೇಂದ್ರರನ್ನು ಕಂಡು ಮಾತಾಡಲು ಧಾವಿಸಿದ ಯತ್ನಾಳ್ ಬಣದ ಪ್ರತಾಪ್ ಸಿಂಹ

|

Updated on: Feb 24, 2025 | 12:54 PM

ಕಳೆದ ವಾರ ಕುಮಾರ ಬಂಗಾರಪ್ಪ ಮನೆಯಲ್ಲಿ ಭಿನ್ನರು ಸಭೆ ಸೇರಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ್ದ ಪ್ರತಾಪ್ ಸಿಂಹ, ಪ್ರೆಸ್​​ನವರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಪಲಾಯನಗೈದಿದ್ದ ಬಸನಗೌಡ ಯತ್ನಾಳ್​ರನ್ನ ಸಮರ್ಥಿಸಿಕೊಂಡಿದ್ದನ್ನು ನೋಡಿದವರಿಗೆ ಇವತ್ತು ವಿಜಯೇಂದ್ರ ಜೊತೆ ಮಾತಾಡುತ್ತಿರುವುದನ್ನು ಕಂಡು ಕೊಂಚ ಆಶ್ಚರ್ಯವಾಗಿರುವುದಂತೂ ಸತ್ಯ.

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ವಿಜಯಪುರದ ಶಾಸಕ ಬಸನಗೌಡ ಬಣವೋ ಇಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪರವೋ? ಅಸಲಿಗ ಅವರು ಬಸನಗೌಡ ಯತ್ನಾಳ್ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ ಮತ್ತು ಬಣ ನಡೆಸುವ ಎಲ್ಲ ಮೀಟಿಂಗ್, ವಕ್ಫ್ ಹೋರಾಟದಲ್ಲಿ ಭಾಗಿಯಾಗುತ್ತಾರೆ ಮತ್ತು ಟೀಮಿನೊಂದಿಗೆ ದೆಹಲಿ ಹೋಗಿ ಅಲ್ಲೂ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡುತ್ತಾರೆ. ಅದರೆ ಇವತ್ತು ವಿಜಯೇಂದ್ರ ಮೈಸೂರಿಗೆ ಬಂದಿರುವುದನ್ನು ಕೇಳಿಸಿಕೊಂಡ ತಕ್ಷಣ ಅವರನ್ನು ಕಂಡು ಮಾತಾಡಲು ಮಾಜಿ ಸಂಸದ ಓಡೋಡಿ ಬರುತ್ತಾರೆ. ವಿಜಯೇಂದ್ರ ಮತ್ತು ಪ್ರತಾಪ್ ನಡುವೆ ನಡೆಯುವ ಆತ್ಮೀಯ ಸ್ತರದ ಮಾತುಗಳನ್ನು ಗಮನಿಸಿದರೆ ಅವರ ನಡುವೆ ಭಿನ್ನಾಭಿಪ್ರಾಯಗಳಿವೆ ಅಂತ ಅನಿಸಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯತ್ನಾಳ್ ಬಣದವರೆಂದು ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಇವತ್ತಿನ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡರು