ಬೆಳಗಾವಿಯಲ್ಲಿ ಭಾಷೆಗೆ ಸಂಬಂಧಿಸಿದ ಎಲ ತಂಟೆ ತಗಾದೆಗಳನ್ನು ನಾವು ಕಿತ್ತು ಹಾಕಿದ್ದೇವೆ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ತಪ್ಪಿತಸ್ಥರಿಗೆ ಶಿಕ್ಷೆ ಆಗೇ ಆಗುತ್ತದೆ, ಘಟನೆಯ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ತಾನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿದ್ದು ಈಗಾಗಲೇ 4-5 ಆರೋಪಿಗಳನ್ನು ಬಂಧಿಸಲಾಗಿದೆ ಎಂದ ಲಕ್ಷ್ಮಿ ಹೆಬ್ಬಾಳ್ಕರ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಅತ್ಯಂತ ಕಠೋರ ಶಬ್ದಗಳಲ್ಲಿ ಖಂಡಿಸುವುದಾಗಿ ಹೇಳಿದರು. ಬೆಳಗಾವಿಯಿಂದ ವಿಧಾನ ಸಭೆಗೆ ಆಯ್ಕೆಯಾದವರು ಎಂಇಎಸ್ ಪುಂಡರ ಬಗ್ಗೆ ಕಠೋರ ಶಬ್ದಗಳಲ್ಲಿ ಪ್ರಾಯಶಃ ಮಾತಾಡಲಾರರು.
ಬೆಳಗಾವಿ: ಜಿಲ್ಲೆಯಲ್ಲಿ ಭಾಷೆಗೆ ಸಂಬಂಧಿಸಿದ ಎಲ್ಲ ತಂಟೆ ತಗಾದೆಗಳನ್ನು ತಮ್ಮ ಸರ್ಕಾರ ಕಿತ್ತುಹಾಕಿದೆ, ಯಾರೋ ನಾಲ್ಕೈದು ಪುಂಡರು ಕರ್ತವ್ಯನಿರತ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದಾಕ್ಷಾಣ ಅದು ಭಾಷೆಗೆ ಸಂಬಂಧಿಸಿದ ವಿವಾದ ಅಲ್ಲ, ಭಾಷೆಯ ಹೆಸರಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದನ್ನು ತಾನು ಖಂಡಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ತಾನು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಜನ ಮರಾಠಿ ಭಾಷಿಕರಿದ್ದಾರೆ, ಅವರೆಲ್ಲ ಕನ್ನಡ ತನಗೆ ವೋಟು ನೀಡಿ ಗೆಲ್ಲಿಸಿದ್ದಾರೆ, ಅವರೆಲ್ಲ ಕನ್ನಡ ಮತ್ತು ಕನ್ನಡಿಗರ ವಿರೋಧಿಗಳು ಅಂತ ಹೇಳಲಾದೀತೇ ಎಂದು ಸಚಿವೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೈದ್ಯರು ಬರಬೇಡವೆಂದು ಕಳಕಳಿಯಿಂದ ಬೇಡಿಕೊಂಡರೂ ಲಕ್ಷ್ಮಿ ಹೆಬ್ಬಾಳ್ಕರ್ ನೋಡಲು ಜನಪ್ರತಿನಿಧಿಗಳ ದಂಡು!