IND vs PAK: ಪಾಕ್ ಸೋಲಿನ ಬಗ್ಗೆ ಕೇಳಿದಾಗ, ದುಃಖದಲ್ಲಿ ಹಾಡೇಳಿದ ಪಾಕಿಸ್ತಾನ್ ಮಾಜಿ ಆಟಗಾರರು..!
IND vs PAK: ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ 241 ರನ್ ಕಲೆಹಾಕಿದರೆ, ಭಾರತ ತಂಡವು 42.3 ಓವರ್ಗಳಲ್ಲಿ 244 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್ಗೇರುವುದು ಬಹುತೇಕ ಖಚಿತವಾಗಿದ್ದರೆ, ಅತ್ತ ಪಾಕಿಸ್ತಾನ್ ತಂಡದ ನಾಕೌಟ್ ಕನಸು ಕ್ಷೀಣಿಸಿದೆ.
ಬಹುನಿರೀಕ್ಷಿತ ಪಂದ್ಯದಲ್ಲಿ ನಿರೀಕ್ಷೆಯಂತೆ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಅಮೋಘ ಗೆಲುವು ದಾಖಲಿಸಿದೆ. ದುಬೈನಲ್ಲಿ ನಡೆದ ಈ ಪಂದ್ಯವನ್ನು ಟೀಮ್ ಇಂಡಿಯಾ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಮೊದಲು ಬ್ಯಾಟ್ ಮಾಡಿ ಕಲೆಹಾಕಿದ್ದು ಕೇವಲ 241 ರನ್ಗಳು.
ಇತ್ತ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿದ್ದ ಕಾರಣ ಎಲ್ಲರೂ ಪಾಕಿಸ್ತಾನ್ ವೇಗಿಗಳು ಕಮಾಲ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಟೀಮ್ ಇಂಡಿಯಾ ಬ್ಯಾಟರ್ಗಳ ಆರ್ಭಟದ ಮುಂದೆ ಪಾಕ್ ಬೌಲರ್ಗಳು ಕಂಗಾಲಾದರು. ಪರಿಣಾಮ ಭಾರತ ತಂಡವು 42.3 ಓವರ್ಗಳಲ್ಲಿ 244 ರನ್ ಬಾರಿಸಿ 6 ವಿಕೆಟ್ಗಳ ಜಯ ಸಾಧಿಸಿತು.
ಈ ಸೋಲಿನ ಬೆನ್ನಲ್ಲೇ ಚಾನೆಲ್ ಚರ್ಚೆಯೊಂದರಲ್ಲಿ ಕಾಣಿಸಿಕೊಂಡಿದ್ದ ಪಾಕಿಸ್ತಾನ್ ತಂಡದ ಮಾಜಿ ನಾಯಕರುಗಳಾದ ಮೊಹಮ್ಮದ್ ಹಫೀಝ್ ಹಾಗೂ ಶೊಯೆಬ್ ಮಲಿಕ್ ನಿಮ್ಮ ಅನಿಸಿಕೆಗಳೇನು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಶೊಯೆಬ್ ಮಲಿಕ್ ‘ದಿಲ್ ಕೆ ಅರ್ಮಾನ್ ಆನ್ಸೂನ್ ಮೇ ಬಹ್ ಗಯೇ’ ಹಾಡನ್ನು ಹಾಡುತ್ತಾ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಅತ್ತ ಮೊಹಮ್ಮದ್ ಹಫೀಝ್ ಕೂಡ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ. ಇದೀಗ ಪಾಕಿಸ್ತಾನ್ ತಂಡದ ಮಾಜಿ ಆಟಗಾರರ ರಿಯಾಕ್ಷನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮ್ಯಾನ್ಮಾರ್ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ

ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ

ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ

ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
