AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಶೇಖರ್​ ಗೆಟ್​ ಲಾಸ್ಟ್​​ ಫ್ರಾಮ್​ ಕರ್ನಾಟಕ: ಎಡಿಜಿಪಿ ವಿರುದ್ಧ ಸಿಂಹ ಪ್ರತಾಪ

ಚಂದ್ರಶೇಖರ್​ ಗೆಟ್​ ಲಾಸ್ಟ್​​ ಫ್ರಾಮ್​ ಕರ್ನಾಟಕ: ಎಡಿಜಿಪಿ ವಿರುದ್ಧ ಸಿಂಹ ಪ್ರತಾಪ

ವಿವೇಕ ಬಿರಾದಾರ
|

Updated on: Oct 01, 2024 | 12:09 PM

Share

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರನ್ನು ಹಂದಿಗೆ ಹೋಲಿಸಿ ಟೀಕಿಸಿದ್ದ ಎಡಿಜಿಪಿ ಚಂದಶೇಖರ್ ವಿರುದ್ಧ ಮಾಜಿ ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ಮಾಡಿದ್ದಾರೆ. ಮಿಸ್ಟರ್ ಚಂದ್ರಶೇಖರ್ ಭಾಷೆ ಮೇಲೆ ಹಿಡಿತ ಇರಲಿ. ಹಂದಿಗಳು ಬೇಕಿದ್ದರೇ ಆಂಧ್ರಕ್ಕೆ ಹೋಗಿ ಎಂದು ಪ್ರತಾಪ್​​ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು, ಅಕ್ಟೋಬರ್​​ 01: ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಹಂದಿಗೆ ಹೋಲಿಸಿ ಟೀಕಿಸಿದ್ದ ಎಡಿಜಿಪಿ ಚಂದಶೇಖರ್ (ADGP Chandrashekhar) ವಿರುದ್ಧ ಮಾಜಿ ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ಮಾಡಿದ್ದಾರೆ. ಚಂದ್ರಶೇಖರ್​ ಗೆಟ್​ ಲಾಸ್ಟ್​​ ಫ್ರಾಮ್​ ಕರ್ನಾಟಕ ಎಂದು ಪ್ರತಾಪ್​ ಸಿಂಹ (Pratap Simha)​ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳಿಗಿಂತ ಅಧಿಕಾರಿಗಳೇ ಹೆಚ್ಚು ಭ್ರಷ್ಟರು. ಚಂದ್ರಶೇಖರ್​ ಅವರ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಅವರ ಬಳಿ ದಾಖಲೆ ಇರಬಹುದು. ಅದಕ್ಕೆ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಅಧಿಕಾರಿ ಚಂದ್ರಶೇಖರ್ ಸತ್ಯಸಂಧನಾಗಿದ್ದರೇ, ಹೆಚ್​ಡಿ ಕುಮಾರಸ್ವಾಮಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡಲಿ. ಚಂದ್ರಶೇಖರ್ ಕರ್ನಾಟಕ ಕೇಡರ್ ಅಧಿಕಾರಿ ಅಲ್ಲ ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದಾರೆ. ನೀವು ಯಾಕೆ ಕರ್ನಾಟಕದಲ್ಲಿದ್ದಿರಿ? ಚಂದ್ರಶೇಖರ್ ನೀವು ಈ ರಾಜ್ಯದಿಂದ ತೊಲಗಿ, ಗೆಟ್ ಲಾಸ್ಟ್ ಎಂದರು.

ಸಿಎಂ ಹಾಗೂ ಡಿಸಿಎಂಗೆ ಯಾರಾದರೂ ಅಧಿಕಾರಿ ಹಂದಿ ಅಂಥ ಕರೆದಿದ್ದರೆ ಸುಮ್ಮನೆ ಇರುತ್ತಿದ್ದರಾ? ಸರ್ಕಾರ ಮೊದಲು ಚಂದ್ರಶೇಖರ್ ಅವರನ್ನು ಅಮಾನತು ಮಾಡಬೇಕು. ಕನ್ನಡಿಗ ಹೆಚ್​ ಡಿ ಕುಮಾರಸ್ವಾಮಿ ಅವರ ಮೇಲೆ ಏನೇನೋ ಮಾತಾಡಿದರೆ ಸುಮ್ಮನೆ ಬಿಡಲ್ಲ. ಮಿಸ್ಟರ್ ಚಂದ್ರಶೇಖರ್ ಭಾಷೆ ಮೇಲೆ ಹಿಡಿತ ಇರಲಿ. ಹಂದಿಗಳು ಬೇಕಿದ್ದರೇ ಆಂಧ್ರಕ್ಕೆ ಹೋಗಿ. ಅಲ್ಲೆ ಜಾಸ್ತಿ ಹಂದಿಗಳು ಇರುವುದು. ಚಂದ್ರಶೇಖರ್ ನಿಮ್ಮ ಉದ್ಧಟತನ ನಮ್ಮ ಬಳಿ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ