ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ-ಸಿದ್ದರಾಮಯ್ಯ ಸಹೋದರ

‘ನಮ್ಮ ಅಣ್ಣನಿಗೆ ಆಸ್ತಿ ಆಸೆ ಇಲ್ಲ, ನಮ್ಮ ಅಪ್ಪನ ಜಮೀನೇ ಸಾಕಷ್ಟಿದೆ. ನಮ್ಮ ಅಪ್ಪನ ಜಮೀನನ್ನೇ ನಾವು ಭಾಗ ತೆಗೆದುಕೊಂಡಿದ್ದೇವೆ. ಅದನ್ನು ಹೊರತುಪಡಿಸಿ ಊರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ನಮ್ಮಣ್ಣ ರಾಜೀನಾಮೆ ಕೊಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದೇಗೌಡ ಅವರು ಹೇಳಿದ್ದಾರೆ.

ಮುಡಾ ಪ್ರಕರಣ: ಯಡಿಯೂರಪ್ಪ ಪುತ್ರ, ಕುಮಾರಸ್ವಾಮಿಯಿಂದ ಈ ಕಳಂಕ-ಸಿದ್ದರಾಮಯ್ಯ ಸಹೋದರ
|

Updated on:Oct 01, 2024 | 2:57 PM

ಮೈಸೂರು, ಅ.01: ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಎಫ್​ಐಆರ್ ದಾಖಲು ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸಹೋದರ ಸಿದ್ದೇಗೌಡ, ‘ರಾಜಕಾರಣದಲ್ಲಿ ಇಷ್ಟು ವರ್ಷದಿಂದ ನಮ್ಮ ಅಣ್ಣ ತಪ್ಪಿನಲ್ಲಿ ಸಿಲುಕಿಲ್ಲ. ಇದರಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮುಡಾ ವಿಚಾರ ನನಗೆ ಅಷ್ಟಾಗಿ ಗೊತ್ತಿಲ್ಲ. ಆದ್ರೆ, ಸೈಟ್ ವಿಚಾರ ಅತ್ತಿಗೆಗೆ ಗೊತ್ತಿರಬಹುದು, ಗೊತ್ತಿತ್ತು ಅಂತಾನೂ ಹೇಳಲ್ಲ. ಸೈಟ್ ವಿಚಾರ ನಮ್ಮ ಅಣ್ಣನಿಗೆ ಗೊತ್ತಿಲ್ಲ ಅನಿಸುತ್ತೆ. ಇದೀಗ ಸೈಟ್ ವಾಪಸ್​ ಕೊಡಲಾಗಿದೆ. ಸೈಟ್​ ಕೊಟ್ಟ ಮೇಲೆ ರಾಜೀನಾಮೆ ಯಾಕೆ ಕೊಡಬೇಕು?. ಇನ್ನು ಯಡಿಯೂರಪ್ಪ ಪುತ್ರ ಹಾಗೂ ಹೆಚ್​ಡಿ ಕುಮಾರಸ್ವಾಮಿ ಅವರಿಂದ ಈ ಕಳಂಕ ಬಂದಿದ್ದು, ಹೇಗಾದ್ರೂ ಮಾಡಿ ಸಿಎಂರನ್ನ ಕೆಳಗಿಳಿಸಬೇಕೆಂದು ಹೀಗೆ ಮಾಡ್ತಿದ್ದಾರೆ ಎಂದಿದ್ದಾರೆ.

ಇನ್ನು ನಮ್ಮ ಅಣ್ಣನಿಗೆ ಆಸ್ತಿ ಆಸೆ ಇಲ್ಲ, ನಮ್ಮ ಅಪ್ಪನ ಜಮೀನೇ ಸಾಕಷ್ಟಿದೆ. ನಮ್ಮ ಅಪ್ಪನ ಜಮೀನನ್ನೇ ನಾವು ಭಾಗ ತೆಗೆದುಕೊಂಡಿದ್ದೇವೆ. ಅದನ್ನು ಹೊರತುಪಡಿಸಿ ಊರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ನಮ್ಮ ಅತ್ತಿಗೆಗೆ ಸೈಟ್ ಬಂದಿರುವ ವಿಚಾರ ಕೂಡ ನಮಗೆ ಗೊತ್ತಿಲ್ಲ. ನಮ್ಮಣ್ಣ ರಾಜೀನಾಮೆ ಕೊಡಬಾರದು ಎಂದು ಸಿದ್ದೇಗೌಡ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Tue, 1 October 24

Follow us
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
ಸಿಎಂ ಬದಲಾಯಿಸುವ ಸನ್ನಿವೇಶ ರಾಜ್ಯದಲ್ಲಿ ಸೃಷ್ಟಿಯಾಗಿಲ್ಲ: ಜಿ ಪರಮೇಶ್ವರ್
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
IND vs BAN: ಡೋಲು ಬಜಾನದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಸ್ವಾಗತ
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಪುನಃ ಶುರು, ಬೆಂಗಳೂರು ನಿವಾಸಿಗಳೇ ಎಚ್ಚರ!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಲೋಕಾಯುಕ್ತ ದಾಳಿ, ಹುಮ್ನಾಬಾದ್ ಸಾರಿಗೆ ತನಿಖಾ ಕಚೇರಿ ಸಿಬ್ಬಂದಿಗೆ ಶಾಕ್!
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಬಿಗ್ ಬಾಸ್​ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ?
ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್
ಕ್ಯಾಪ್ಟನ್​ಗೆ ಲೈನ್ ಹಾಕೋಕೆ ಆರಂಭಿಸಿದ ಜಗದೀಶ್
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ
ನವರಾತ್ರಿ 6ನೇ ದಿನ ಕಾತ್ಯಾಯಿನಿ ದೇವಿ ಆರಾಧನೆ ಮಹತ್ವ ತಿಳಿಯಿರಿ