ಮುಡಾ ಹಗರಣ: ಸಿದ್ದರಾಮಯ್ಯ ಬಗ್ಗೆ ಆಪ್ತ ಸ್ನೇಹಿತನ ಮನದ ಮಾತು
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಬಾಲ್ಯ ಸ್ನೇಹಿತ ಕರಿಯಪ್ಪ, ‘ಮುಡಾ ಅಧ್ಯಕ್ಷ ಮರಿಗೌಡನಿಂದಲೇ ಇಷ್ಟೆಲ್ಲಾ ಆಗಿರುವುದು. ಮರಿಗೌಡ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಹೇಳಿದ್ದಾರೆ.
ಮೈಸೂರು, ಅ.01: ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ಸಿಎಂ ಬಾಲ್ಯ ಸ್ನೇಹಿತ ಕರಿಯಪ್ಪ ಹೇಳಿದ್ದಾರೆ. ಇಂದು(ಮಂಗಳವಾರ) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯಗೆ 40 ವರ್ಷದಿಂದ ಯಾವುದೇ ಕಳಂಕ ಇರಲಿಲ್ಲ. ಈಗ ಕುಮಾರಸ್ವಾಮಿ ಗೆದ್ದು ದೊಡ್ಡದಾಗಿ ಮಾತನಾಡುತ್ತಿದ್ದಾರೆ. ಸಿಎಂ ಕುರುಬ ಸಮುದಾಯಕ್ಕಷ್ಟೇ ಒಳ್ಳೇದು ಮಾಡಿಲ್ಲ, ಎಲ್ಲಾ ಜಾತಿಯವರಿಗೂ ಒಳ್ಳೆಯದನ್ನು ಮಾಡಿದ್ದಾರೆ. ಅವರ ಜೊತೆಯೇ ಉಂಡು ತಿಂದವರೆ ಬೆನ್ನಿಗೆ ಚೂರಿ ಹಾಕಿದರು. ಸೈಟ್ ವಿಚಾರವೇ ನಮಗೆ ಸಾಕಷ್ಟು ಬೇಸರವಾಯ್ತು. ಮುಡಾ ಅಧ್ಯಕ್ಷ ಮರಿಗೌಡನಿಂದಲೇ ಇಷ್ಟೆಲ್ಲಾ ಆಗಿರುವುದು. ಮರಿಗೌಡ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಶ್ವನಾಥ್ ಮಾತನ್ನು ಸಿಎಂ ಕೇಳಿದ್ದರೆ ಈ ಆರೋಪ ಬರುತ್ತಿರಲಿಲ್ಲ. ಆದ್ರೆ, ಈಗ ಸೈಟ್ ವಾಪಸ್ ಕೊಡಲೇಬಾರದು ಅನಿಸುತ್ತೆ ಎಂದು ಕರಿಯಪ್ಪ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ