Namma Metro: ಹಸಿರು ಮಾರ್ಗದ ನಾಗಸಂದ್ರ, ಮಾದಾವರ ನಮ್ಮ ಮೆಟ್ರೋ ರೆಡಿ; ಸಂಚಾರಕ್ಕೆ ಕೌಂಟ್ ಡೌನ್
ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ನಾಗಸಂದ್ರ ಹಾಗೂ ಮಾದಾವರ ನಮ್ಮ ಮೆಟ್ರೋ ರೆಡಿಯಾಗಿದ್ದು, ಸಂಚಾರಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಇನ್ನು ಮೆಟ್ರೋ ನಿಲ್ದಾಣದಲ್ಲಿ ಬಿರುಸಿನ ಕೆಲಸ ನಡೆಯುತ್ತಿದ್ದು, ಬಿಎಂಆರ್ಸಿಎಲ್(BMRCL) ಮಾದವಾರ ಹೆಸರಿನ ನಿಲ್ದಾಣದ ನಮ್ಮ ಮೆಟ್ರೋ ಬೋರ್ಡ್ ಅಳವಡಿಸಿದೆ.
ಬೆಂಗಳೂರು ಗ್ರಾಮಾಂತರ, ಅ.01: ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ನಾಗಸಂದ್ರ ಹಾಗೂ ಮಾದಾವರ ನಮ್ಮ ಮೆಟ್ರೋ ರೆಡಿಯಾಗಿದ್ದು, ಸಂಚಾರಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಇನ್ನು ಮೆಟ್ರೋ ನಿಲ್ದಾಣದಲ್ಲಿ ಬಿರುಸಿನ ಕೆಲಸ ನಡೆಯುತ್ತಿದ್ದು, ಬಿಎಂಆರ್ಸಿಎಲ್(BMRCL) ಮಾದವಾರ ಹೆಸರಿನ ನಿಲ್ದಾಣದ ನಮ್ಮ ಮೆಟ್ರೋ ಬೋರ್ಡ್ ಅಳವಡಿಸಿದೆ. ಇದು 3.7ಕಿ.ಮೀ ಉದ್ದದಲ್ಲಿ ಸಿದ್ದವಾಗಿರುವ ನಾಗಸಂದ್ರ ಟು ಮಾದವಾರ ಮಾರ್ಗವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಧ್ಯದಲ್ಲಿ ಚಾಲನೆ ನೀಡಲಿದ್ದಾರೆ. ಕಾಮಗಾರಿ 2017 ರಲ್ಲಿ ಬಿಎಂಆರ್ಸಿಎಲ್ ಆರಂಭ ಮಾಡಿತ್ತು. ಭೂಸ್ವಾಧೀನ ಮತ್ತು ಗುತ್ತಿಗೆದಾರರ ಆರ್ಥಿಕ ಸಂಕಷ್ಟ ಕಾರಣದಿಂದ ತಡವಾಗಿತ್ತು. ಏಳು ವರ್ಷಗಳ ಬಳಿಕ ಕಾಮಗಾರಿ ಕೊನೆಗೂ ಅಂತ್ಯವಾಗುವ ಹಂತಕ್ಕೆ ತಲುಪಿದೆ. ನೆಲಮಂಗಲ, ಮಾಕಳಿ, ಮಾದನಾಯಕನಹಳ್ಳಿ, ಹಾಸನ, ತುಮಕೂರಿನಿಂದ ನಗರಕ್ಕೆ ಬರುವವರೆಗೆ ಮೆಟ್ರೋ ಅನುಕೂಲವಾಗಲಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:42 pm, Tue, 1 October 24