ನಮ್ಮ ಮೆಟ್ರೋ ಹಸಿರು ಮಾರ್ಗ ಶೀಘ್ರ ವಿಸ್ತರಣೆ: ಸದ್ಯದಲ್ಲೇ ನಾಗಸಂದ್ರ – ಮಾದಾವರ ನಡುವೆ ಸಂಚಾರ

ಮಾದಾವರ ಜನರು ಐದು ವರ್ಷಗಳಿಂದ ಬೆಂಗಳೂರಿನ ಶರವೇಗದ ಸಂಚಾರ ಸರದಾರ ನಮ್ಮ ಮೆಟ್ರೋಗಾಗಿ ಕಾದು ಕುಳಿತಿದ್ದರು. ನಗರಕ್ಕೆ ವೇಗವಾಗಿ ತಲುಪಬಹುದು ಎಂದು ವರ್ಷಗಳಿಂದ ಕಾಯುತ್ತಾ ಇದ್ದರು. ಕಾದು ಕುಳಿತಿದ್ದ ಜನರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕೇ ಬಿಟ್ಟಿದೆ. ಸದ್ಯದಲ್ಲೇ ನಾಗಸಂದ್ರ ಟು ಮಾದಾವರ ನಡುವೆ ಮೆಟ್ರೋ ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗ ಶೀಘ್ರ ವಿಸ್ತರಣೆ: ಸದ್ಯದಲ್ಲೇ ನಾಗಸಂದ್ರ - ಮಾದಾವರ ನಡುವೆ ಸಂಚಾರ
ನಮ್ಮ ಮೆಟ್ರೋ ಹಸಿರು ಮಾರ್ಗ
Follow us
Kiran Surya
| Updated By: Ganapathi Sharma

Updated on: Jul 12, 2024 | 7:07 AM

ಬೆಂಗಳೂರು, ಜುಲೈ 12: ನಮ್ಮ ಮೆಟ್ರೋ ಈಗ ಬೆಂಗಳೂರಿನಲ್ಲಿ ವೇಗವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ. ಅತ್ತ ಒಂದಿಲ್ಲೊಂದು ಕಾರಣದಿಂದ ವಿಳಂಬವಾಗುತ್ತಿದ್ದ ನಾಗಸಂದ್ರದಿಂದ ಮಾದವಾರ ಬಿಐಇಸಿ ಮೆಟ್ರೋ ನಿಲ್ದಾಣವರೆಗಿನ 3.2 ಕಿಮೀ ವಿಸ್ತರಿತ ಮಾರ್ಗ ಜನ ಬಳಕೆಗೆ ಮುಕ್ತ ಆಗುವ ಕಾಲ ಸನ್ನಿಹಿತದಲ್ಲಿದೆ. ಸದ್ಯದಲ್ಲೇ ಲೋಕಾರ್ಪಣೆ ಮಾಡಲು ತಯಾರಿ ನಡೆಯುತ್ತಿದೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ಸಿಲ್ಕ್ ಇನ್ಸ್ಟಿಟ್ಯೂಟ್​ನಿಂದ ಮಾದಾವರ ನಡುವಣ ಸಂಚಾರ ಸುಗಮವಾಗಲಿದೆ.

ನಾಗಸಂದ್ರ – ಮಾದಾವರ ಮೆಟ್ರೋ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿರುವ ಬಗ್ಗೆ ಬಿಎಂಆರ್​​ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚವ್ಹಾಣ್ ಸುಳಿವು ನೀಡಿದ್ದಾರೆ.

ನಮ್ಮ ಮೆಟ್ರೋ ಹಸಿರು ಮಾರ್ಗದ ಶೀಘ್ರ ವಿಸ್ತರಣೆಯತ್ತ ಬಿಎಂಆರ್​​ಸಿಎಲ್ ಗಮನಹರಿಸಿದೆ. ಈ ಮಾರ್ಗ ವಿಸ್ತರಣೆ ಮಾಡುವುದರಿಂದ ನೆಲಮಂಗಲ ಪ್ರಯಾಣಿಕರಿಗೆ ನಮ್ಮ ಮೆಟ್ರೋ ಮತ್ತಷ್ಟು ಹತ್ತಿರ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ನೆಲಮಂಗಲ – ಬೆಂಗಳೂರು ಪ್ರಯಾಣ ಸುಲಭ

ಮಾದಾವರ ಮೆಟ್ರೋ ಸ್ಟೇಷನ್​​ನಿಂದ ನೆಲಮಂಗಲಕ್ಕೆ ಕೇವಲ ಆರು ಕಿಮೀ ಮಾತ್ರ ದೂರವಿದೆ. ಸಿಟಿಗೆ ಹೋಗಿ ಬರುವುದಕ್ಕೆ ಸುಲಭ ಆಗುತ್ತದೆ. ಮಂಜುನಾಥ ನಗರ, ಚಿಕ್ಕ ಬಿದರಕಲ್ಲು, ಮಾದಾವರವರೆಗೆ ಸಂಪರ್ಕ ಕಲ್ಪಿಸಲಿರುವ ಹಸಿರು ಮಾರ್ಗ ಇದಾಗಿದ್ದು, ಸದ್ಯ ಮಾರ್ಗದಲ್ಲಿ ಸಿಗ್ನಲಿಂಗ್ ಟೆಸ್ಟ್ ಕೆಲಸ ಪ್ರಗತಿಯಲ್ಲಿದೆ.

ನಾಗಸಂದ್ರ – ಮಾದವಾರ ಕಾಮಗಾರಿ ವಿಳಂಬಕ್ಕೆ ಕಾರಣಗಳೇನು?

ಮಾರ್ಗದ ವಿಸ್ತರಣೆ ಕಾಮಗಾರಿ ಆರಂಭದಿಂದಲೂ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ನಾಗಸಂದ್ರ – ಮಾದವಾರ ನಡುವಿನ ಮೂರು ಕಿಮೀ ಮೆಟ್ರೋ ಕಾಮಗಾರಿ 2017 ರಲ್ಲಿ ಪ್ರಾರಂಭವಾಯಿತು. 2019 ರ ಮಧ್ಯದ ವೇಳೆಗೆ ಕಾಮಗಾರಿ ಮುಗಿಸುವ ಗುರಿ ಹೊಂದಿತ್ತಾದರೂ, ಭೂಸ್ವಾಧೀನದಲ್ಲಿ ವಿಳಂಬವಾದ ಕಾರಣ ಕಾಮಗಾರಿ ವಿಳಂಬವಾಗುತ್ತಲೇ ಸಾಗಿತು. ಭೂಸ್ವಾಧೀನ ಸಮಸ್ಯೆಗಳು, ವಿಶೇಷವಾಗಿ ನೈಸ್‌ ರಸ್ತೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬ ಮತ್ತು ಕೋವಿಡ್ ಸಾಂಕ್ರಾಮಿಕ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಕಾರಣಗಳಾಗಿವೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 4 ದಿನ ಸಂಚಾರ ಬಂದ್​: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್ ​ಪೊಲೀಸ್​

ನಾಗಸಂದ್ರ – ಮಾದವಾರ ಮೆಟ್ರೋ ಮಾರ್ಗ ಲೋಕಾರ್ಪಣೆ ಬಗ್ಗೆ ಸ್ಥಳೀಯ ನಿವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಸದ್ಯದಲ್ಲೇ ನಮ್ಮ ಮೆಟ್ರೋ ನಾಗಸಂದ್ರ – ಮಾದವಾರ ಸಂಚಾರ ಆರಂಭವಾಗುವ ಸುಳಿವು ದೊರೆತಿದ್ದು, ಇದರಿಂದ ಜನರ 5 ವರ್ಷದ ಕಾಯುವಿಕೆ ಕೊನೆಗೂ ಅಂತ್ಯ ಆಗುವ ಲಕ್ಷಣ ಕಾಣಿಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ