ವಾಲ್ಮೀಕಿ ಹಗರಣ: ಇಡಿ ಸುಳಿಯಲ್ಲಿ ಸಿಲುಕಿರುವ ಬಸನಗೌಡ ದದ್ದಲ್, ನಾಗೇಂದ್ರಗೆ ಎಸ್​ಐಟಿ ಶಾಕ್

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಇದೀಗ ಮಾಜಿ ಸಚಿವ ಬಿ.ನಾಗೇಂದ್ರ(B. Nagendra) ಹಾಗೂ ಶಾಸಕ ದದ್ದಲ್​ಗೂ ಎಸ್ಐಟಿ(SIT) ಮತ್ತೆ ನೋಟಿಸ್ ನೀಡಿದೆ. ಈ ಮೂಲಕ ಇಬ್ಬರಿಗೂ ಮೂರನೇ ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿದಂತಾಗಿದೆ.

ವಾಲ್ಮೀಕಿ ಹಗರಣ: ಇಡಿ ಸುಳಿಯಲ್ಲಿ ಸಿಲುಕಿರುವ ಬಸನಗೌಡ ದದ್ದಲ್, ನಾಗೇಂದ್ರಗೆ ಎಸ್​ಐಟಿ ಶಾಕ್
ಬಿ.ನಾಗೇಂದ್ರ, ಬಸನಗೌಡ ದದ್ದಲ್
Follow us
|

Updated on: Jul 10, 2024 | 6:47 PM

ಬೆಂಗಳೂರು, ಜು.10: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ(B. Nagendra) ಹಾಗೂ ಶಾಸಕ ದದ್ದಲ್​ಗೂ ಎಸ್ಐಟಿ(SIT) ಮತ್ತೆ ನೋಟಿಸ್ ನೀಡಿದೆ. ಇಂದು ವಿಚಾರಣೆಗೆ ಗೈರಾದ ಹಿನ್ನೆಲೆ ನೋಟಿಸ್ ಜಾರಿಗೊಳಿಸಲಾಗಿದ್ದು, ನಾಳೆ(ಜು.11) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈ ಮೂಲಕ ಇಬ್ಬರಿಗೂ ಮೂರನೇ ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿದಂತಾಗಿದೆ.

ಇಂದು (ಜು.10) ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್​​ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಪಿಎ ಹರೀಶ್‌ನನ್ನು ಬಂಧಿಸಿದ್ದಾರೆ. ಇನ್ನು ವಾಲ್ಮೀಕಿ ನಿಗಮ ಹಗರಣ ಕೇಸ್​ಗೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದ್ದು, ಎಸ್​ಐಟಿಯಿಂದ 11, ಇಡಿಯಿಂದ ಓರ್ವನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾಗೇಂದ್ರ ಪಿಎ ಹರೀಶ್​ ಬಂಧನ, ಯಾರು ಈತ? ಇಲ್ಲಿದೆ ವಿವರ

ಪ್ರಕಣದಲ್ಲಿ ಬಂಧನ ಆಗಿರೋರು ವಿವರ ಇಲ್ಲಿದೆ?

1. ಸತ್ಯನಾರಾಯಣ, FFCCSL ಅಧ್ಯಕ್ಷ

2.ಸತ್ಯನಾರಾಯಣ ವರ್ಮಾ, 3. ಚಂದ್ರಮೋಹನ್, 4. ಶ್ರೀನಿವಾಸ್ 5. ಜಗದೀಶ್ – ಮಧ್ಯವರ್ತಿಗಳು

6.ಜೆ.ಜೆ.ಪದ್ಮನಾಭ್‌ – ವಾಲ್ಮೀಕಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ)

7. ಪರಶುರಾಮ ದುರುಗಣ್ಣವರ, ನಿಗಮದ ಹಿಂದಿನ ಲೆಕ್ಕಾಧಿಕಾರಿ

8. ನೆಕ್ಕಂಟಿ ನಾಗರಾಜ್‌ – ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ

9. ನಾಗೇಶ್ವರ ರಾವ್‌ – ಮಾಜಿ ಸಚಿವ ನಾಗೇಂದ್ರ ಸಂಬಂಧಿ

10. ಸಾಯಿ ತೇಜ, ಸತ್ಯನಾರಾಯಣ ವರ್ಮಾ ಸಹಚರ

11. ತೇಜ ತಮ್ಮಯ್ಯ, ಶಾಸಕ ದದ್ದಲ್ ಪಿಎ

12. ಹರೀಶ್, ಮಾಜಿ ಮಂತ್ರಿ ನಾಗೇಂದ್ರ ಪಿಎ

ಹೈದರಾಬಾದ್​ನಲ್ಲಿ ಎಸ್ಐಟಿ ತಂಡ ಐವರನ್ನ ಬಂಧಿಸಿದ್ದರು. ಇಂದು ಇಡಿ ಅಧಿಕಾರಿಗಳು ಹರೀಶ್​ನನ್ನ ಬಂಧಿಸಿದ್ದಾರೆ. ಬೆಂಗಳೂರು, ದಾವಣಗೆರೆ ಯಲ್ಲಿ ಉಳಿದ ಐವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಜೊತೆಗೆ ಎಸ್ಐಟಿಯಿಂದ ಇದುವರೆಗೂ ಒಟ್ಟು 35 ಕೋಟಿಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್‌ಗಳಲ್ಲಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಹಿಮದಿಂದ ಮುಚ್ಚಿಕೊಂಡ ಜಗತ್ತಿನ ಅತಿ ಎತ್ತರದ ಶಿವನ ದೇವಸ್ಥಾನ
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಶಿರೂರು ದುರಂತ ನಡೆದು ವಾರ ಕಳೆದರೂ ಪತ್ತೆಯಾಗದ ಇನ್ನೂ ಮೂರು ದೇಹಗಳು
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಪ್ರೀಮಿಯಂ ಸ್ಮಾರ್ಟ್​ವಾಚ್ ಲಾಂಚ್ ಮಾಡಿದ ಸ್ಯಾಮ್​ಸಂಗ್
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಅಗ್ರಹಿಸಿ ವಿರೋಧ ಪಕ್ಷದ ಸದಸ್ಯರಿಂದ ಸಭಾತ್ಯಾಗ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ಪ್ರೀತಿ ಪ್ರಾರಂಭದಲ್ಲೇ ಸೋನಲ್-ತರುಣ್ ಪ್ರೀ-ವೆಡ್ಡಿಂಗ್ ವಿಡಿಯೋ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ವಿಧಾನಮಂಡಲ ಅಧಿವೇಶನ ಪುನರಾರಂಭ; ಇಲ್ಲಿ ಲೈವ್ ವೀಕ್ಷಿಸಿ
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬೆಂಗಳೂರು: ಡಬಲ್ ಡೆಕ್ಕರ್ ಫ್ಲೈಓವರ್ ಮೇಲೆ ಬಿ ದಯಾನಂದ್​ ಬುಲೆಟ್ ರೈಡ್​​
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
ಬಾಸ್ ಎಂದು ಹೋಗಿದ್ದೇ ತಪ್ಪಾಯ್ತು; ಪ್ರದೋಶ್ ಸಿಕ್ಕಿಬಿದ್ದಿದ್ದು ಹೀಗೆ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Daily Devotional: ಶತ್ರು ಕಾಟದಿಂದ ಪಾರಾಗಲು ಗೃಹಿಣಿಯರು ಈ ಕಾರ್ಯ ಮಾಡಿ
Nithya Bhavishya: ಈ ರಾಶಿಯವರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಿದೆ, ಎಚ್ಚರ
Nithya Bhavishya: ಈ ರಾಶಿಯವರಿಗೆ ಮೋಸ ಆಗುವ ಸಾಧ್ಯತೆ ಹೆಚ್ಚಿದೆ, ಎಚ್ಚರ