ಮಕ್ಕಳನ್ನು ನೋಡಲು ಕಳೆದ ಸಲ ಪ್ರತ್ಯೇಕವಾಗಿ ಜೈಲಿಗೆ ಬಂದಿದ್ದ ರೇವಣ್ಣ ದಂಪತಿ ಇಂದು ಜೊತೆಯಾಗಿ ಬಂದರು
ಕಳೆದ ಸಲ ಭವಾನಿ ರೇವಣ್ಣ ಸೆಂಟ್ರಲ್ ಜೈಲಿಗೆ ಬಂದಾಗ ಮಾಧ್ಯಮದ ಕೆಮೆರಾಗಳಿಗೆ ಮುಖ ತೋರಿಸಲು ಇಷ್ಟಪಟ್ಟಿರಲಿಲ್ಲ. ಕಾರಲ್ಲಿ ಮುಖ ಮುಚ್ಚಿಕೊಂಡು ಕುಳಿತ್ತಿದ್ದರು. ಈ ಬಾರಿ ಪತಿ ರೇವಣ್ಣ ಸಹ ಜೊತೆಗಿದ್ದ ಕಾರಣ ಅವರು ಕೊಂಚ ಧೈರ್ಯ ಪ್ರದರ್ಶಿಸಿ ಮುಖ ಮುಚ್ಚಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಅವರ ಮುಖದಲ್ಲಿ ಚಿಂತೆಯ ಗೆರೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು.
ಆನೇಕಲ್ (ಬೆಂಗಳೂರು): ಈ ಪಾಡು ಯಾವ ತಂದೆತಾಯಿಗಳಿಗೂ ಬೇಡ ಮಾರಾಯ್ರೇ. ಹೊಳೆನರಸೀಪುರದ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಕಳೆದ ಎರಡೂವರೆ ತಿಂಗಳಿಂದ ಅನುವಿಭಸುತ್ತಿರುವ ವೇದನೆ ಕನ್ನಡಿಗರಿಗೆಲ್ಲ ಗೊತ್ತಿದೆ. ಲೈಂಗಿಕ ದುರಾಚಾರಗಳ ಆರೋಪದಲ್ಲಿ ಸೆಲಿಬ್ರಿಟಿ ದಂಪತಿಯ ಇಬ್ಬರೂ ಸೆಲಿಬ್ರಿಟಿ ಮಕ್ಕಳು ಜೈಲು ಸೇರಿದ್ದಾರೆ. ಕೆಲ ದಿನಗಳ ಹಿಂದೆ ರೇವಣ್ಣ ಮತ್ತು ಭವಾನಿ ಪ್ರತ್ಯೇಕವಾಗಿ ಸೆಂಟ್ರಲ್ ಜೈಲಿಗೆ ಬಂದು ಡಾ ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣರನ್ನು ನೋಡಿಕೊಂಡು ಹೋಗಿದ್ದರು. ಇವತ್ತು ಇಬ್ಬರೂ ಜೊತೆಯಾಗಿ ಸೆಂಟ್ರಲ್ ಜೈಲಿಗೆ ಬಂದರು. ಆಫ್ ಕೋರ್ಸ್ ಇವತ್ತು ಸಹ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವ ಗೋಜಿಗೆ ಹೋಗಲಿಲ್ಲ. ಪಾಪ, ಏನಂತ ಮಾತಾಡಿಯಾರು? ಅದನ್ನೇ ನಾವು ಹೇಳಿದ್ದು, ರೇವಣ್ಣ-ಭವಾನಿ ಸಂಕಷ್ಟ ಯಾರಿಗೂ ಬೇಡ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
