ಬುಲ್ಡೋಜರ್​ನಲ್ಲಿ ಮಂಟಪಕ್ಕೆ ಮದುಮಗ ಎಂಟ್ರಿ; ಯೋಗಿ ಅಭಿಮಾನಿಯ ವಿಡಿಯೋ ವೈರಲ್

ಬುಲ್ಡೋಜರ್​ನಲ್ಲಿ ಮಂಟಪಕ್ಕೆ ಮದುಮಗ ಎಂಟ್ರಿ; ಯೋಗಿ ಅಭಿಮಾನಿಯ ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Jul 10, 2024 | 6:50 PM

ವೈರಲ್ ವೀಡಿಯೊದಲ್ಲಿ ಮದುಮಗ ಬುಲ್ಡೋಜರ್‌ನಲ್ಲಿ ನೃತ್ಯ ಮತ್ತು ಹಾಡುತ್ತಾ ಎಂಟ್ರಿ ಕೊಡುತ್ತಿರುವುದನ್ನು ಕಾಣಬಹುದು. ಬುಲ್ಡೋಜರ್ ಮುಂದೆ ಲಿಫ್ಟ್ ಬುಟ್ಟಿಯಲ್ಲಿ ವರನ ಜೊತೆಗೆ ಇಬ್ಬರು ಮಕ್ಕಳು ಮತ್ತು ಮಹಿಳೆ ಕೂಡ ಇದ್ದಾರೆ. ಬುಲ್ಡೋಜರ್ ಅನ್ನು ಹೂವುಗಳು ಮತ್ತು ಹೂಮಾಲೆಗಳಿಂದ ಅಲಂಕರಿಸಲಾಗಿದೆ.

ಬಿಜೆಪಿ ಕಾರ್ಯಕರ್ತನಾಗಿದ್ದ ಕೃಷ್ಣ ವರ್ಮಾ ಎಂಬುವವರ ಮದುವೆಯನ್ನು ಉತ್ತರಪ್ರದೇಶದ ಖಲೀಲಾಬಾದ್‌ನಲ್ಲಿ ಏರ್ಪಡಿಸಲಾಗಿತ್ತು. ಚುನಾವಣಾ ಫಲಿತಾಂಶದ ನಂತರ, ಖಲೀಲಾಬಾದ್‌ನಲ್ಲಿ ಬಿಜೆಪಿ ಸೋತಿದ್ದಕ್ಕೆ ಅವರ ಸಂಬಂಧಿಕರು ಲೇವಡಿ ಮಾಡಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಅವರ ದೊಡ್ಡ ಅಭಿಮಾನಿಯಾಗಿರುವ ಕೃಷ್ಣ ವರ್ಮಾಗೆ ಭಾರೀ ಬೇಸರ ಉಂಟುಮಾಡಿತ್ತು. ಹೀಗಾಗಿ, ಅವರು ತಮ್ಮನ್ನು ಲೇವಡಿ ಮಾಡಿದವರಿಗೆ ತಿರುಗೇಟು ನೀಡಲೆಂದು ಮದುವೆಯಲ್ಲಿ ಕುದುರೆ ಸವಾರಿಯ ಬದಲು ಬೊಲ್ಡೋಜರ್ ಮೇಲೆ ಸವಾರಿ ಮಾಡಿಕೊಂಡು ಮಂಟಪಕ್ಕೆ ಬಂದಿದ್ದಾರೆ.

ಅನೇಕ ಜನರು ತಮ್ಮ ಮದುವೆ ಬೇರೆಯವರಿಗಿಂತಲೂ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ. ಅಂತಹ ಒಂದು ಪ್ರಕರಣವು ಗೋರಖ್‌ಪುರದ ಖಜ್ನಿ ತೆಹಸಿಲ್‌ನಲ್ಲಿ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿಯು ಕುದುರೆಗಳ ಬದಲಾಗಿ ಬೊಲ್ಡೋಜರ್ ಮೇಲೆ ತನ್ನ ಮದುವೆಯ ಮೆರವಣಿಗೆಯನ್ನು ಮಾಡಿಕೊಂಡಿದ್ದಾನೆ. ಅದರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಅವರನ್ನು ಬುಲ್ಡೋಜರ್ ಬಾಬಾ ಎಂದೇ ಜನ ಕರೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬುಲ್ಡೋಜರ್ ಓಡಿಸುವುದರಲ್ಲಿ ದೇಶದಾದ್ಯಂತ ಪ್ರಸಿದ್ಧವಾಗಿದೆ. ಇದೀಗ ಈ ಬುಲ್ಡೋಜರ್ ಸಂಸ್ಕೃತಿಯು ನಿಧಾನವಾಗಿ ದೇಶದಲ್ಲಿ ಹರಡುತ್ತಿದೆ. ಯೋಗಿ ಆದಿತ್ಯನಾಥ್ ಅಭಿಮಾನಿಯಾಗಿದ್ದ ವರ ಕೂಡ ಯೋಗಿಯ ಈ ಶೈಲಿಯಿಂದ ಪ್ರಭಾವಿತನಾಗಿ ಬುಲ್ಡೋಜರ್ ಮೇಲೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾನೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ