ಲ್ಯಾಪ್​ಟಾಪ್ ವಿತರಣೆಯಲ್ಲಿ ತಾರತಮ್ಯ ಆರೋಪ; ಶಾಸಕರ ಎದುರೇ ಅಧಿಕಾರಿಗಳಿಗೆ ಪೋಷಕರಿಂದ ತರಾಟೆ

ಲ್ಯಾಪ್​ಟಾಪ್ ವಿತರಣೆಯಲ್ಲಿ ತಾರತಮ್ಯ ಆರೋಪ; ಶಾಸಕರ ಎದುರೇ ಅಧಿಕಾರಿಗಳಿಗೆ ಪೋಷಕರಿಂದ ತರಾಟೆ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 10, 2024 | 7:18 PM

ಕಾರ್ಮಿಕ‌ ಇಲಾಖೆ ವತಿಯಿಂದ ಕಟ್ಟಡ‌ ಕಾರ್ಮಿಕರ ಮಕ್ಕಳಿಗೆ ಇರುವ ಶೈಕ್ಷಣಿಕ ಸೌಲಭ್ಯದ ಯೋಜನೆಯಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​​ ವಿತರಣೆ ಕಾರ್ಯಕ್ರಮವನ್ನು ಮುಂಡರಗಿ(Mundaragi) ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲ್ಯಾಪ್​ಟಾಪ್(laptop) ವಿತರಣೆಯಲ್ಲಿ ತಾರತಮ್ಯ ಹಿನ್ನಲೆ ವಿದ್ಯಾರ್ಥಿಗಳ ಪೋಷಕರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು.

ಗದಗ, ಜು.10: ಜಿಲ್ಲೆಯ ಮುಂಡರಗಿ(Mundaragi) ಪಟ್ಟಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​​ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲ್ಯಾಪ್​ಟಾಪ್(laptop) ವಿತರಣೆಯಲ್ಲಿ ತಾರತಮ್ಯ ಆರೋಪ ಹಿನ್ನೆಲೆ ಶಾಸಕ ಚಂದ್ರು‌ ಲಮಾಣಿ ಎದುರೇ ವಿದ್ಯಾರ್ಥಿಗಳ ಪೋಷಕರು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತೀವ್ರ ತರಾಟೆ ತೆಗೆದುಕೊಂಡರು. 10 ವಿದ್ಯಾರ್ಥಿಗಳ ಪೈಕಿ 9 ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್​ಟಾಪ್ ವಿತರಣೆ ಮಾಡಲಾಗಿತ್ತು. ಓರ್ವ ವಿದ್ಯಾರ್ಥಿನಿಗೆ ಲ್ಯಾಪ್​ಟಾಪ್​ ಸಿಗದ ಹಿನ್ನೆಲೆ ಪೋಷಕರು ಕೋಪಗೊಂಡಿದ್ದಾರೆ. ಕಾರ್ಮಿಕ‌ ಇಲಾಖೆ ವತಿಯಿಂದ ಕಟ್ಟಡ‌ ಕಾರ್ಮಿಕರ ಮಕ್ಕಳಿಗೆ ಇರುವ ಶೈಕ್ಷಣಿಕ ಸೌಲಭ್ಯದ ಯೋಜನೆ ಇದಾಗಿದ್ದು, ಫಲಾನುಭವಿಗಳ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಒಟ್ಟು 10 ವಿದ್ಯಾರ್ಥಿಗಳ ಫೈಕಿ ವಿದ್ಯಾರ್ಥಿನಿ ಸಿಮ್ರಾನ್​ಗೆ ಕೈಬಿಡಲಾಗಿದೆ. ಪಟ್ಟಿಯಲ್ಲಿ ಆಯ್ಕೆಯಾಗಿದ್ದರೂ ವಿದ್ಯಾರ್ಥಿನಿಗೆ ಲ್ಯಾಪ್​ಟಾಪ್ ನೀಡದ ಹಿನ್ನೆಲೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ