ವಿಶ್ಲೇಷಣೆ: ವೇತನ ತಾರತಮ್ಯ; ಭಾರತದ ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಸ್ಥಿತಿ
ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಲಿಂಗ ಆಧಾರಿತ ವೇತನದ ಅಂತರವನ್ನು ಕಾಣಬಹುದು.ಮಹಿಳೆಯರು ಸಾಮಾನ್ಯವಾಗಿ ಪುರುಷರಷ್ಟೇ ಕೆಲಸ ಮಾಡಿದರೂ ಅವರಿಗಿಂತ ಕಡಿಮೆ ಗಳಿಸುತ್ತಾರೆ. ಲಿಂಗ ಸಮಾನತೆಯ ಪ್ರಗತಿಗಳ ಹೊರತಾಗಿಯೂ, ಸಾಮಾಜಿಕ ನಿಯಮಗಳು, ತಾರತಮ್ಯ ಮತ್ತು ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಗೆ ಸೀಮಿತ ಪ್ರವೇಶದಂತಹ ಅಂಶಗಳು ಈ ಅಸಮಾನತೆಗೆ ಕಾರಣವಾಗಿವೆ. ದೇಶದಲ್ಲಿನ ಲಿಂಗ ಆಧಾರಿತ ವೇತನ ಅಂತರದ ವಿಶ್ಲೇಷಣೆ ಇಲ್ಲಿದೆ.

ಇತ್ತೀಚೆಗೆ DBS ಬ್ಯಾಂಕ್ ಇಂಡಿಯಾ ಸಹಯೋಗದೊಂದಿಗೆ CRISIL ನಡೆಸಿದ ಸಮೀಕ್ಷೆಯಲ್ಲಿ ಶೇಕಡಾ 23 ರಷ್ಟು ಸಂಬಳ ಪಡೆಯುವ ಮಹಿಳೆಯರು ಲಿಂಗ ಆಧಾರಿತ ವೇತನದ ಅಂತರ ಮತ್ತು 16 ಶೇಕಡಾ ಮಹಿಳೆಯರು ಭಾರತದಲ್ಲಿ ಕೆಲಸದ ಸ್ಥಳದಲ್ಲಿ ಲಿಂಗ ತಾರತಮ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮೆಟ್ರೋ ನಗರಗಳಲ್ಲಿ ಸಂಬಳ ಪಡೆಯುವ 42 ಪ್ರತಿಶತ ಮಹಿಳೆಯರು ಕೆಲಸಕ್ಕೆ ಸೇರುವ ಹೊತ್ತು ಸಂಬಳದ ಮಾತುಕತೆಯ ಸಮಯದಲ್ಲಿ ಸವಾಲುಗಳನ್ನು ಎದುರಿಸುತ್ತಾರೆ ಎಂದು ಸಮೀಕ್ಷೆ ಕಂಡು ಹಿಡಿದಿದೆ. ಆದಾಗ್ಯೂ, ಇಂಥಾ ಅನುಭವಗಳು ಭಾರತದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವೆ ಭಿನ್ನವಾಗಿರುತ್ತವೆ. ಎರಡು ಮೂರು ವರ್ಷಗಳ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಸಂಜಯ್ ಲೀಲಾ ಬನ್ಸಾಲಿ ಚಿತ್ರ ಬೈಜು ಬಾವ್ರಾದಲ್ಲಿ ಹೀರೋಗೆ ನೀಡುವಷ್ಟೇ ವೇತನ ತನಗೂ ನೀಡಬೇಕು ಎಂದು ಕೇಳಿದ್ದರಿಂದ ಆಕೆಯನ್ನು ಸಿನಿಮಾದಿಂದ ಕೈಬಿಡಲಾಗಿತ್ತು. ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ, ಅದಕ್ಕಿಂತ ಜಾಸ್ತಿ ದುಡಿದರೂ ವೇತನ ಅವರಿಗಿಂತ ಕಡಿಮೆಯೇ.ಈ ಅಂತರವನ್ನು ಹೋಗಲಾಡಿಸಲು ಸಾಧ್ಯವೆ? ಭಾರತದಲ್ಲಿ ವೇತನ ತಾರತಮ್ಯದ ಮಟ್ಟ ಯಾವ ರೀತಿ ಇದೆ ಎಂಬುದರ ಬಗ್ಗೆ ಇಲ್ಲಿದೆ ವಿಶ್ಲೇಷಣೆ. ಮಾರ್ಚ್ ತಿಂಗಳ ಆರಂಭದಲ್ಲಿ, ವಿಶ್ವಬ್ಯಾಂಕ್ ಗ್ರೂಪ್ ವರದಿಯು ಜಾಗತಿಕವಾಗಿ, ಪುರುಷರಿಗೆ 1 ಡಾಲರ್ ವೇತನವಾದರೆ ಅಲ್ಲಿ ಮಹಿಳೆಗೆ ಸಿಗುವುದು ಕೇವಲ 77 ಸೆಂಟ್ಸ್ ಎಂದು ಹೇಳಿದೆ. ಅಂದರೆ ಪುರುಷ ಮತ್ತು ಮಹಿಳೆಯ ವೇತನದಲ್ಲಿ 33 ಸೆಂಟ್ಸ್ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ” ವೇತನ ತಾರತಮ್ಯ”ದ ಉದಾಹರಣೆಯಾಗಿ ಈ ಹಿಂದೆ ಉಲ್ಲೇಖಿಸಲಾಗಿದೆ. ವಿವಿಧ ವರದಿಗಳಲ್ಲಿಯೂ ವಿವಿಧ ಅಂಕಿಅಂಶಗಳನ್ನು ಸಹ ನೀಡಲಾಗಿದೆ. ಇಂಟರ್ನ್ಯಾಷನಲ್...
Published On - 2:37 pm, Sat, 6 April 24