AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕೇಶ್ ನಿಧನದ ಬಳಿಕ ನಟ ರವಿಚಂದ್ರನ್​ಗೆ ಕಡಿಮೆ ಆಯಿತು ಜೀವನದ ಮೇಲಿನ ನಂಬಿಕೆ

ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನಕ್ಕೆ ಜೀ ಕನ್ನಡ ವೇದಿಕೆ ಗೌರವ ಸೂಚಿಸಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಅವರನ್ನು ನೆನೆದು ನಟ ರವಿಚಂದ್ರನ್ ಮತ್ತು ಯೋಗರಾಜ್ ಭಟ್ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಅವರ ನಗು ಮತ್ತು ಹಾಸ್ಯ ಪ್ರಜ್ಞೆಯನ್ನು ಎಂದಿಗೂ ಮರೆಯಲಾಗದು ಎಂದು ಅವರು ಹೇಳಿದರು.

ರಾಕೇಶ್ ನಿಧನದ ಬಳಿಕ ನಟ ರವಿಚಂದ್ರನ್​ಗೆ ಕಡಿಮೆ ಆಯಿತು ಜೀವನದ ಮೇಲಿನ ನಂಬಿಕೆ
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on:May 24, 2025 | 7:35 AM

Share

ರಾಕೇಶ್ ಪೂಜಾರಿ (Rakesh Poojary) ಅಕಾಲಿಕ ಮರಣಕ್ಕೆ ಕೆಲವು ವಾರಗಳು ಕಳೆದಿದ್ದರೂ ಅವರ ನೆನಪು, ಅವರ ನಗು ಹಾಗೂ ಅವರ ಬಗೆಗಿನ ಚರ್ಚೆ ಇನ್ನೂ ನಿಂತಿಲ್ಲ. ಅವರ ನಗುಮುಖದ ಫೋಟೋಗಳನ್ನು ನೋಡಿ ಎಲ್ಲರೂ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಅವರು ಇಷ್ಟು ಬೇಗ ಸಾಯಬಾರದಿತ್ತು ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರು ಇನ್ನಷ್ಟು ಸಮಯ ನಮ್ಮ ಜೊತೆ ಇದ್ದು ನಮ್ಮ ನಗಿಸಬೇಕಿತ್ತು ಎನ್ನುತ್ತಿದ್ದಾರೆ. ಹೀಗಿರುವಾಗಲೇ ರಾಕೇಶ್ ಪೂಜಾರಿ ಅವರಿಗೆ ಜೀ ಕನ್ನಡ ವೇದಿಕೆ ಮೇಲೆ ವಿಶೇಷ ಗೌರವ ಸೂಚಿಸಲಾಗಿದೆ.

ರಾಕೇಶ್ ಪೂಜಾರಿ ಅವರು ಜೀ ಕನ್ನಡ ವೇದಿಕೆ ಮೇಲೆ ಗಮನ ಸೆಳೆದವರು. ‘ಕಾಮಿಡಿ ಕಿಲಾಡಿಗಳು ಸೀಸನ್ 3’ ವಿನ್ನರ್ ಕೂಡ ಹೌದು. ರಾಕೇಶ್ ಪೂಜಾರಿಯನ್ನು ಅಲ್ಲಿ ಮಿಸ್ ಮಾಡಿಕೊಳ್ಳದವರೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲವೂ ಸರಿ ಇದ್ದಿದ್ದರೆ ಈ ವಾರ ವೇದಿಕೆ ಮೇಲೆ ಅವರು ಕೂಡ ಇರಬೇಕಿತ್ತು. ಆದರೆ, ಈ ರೀ ಯೂನಿಯನ್​ಗೆ ಅವರು ಇಲ್ಲದೆ ಎಲ್ಲರಿಗೂ ದುಃಖ ಆವರಿಸಿದೆ.

View this post on Instagram

A post shared by Zee Kannada (@zeekannada)

ವೇದಿಕೆ ಮೇಲೆ ಕಾರ್ಯಕ್ರಮ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಆ ಬಳಿಕ ನಟ ರವಿಚಂದ್ರನ್ ಅವರು ಮಾತನಾಡಿದರು. ‘ಒಂದು ನಿಮಿಷ ಮೌನಾಚರಣೆ ಮಾಡುವಾಗ ರಾಕೇಶ್​​ನ ನಗು ಕಾಣಿಸಿತು. ಈಗ ಅವನು ನಗಿಸುತ್ತಿದ್ದಾನೆ. ಆದರೆ ನಮಗೆ ನಗೋಕೆ ಆಗ್ತಿಲ್ಲ. ವಯಸ್ಸಿಗೂ ಆಯಸ್ಸಿಗೂ ನಂಟು ಮುಗಿದು ಹೋಗಿದೆ. ಮೊದಲು ವಯಸ್ಸು ಮುಗಿದರೇ ಸಾವು ಎನ್ನುತ್ತಿದ್ದರು. ಆದರೆ, ಈಗ ಹಾಗಿಲ್ಲ. ದೇವರ ಲೆಕ್ಕಾಚಾರ ತಪ್ಪಿದೆ. ಗ್ರಹಚಾರ ಆಡ್ತಿದೆ. ನಂಬಿಕೆ ದೂರ ಆಗುತ್ತಿದೆ. ಬದುಕಿರಿ, ಇದ್ದಾಗ ನಗಬೇಕು’ ಎಂದು ಹೇಳಿದರು.

ಇದನ್ನೂ ಓದಿ: ‘ಅವನ ನಟನೆ ನೋಡೋದೇ ಆನಂದ’; ಜೀ ಕನ್ನಡ ವೇದಿಕೆ ಮೇಲೆ ರಾಕೇಶ್ ಪೂಜಾರಿಗೆ ವಿಶೇಷ ಗೌರವ

‘ಯಾರಾದರೂ ಸತ್ತ ಎಂದಾಗ ಅವರ ಮಾಡಿದ ಕೆಲಸ, ನಗುವಿನ ಮೂಲಕ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಎಲ್ಲರನ್ನೂ ನಗಿಸಿದವನು. ಪ್ರಕೃತಿ ಕರೆಯಿತು. ಅವನು ಹೋದ. ಅದನ್ನು ಹಾಸ್ಯವಾಗಿ ತೆಗೆದುಕೊಂಡ. ಅಕಾಲಿಕವಾಗಿ ಹೋದವರು ಹೋದರು ಎನ್ನಬಾರದು. ಅವರನ್ನು ಬೇರೆ ಬೇರೆ ರೀತಿಯಲ್ಲಿ ನಾವು ಮತ್ತೆ ಕಾಣಬೇಕು’ ಎಂದು ಯೋಗರಾಜ್ ಭಟ್ ಅವರು ಅಭಿಪ್ರಾಯ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Sat, 24 May 25

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ