ದಕ್ಷಿಣದವರ ಟ್ರೋಲ್ಗೆ ಎಚ್ಚೆತ್ತುಕೊಂಡ ‘ವಾರ್ 2’ ಸಿನಿಮಾ; ಡ್ಯಾಮೇಜ್ ಕಂಟ್ರೋಲ್ಗೆ ಹೊಸ ತಂತ್ರ
‘ವಾರ್ 2’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಎಫ್ಎಕ್ಸ್ ಗುಣಮಟ್ಟ ಮತ್ತು ಜೂನಿಯರ್ ಎನ್ಟಿಆರ್ ಅವರ ಪಾತ್ರದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಯಶ್ ರಾಜ್ ಫಿಲ್ಮ್ಸ್ ಈ ಟೀಕೆಗಳನ್ನು ಗಮನಿಸಿ, ಸಿನಿಮಾ ಬಿಡುಗಡೆಗೂ ಮುನ್ನ ಸುಧಾರಣೆಗಳನ್ನು ಮಾಡುವ ಯೋಚನೆಯಲ್ಲಿದೆ.

‘ವಾರ್ 2’ ಸಿನಿಮಾದ (War 2 Movie) ಟೀಸರ್ ಇತ್ತೀಚೆಗೆ ರಿಲೀಸ್ ಆಯಿತು. ಆದರೆ, ಅಭಿಮಾನಿಗಳ ರಿಯಾಕ್ಷನ್ ಒಂದೇ ರೀತಿ ಇರಲಿಲ್ಲ. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸಂಸ್ಥೆಯ ಟೀಸರ್ ಎಲ್ಲರಿಂದ ಟೀಕೆಗೆ ಒಳಗಾಗಲು ಆರಂಭಿಸಿತು. ಸಾಮಾನ್ಯವಾಗಿ ಸಿನಿಮಾದ ಗ್ರಾಫಿಕ್ಸ್ ಕೆಟ್ಟದಾಗಿದ್ದರೆ, ಗುಣಮಟ್ಟ ಕಡಿಮೆ ಇದ್ದರೆ ಟ್ರೋಲ್ ಮಾಡುವುದು ಸಹಜ. ‘ಪಠಾಣ್’ ಸಿನಿಮಾ ಸಂದರ್ಭದಲ್ಲಿ ಹೀಗೆಯೇ ಆಗಿತ್ತು. ಇದೇ ರೀತಿಯ ಟ್ರೋಲ್ ‘ವಾರ್ 2’ ಚಿತ್ರಕ್ಕೂ ಆಗಿದೆ. ಅಲ್ಲದೆ, ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಕೂಡ ಟ್ರೇಲರ್ ನೋಡಿ ಅಪ್ಸೆಟ್ ಆಗಿದ್ದಾರೆ.
‘ವಾರ್ 2’ ಚಿತ್ರದ ಟ್ರೇಲರ್ ಎಲ್ಲರ ಟೀಕೆಗೆ ಗುರಿಯಾಗಿದೆ. ಟ್ರೇಲರ್ನಲ್ಲಿ ವಿಎಫ್ಎಕ್ಸ್ ಉತ್ತಮವಾಗಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಜೂನಿಯರ್ ಎನ್ಟಿಆರ್ ಕಡಿಮೆ ಹೈಲೈಟ್ ಆಗಿದ್ದು, ಬಾಲಿವುಡ್ ನಟ ಹೃತಿಕ್ ಹೆಚ್ಚು ಗಮನ ಸೆಳೆಯುವಂತೆ ಮಾಡಲಾಗಿದೆ ಎಂದು ದೂರಿದ್ದಾರೆ. ನಿಜ ಹೇಳಬೇಕು ಎಂದರೆ ಅಂದು ಇದ್ದಿದ್ದು ಜೂ. ಎನ್ಟಿಆರ್ ಬರ್ತ್ಡೇ. ಹೀಗಾಗಿ, ಅವರನ್ನು ಹೆಚ್ಚು ಹೈಲೈಟ್ ಮಾಡಬೇಕಿತ್ತು ಎಂದು ದಕ್ಷಿಣದ ಅನೇಕರು ಅಭಿಪ್ರಾಯಪಟ್ಟಿದ್ದರು.
ಈಗ ಯಶ್ ರಾಜ್ ಫಿಲ್ಮ್ಸ್ ಎಲ್ಲಾ ಕಾಮೆಂಟ್ಗಳನ್ನು ಓದುತ್ತಿದೆ. ಈ ಫೀಡ್ಬ್ಯಾಕ್ನ ಇಟ್ಟುಕೊಂಡು ಮುಂದಿನ ಪ್ಲ್ಯಾನ್ ರೂಪಿಸಲಿದೆ. ಸಿನಿಮಾ ರಿಲೀಸ್ಗೆ ಇನ್ನೂ ಕೆಲವು ತಿಂಗಳು ಇದೆ. ಅದರೊಳಗೆ ಎಲ್ಲವನ್ನೂ ಸರಿ ಮಾಡಿಕೊಳ್ಳುವ ಆಲೋಚನೆ ತಂಡದ್ದು. ಮುಂದಿನ ದಿನಗಳಲ್ಲಿ ಪವರ್ಫುಲ್ ಟ್ರೇಲರ್ ರಿಲೀಸ್ ಮಾಡುವ ಆಲೋಚನೆ ಇವರಿಗೆ ಇದೆ. ಸಿನಿಮಾದಲ್ಲಿ ಜೂ.ಎನ್ಟಿಆರ್ನ ಹೆಚ್ಚು ಹೈಲೈಟ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ.
ದಕ್ಷಿಣದ ಸೂಪರ್ಸ್ಟಾರ್ ‘ಕೂಲಿ’ ಸಿನಿಮಾ ಹಾಗೂ ಕನ್ನಡದ 45 ಸಿನಿಮಾ ಅದೇ ಸಂದರ್ಭದಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ, ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಸ್ಪರ್ಧೆ ಜೋರಿರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ‘ವಾರ್ 2’ ಯುದ್ಧಕ್ಕೆ ರೆಡಿ ಆಗುತ್ತಿದೆ.
ಇದನ್ನೂ ಓದಿ: ಹೃತಿಕ್ ರೋಷನ್ ಎದುರು ಮಂಕಾದ ಜೂ. ಎನ್ಟಿಆರ್; ‘ವಾರ್ 2’ ಟೀಸರ್ ನೋಡಿ ಫ್ಯಾನ್ಸ್ಗೆ ಬೇಸರ
‘ವಾರ್ 2’ ಚಿತ್ರವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಜೂ. ಎನ್ಟಿಆರ್ ಅವರು ಎದುರು ಬದುರಾಗುತ್ತಿದ್ದಾರೆ. ಈ ಚಿತ್ರಕ್ಕೆ ಕಿಯಾರಾ ನಾಯಕಿ. ಅವರು ಟ್ರೇಲರ್ನಲ್ಲಿ ಭರ್ಜರಿ ಗಮನ ಸೆಳೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:01 am, Sat, 24 May 25








