AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿನಿಮಾ ವಿಚಾರದಲ್ಲಿ ನಾನು ಲಕ್ಕಿ ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ’; ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅವರು ತಮ್ಮ ಯಶಸ್ಸಿಗೆ ಅದೃಷ್ಟ ಮತ್ತು ಶ್ರಮ ಎರಡೂ ಕಾರಣ ಎಂದು ಹೇಳಿದ್ದಾರೆ. "ಸಪ್ತ ಸಾಗರದಾಚೆ ಎಲ್ಲೋ" ಚಿತ್ರದಲ್ಲಿ ಅವರು ನಟಿಸಲು ಅವಕಾಶ ದೊರೆತದ್ದು ಅದೃಷ್ಟದಿಂದ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಅವರು ತಮ್ಮ ಶ್ರಮವನ್ನೂ ಮರೆಯಲಿಲ್ಲ.

‘ಸಿನಿಮಾ ವಿಚಾರದಲ್ಲಿ ನಾನು ಲಕ್ಕಿ ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ’; ರುಕ್ಮಿಣಿ ವಸಂತ್
ರುಕ್ಮಿಣಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: May 24, 2025 | 7:56 AM

Share

ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ. ರಕ್ಷಿತ್ ಶೆಟ್ಟಿ ನಟನೆಯ ಈ ಚಿತ್ರದಿಂದಾಗಿ ಅವರಿಗೆ ಪರಭಾಷೆಗಳಿಂದ ಆಫರ್ ಬರುತ್ತಿದೆ. ಪ್ರಭಾಸ್, ಜೂನಿಯರ್ ಎನ್​ಟಿಆರ್​ ಅವರಂಥ ಸ್ಟಾರ್ ಹೀರೋಗೆ ಅವರು ನಾಯಕಿ ಆಗಿ ಆಯ್ಕೆ ಆಗುತ್ತಿದ್ದಾರೆ ಎಂದು ವರದಿಗಳು ಕೇಳಿ ಬಂದಿವೆ. ಹೀಗಿರುವಾಗಲೇ ರುಕ್ಮಿಣಿ ವಸಂತ್ ಅವರು ಅದೃಷ್ಟದ ಬಗ್ಗೆ ಮಾತನಾಡಿದ್ದಾರೆ. ತಾವು ಲಕ್ಕಿ ಎಂದು ಅವರು ಎಲ್ಲರ ಎದುರು ಒಪ್ಪಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಅವರು ಈ ಮೊದಲು ಕೆಲ ಸಿನಿಮಾ ಮಾಡಿದ್ದರು. ಆದರೆ, ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಅವರ ಅದೃಷ್ಟವನ್ನು ಬದಲಿಸಿತೂ ಎಂದರೂ ತಪ್ಪಾಗಲಿಕ್ಕಿಲ್ಲ. ಇದನ್ನು ಅವರು ಕೂಡ ಒಪ್ಪಿಕೊಳ್ಳುತ್ತಾರೆ. ತಮಗೆ ಅದೃಷ್ಟ ಇತ್ತು ಎಂದಿರೋ ಅವರು, ಶ್ರಮ ಕೂಡ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ
Image
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
Image
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Image
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

‘ನೀವು ಲಕ್ಕಿ ಬಿಡಿ’ ಎಂದು ಕೆಲವು ನಟಿಯರಿಗೆ ಕೆಲವರು ಹೇಳಿದ್ದು ಇದೆ. ಆಗ ಅವರಿಗೆ ಸಿಟ್ಟೇ ಬಂದುಬಿಡುತ್ತದೆ. ‘ಅವರಿಗೆ ನಾನು ಹಾಕಿದ ಶ್ರಮ ಕಾಣುವುದಿಲ್ಲ’ ಎನ್ನುತ್ತಾರೆ. ಆದರೆ, ರುಕ್ಮಿಣಿ ವಸಂತ್ ಅವರು ಈ ರೀತಿ ಅಲ್ಲ. ಅವರು ಬೇರೆಯದೇ ಅಭಿಪ್ರಾಯ ಹೇಳುತ್ತಾರೆ.

‘ಅದೃಷ್ಟ ಮುಖ್ಯ. ಸಪ್ತ ಸಾಗರದಾಚೆ ಸಿನಿಮಾ ನನಗೆ ಬ್ರೇಕ್ ನೀಡಿತು. ನಾನು ಡೈರೆಕ್ಟರ್​ಗೆ ಮೆಸೇಜ್ ಮಾಡಿದೆ. ನಾನು ನ್ಯೂಸ್ ಪೇಪರ್​ನಲ್ಲಿ ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದೀರಿ ಎಂಬುದನ್ನು ನೋಡಿದೆ. ಆಡಿಷನ್ ಮಾಡಬಹುದಾ ಎಂದು ಕೇಳಿದ್ದೆ. ನಾನು ನಟನೆ ಕಲಿತಿದ್ದೇನೆ ಎಂದು ಅವರಿಗೆ ಹೇಳಿದ್ದೆ. ಅವರು ಮೆಸೇಜ್ ನೋಡಿ ಓಕೆ ಎಂದರು. ಆಡಿಷನ್ ಕೊಟ್ಟು ಆಯ್ಕೆ ಆದೆ. ಅವರು ನನ್ನ ಮೆಸೇಜ್ ನೋಡದೇ ಇದ್ದಿದ್ದರೆ ಆ ಸಿನಿಮಾದಲ್ಲಿ ನಾನು ಇರ್ತಾ ಇರಲಿಲ್ಲ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಅದೇ ರೀತಿ ಅದೃಷ್ಟ ಕೂಡ ಮುಖ್ಯ. ನೀವು ಲಕ್ಕಿ ಎಂದರೆ ನನಗೆ ಕೋಪ ಬರಲ್ಲ. ಇದು ಅದೃಷ್ಟ ಹಾಗೂ ಶ್ರಮದ ಕಾಂಬಿನೇಷನ್’ ಎಂದಿದ್ದಾರೆ ಅವರು.

ಇದನ್ನೂ ಓದಿ: ರುಕ್ಮಿಣಿ ವಸಂತ್​ಗೆ​ ಖುಲಾಯಸಿದ ಅದೃಷ್ಟ, ತೆಲುಗಿನಲ್ಲಿ ಬಲು ಬ್ಯುಸಿ, ಕೈಲಿರುವ ಸಿನಿಮಾಗಳೆಷ್ಟು?

ರಶ್ಮಿಕಾ ಮಂದಣ್ಣ ವಿಚಾರದಲ್ಲೂ ಹಿಗೇಯೇ ಆತಿತು. ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಅವರು ಆಡಿಷನ್ ನೀಡಿ ಆಯ್ಕೆ ಆದರು. ಆ ಬಳಿಕ ಕರ್ನಾಟಕ ಕ್ರಶ್ ಆದರು. ನಂತರ ನ್ಯಾಷನಲ್ ಕ್ರಶ್ ಆದರು. ಅವರಿಗೆ ಅದೃಷ್ಟ ಸಾಕಷ್ಟು ಸಹಾಯ ಮಾಡಿತ್ತು. ಆದರೆ, ರಶ್ಮಿಕಾ ಇದನ್ನು ಒಪ್ಪಿಕೊಳ್ಳುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!