AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಿಂದ ಬಂದು ಭಾರತದಲ್ಲಿ ಸೂಪರ್ ಸ್ಟಾರ್ ಆದ ಈ ಕಲಾವಿದ ಗೊತ್ತೇ?

ಸುರೇಶ್ ಒಬೆರಾಯ್, ಪ್ರಸಿದ್ಧ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ತಂದೆ, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದವರು. ದೇಶ ವಿಭಜನೆಯ ನಂತರ ಅವರ ಕುಟುಂಬ ಭಾರತಕ್ಕೆ ಬಂದು ಬಹಳ ಕಷ್ಟಗಳನ್ನು ಎದುರಿಸಿತು. ರೇಡಿಯೋ ನಿರೂಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಸುರೇಶ್, ನಂತರ ಬಾಲಿವುಡ್‌ನಲ್ಲಿ ಯಶಸ್ವಿಯಾದರು. ಇತ್ತೀಚೆಗೆ, ಅವರು ಆಪರೇಷನ್ ಸಿಂದೂರ್ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದಿಂದ ಬಂದು ಭಾರತದಲ್ಲಿ ಸೂಪರ್ ಸ್ಟಾರ್ ಆದ ಈ ಕಲಾವಿದ ಗೊತ್ತೇ?
Vivek Oberay
 ಶ್ರೀಲಕ್ಷ್ಮೀ ಎಚ್
| Edited By: |

Updated on: May 24, 2025 | 8:57 AM

Share

ಬಾಲಿವುಡ್ ಸೂಪರ್‌ಸ್ಟಾರ್ ಒಬ್ಬರು ಪಾಕಿಸ್ತಾನದಿಂದ ಕುಟುಂಬ ಸಮೇತ ಇಲ್ಲಿಗೆ ಬಂದರು. ಇಂದು, ಈ ನಟ ತನಗಾಗಿ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅವರು ಭಾರತ ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ (Operation Sindoor)​ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದ್ದು, ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಸ್ತುತ ಉದ್ವಿಗ್ನ ವಾತಾವರಣವಿದೆ. ಭಾರತದಲ್ಲಿ ಪಾಕಿಸ್ತಾನಿ ಕಲಾವಿದರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಎಲ್ಲವನ್ನೂ ನಿಷೇಧಿಸಲಾಗಿದೆ. ಆದರೆ ನಿಮಗೆ ತಿಳಿದಿದೆಯೇ, ಬಾಲಿವುಡ್‌ನ ಸೂಪರ್‌ಸ್ಟಾರ್ ಒಬ್ಬರು ಪಾಕಿಸ್ತಾನದಿಂದ ತಪ್ಪಿಸಿಕೊಂಡು ಇಂದು ಸೂಪರ್‌ಸ್ಟಾರ್ ನಟರಾಗಿದ್ದಾರೆ. ನಾವು ಮಾತನಾಡುತ್ತಿರುವ ನಟನ ಹೆಸರು ಸುರೇಶ್ ಒಬೆರಾಯ್. ವಿವೆಕ್ ಒಬೆರಾಯ್ ಅವರ ತಂದೆ. ಸುರೇಶ್ ಅವರು ಮೂಲತಃ ಪಾಕಿಸ್ತಾನದವರು. ಆದರೆ ದೇಶ ವಿಭಜನೆಯಾದಾಗ ಅವರ ಇಡೀ ಕುಟುಂಬ ಭಾರತಕ್ಕೆ ಬಂದಿತು.

ಸುರೇಶ್ ಡಿಸೆಂಬರ್ 17, 1946 ರಂದು ಪಾಕಿಸ್ತಾನದ ಕ್ವೆಟ್ಟಾದಲ್ಲಿ ಜನಿಸಿದರು. ಅವರ ತಂದೆ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದರು ಮತ್ತು ಅವರ ಕುಟುಂಬವು ತುಂಬಾ ಶ್ರೀಮಂತವಾಗಿತ್ತು. ಆದರೆ ವಿಭಜನೆಯ ನಂತರ, ಅವರು ಎಲ್ಲವನ್ನೂ ತೊರೆದು ಭಾರತಕ್ಕೆ ಬಂದರು.

ಇದನ್ನೂ ಓದಿ
Image
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
Image
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
Image
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Image
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ಸುರೇಶ್ ಒಂದು ಸಂದರ್ಶನದಲ್ಲಿ, ಬಾಲ್ಯದಲ್ಲಿ ನಿರಾಶ್ರಿತನಾಗಿ ಇಲ್ಲಿ ಮತ್ತು ಅಲ್ಲಿ ವಾಸಿಸುತ್ತಿದ್ದೆ ಎಂದು ಹೇಳಿದರು. ಅವರ ಬಳಿ ಒಂದು ಹೊತ್ತು ಊಟಕ್ಕೂ ಹಣವಿರಲಿಲ್ಲ. ಸುರೇಶ್ ತಮ್ಮ ವೃತ್ತಿಜೀವನವನ್ನು ರೇಡಿಯೋ ನಿರೂಪಕರಾಗಿ ಪ್ರಾರಂಭಿಸಿದರು. ಅವರು ತಮ್ಮ ಧ್ವನಿಯಿಂದಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಕ್ರಮೇಣ, ಅವರಿಗೆ ಚಲನಚಿತ್ರಗಳ ಆಫರ್‌ಗಳು ಬರಲು ಪ್ರಾರಂಭಿಸಿದವು. ಲಾವಾರಿಸ್, ವಿಧಾತ, ನಮಕ್ ಹಲಾಲ್, ಕಾಮ್ಚೋರ್ ಚಿತ್ರಗಳ ಮೂಲಕ ಅವರು ಹೆಸರು ಮಾಡಿದರು.

ಇದನ್ನೂ ಓದಿ: ‘ಎಲ್ಲವೂ ಮುಗಿದಂತೆ ಅನಿಸಿತ್ತು’: ಸಲ್ಲು ಜೊತೆಗಿನ ದ್ವೇಷದ ದಿನಗಳನ್ನು ನೆನೆದ್ರಾ ವಿವೆಕ್ ಒಬೆರಾಯ್?

ಸುರೇಶ್ ಅವರಿಗೆ ಜನಿಸಿದವರೇ ವಿವೇಕ್ ಒಬೆರಾಯ್. ಇವರು ಬಾಲಿವುಡ್​ನಲ್ಲಿ ಸಾಕಷ್ಟು ಹೆಸರು ಮಾಡಿದರು. ಆದರೆ, ಸಲ್ಮಾನ್ ಖಾನ್ ಅವರನ್ನು ಎದುರು ಹಾಕಿಕೊಳ್ಳುವ ಮೂಲಕ ಒಂದಷ್ಟು ಆಫರ್​ಗಳನ್ನು ಕಳೆದುಕೊಂಡರು. ಆದರೆ, ಅವರು ಛಲ ಬಿಡದೆ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.