ಬೆಂಗಳೂರಿನ ಈ ರಸ್ತೆಯಲ್ಲಿ 4 ದಿನ ಸಂಚಾರ ಬಂದ್​: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್ ​ಪೊಲೀಸ್​

ಬೆಂಗಳೂರಿನ ಫೀಲ್ಡ್​​ ಸಂಚಾರ ಪೊಲೀಸ್​ ಠಾಣಾ ವ್ಯಾಪ್ತಿಯ ಪಣತ್ತೂರು ರೈಲ್ವೇಬ್ರಿಡ್ಜ್​​ ಬಳಿ ರೈಲ್ವೆ ಇಲಾಖೆಯ ವತಿಯಿಂದ ಅಂಡರ್​ಪಾಸ್​ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್​​ವರೆಗಿನ ರಸ್ತೆಯಲ್ಲಿ ಸಂಚಾರ ಬಂದ್​ ಮಾಡಲಾಗಿದೆ.

ಬೆಂಗಳೂರಿನ ಈ ರಸ್ತೆಯಲ್ಲಿ 4 ದಿನ ಸಂಚಾರ ಬಂದ್​: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್ ​ಪೊಲೀಸ್​
ಬೆಂಗಳೂರು ಸಂಚಾರ ಸಲಹೆ
Follow us
ವಿವೇಕ ಬಿರಾದಾರ
|

Updated on:Jul 09, 2024 | 8:08 AM

ಬೆಂಗಳೂರು, ಜುಲೈ 09: ವೈಟ್​ ಫೀಲ್ಡ್​​ನ (White Field) ಪಣತ್ತೂರು ದಿಣ್ಣೆಯಿಂದ (Panathur Dinne) ಪಣತ್ತೂರು ರೈಲ್ವೆ ಬ್ರಿಡ್ಜ್ (Panathur Railway Bridge)​​ ವರೆಗಿನ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಾಲ್ಕು ದಿನಗಳ ಕಾಲ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್​ ಇಲಾಖೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ವೈಟ್​ ಫೀಲ್ಡ್​​ ಸಂಚಾರ ಪೊಲೀಸ್​ ಠಾಣಾ (Trafic Police) ವ್ಯಾಪ್ತಿಯ ಪಣತ್ತೂರು ರೈಲ್ವೇಬ್ರಿಡ್ಜ್​​ ಬಳಿ ರೈಲ್ವೆ ಇಲಾಖೆಯ ವತಿಯಿಂದ ಅಂಡರ್​ಪಾಸ್​ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಪಣತ್ತೂರು ದಿಣ್ಣೆಯಿಂದ ಪಣತ್ತೂರು ರೈಲ್ವೆ ಬ್ರಿಡ್ಜ್​​ವರೆಗಿನ ರಸ್ತೆಯಲ್ಲಿ ಸಂಚಾರವನ್ನು ಮಂಗಳವಾರ (ಜು.09) ಜುಲೈ 12 ವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಇಲ್ಲಿದೆ.

ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ

ಪಣತ್ತೂರು ದಿಣ್ಣೆ ಕಡೆಯಿಂದ ಪಣತ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಹೋಗುವ ವಾಹನ ಸವಾರರು ಗುಂಜೂರು ಪಾಳ್ಯ ರಸ್ತೆಯಿಂದ ಸಿಲ್ವರ್ ಓಕ್ ರಸ್ತೆ ಮುಖಾಂತರ ಬಳಗೆರೆ ಮುಖ್ಯರಸ್ತೆಯನ್ನು ಬಳಸಿ ಪಣತ್ತೂರು ಹಾಗೂ ಕುಂದಲಹಳ್ಳಿ, ಕಡೆಗೆ ಸಂಚರಿಸಬಹುದಾಗಿದೆ.

ಪಣತ್ತೂರು ಕಡೆಯಿಂದ ಪಣತ್ತೂರು ದಿಣ್ಣೆ ಕಡೆಗೆ ಹೋಗುವ ವಾಹನ ಸವಾರರು ಬಳಗೆರೆ ಮುಖ್ಯರಸ್ತೆಯಿಂದ ಸಿಲ್ವರ್ ಓಕ್ ಮುಖಾಂತರ ಗುಂಜೂರು ಪಾಳ್ಯ ರಸ್ತೆಯನ್ನು ಬಳಸಿ ಪಣತ್ತೂರು ದಿಣ್ಣೆ ಕಡೆಗೆ ಸಂಚರಿಸಬಹುದಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗದಲ್ಲಿನ ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ತೊಂದರೆ

ಸಂಚಾರ ಅಡಚಣೆ

ಸೋಮವಾರ ಸಾಯಂಕಾಲ ಬೆಂಗಳೂರು ಮಹಾನಗರದ ಹಲವೆಡೆ ಭಾರಿ ಮಳೆ ಸುರಿದಿದೆ. ಇದರಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕಚೇರಿಯಿಂದ ಮನೆಗ ತೆರಳು ಉದ್ಯೋಗಿಗಳು ಪರದಾಡಿದರು. ಅನೇಕ ಕಡೆ ನಿಧಾನಗತಿಯ ವಾಹನ ಸಾಂಚಾರ ಇದ್ದರೆ, ಕೆಲವು ಅಂಡರ್​ ಪಾಸ್​ಗಳನ್ನು ಮುಚ್ಚಲಾಗಿತ್ತು.

ಹೆಣ್ಣೂರಿನಿಂದ ಬಾಗಲೂರು ರೈಲ್ವೇ ಅಂಡರ್​ಪಾಸ್​ನಲ್ಲಿ ನೀರು ನಿಂತಿದ್ದರಿಂದ ಸವಾರರು ನಿಧಾನಗತಿಯಲ್ಲಿ ಸಂಚರಿಸುವಂತೆ ಆಗಿತ್ತು. ನೆಲಮಂಗಲ ಸಂಚಾರ ಠಾಣೆ ಸರಹದ್ದಿನ ಚಿಕ್ಕಬಿದರಕಲ್ಲು ಜಿಂದಾಲ್​​ ಅಂಡರ್​ ಪಾಸ್​ ಬಳಿ ಸರ್ವಿಸ್​ ರಸ್ತೆ ಹದಗಟ್ಟಿದ್ದರಿಂದ ಪಾರ್ಲೆ ಜಿ ಟೋಲ್​ ಕಡೆಯಿಂದ ನೆಲಮಂಗಲದ ಕಡೆಗೆ ವಾಹನಗಳು ನಿಧಾನವಾಗಿ ಚಲಿಸಿದ್ದವು. ಕಲೆವೆ ಹೊತ್ತಿನಲ್ಲಿ ಸಂಚಾರಿ ಪೊಲೀಸರು ಅಗತ್ಯ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Tue, 9 July 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ