ಬೆಂಗಳೂರಿನಲ್ಲಿ ಹೆಚ್ಚಾದ ಸಾಂಕ್ರಾಮಿಕ ರೋಗಗಳು; ಡೆಂಗ್ಯೂ ಜೊತೆ ಝಿಕಾ ವೈರಸ್ ಆತಂಕ
ಮಳೆ, ಬಿಸಿಲು ಎರಡರಿಂದ ಬೇಸತ್ತಿದ್ದ ಬೆಂಗಳೂರು ಮಂದಿಗೆ, ಖಾಯಿಲೆಗಳು ಮತ್ತೊಂದು ರೀತಿ ತಲೆ ನೋವಾಗಿ ಪರಿಣಮಿಸಿದೆ. ಜನರು ಮನೆ ಸುತ್ತ ಸ್ವಚ್ಛತೆ ಕಾಪಾಡುವುದು ಈ ಹೊತ್ತಿನಲ್ಲಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದು ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬ ಸಲಹೆ ನೀಡಿದ್ದಾರೆ.
ಬೆಂಗಳೂರು, ಜುಲೈ.09: ಸಿಲಿಕಾನ್ ಸಿಟಿ ಬೆಂಗಳೂರು ಸದ್ಯ ವೈರಸ್ಗಳ ಹಬ್ ಆಗ್ತಿದೆ. ಕಳೆದೊಂದು ವಾರದಿಂದ ಡೆಂಘಿ ಆರ್ಭಟದ ಜೊತೆ ನಾನಾ ವೈರಸ್ಗಳ ಆತಂಕ ಜನರನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. ಇದರ ಜೊತೆಗೆ ಒಂದು ವಾರ ಮಳೆ ಮತ್ತೊಂದು ವಾರ ಬಿಸಿಲು, ಶೆಕೆ ಜನರನ್ನ ಹೈರಾಣು ಮಾಡಿ ಹಾಕಿದೆ (Bengaluru Weather). ಬೆಳಗೆಲ್ಲಾ ಸುಡೋ ಬಿಸಿಲು, ಮಧ್ಯಾಹ್ನದ ವೇಳೆಗೆ ತೀವ್ರ ಶೆಕೆ, ಸಂಜೆಯಾದರೆ ಚಳಿ, ರಾತ್ರಿಯಾದ್ರೆ ಮಳೆ ಇನ್ನು ಕೆಲವು ಸರಿ ಮುಂಜಾನೆಯೇ ಮೋಡ ಮುಸಿಕಿದ ವಾತಾವರಣ, ತುಂತುರು ಹನಿ. ಬದಲಾಗುತ್ತಿರುವ ಬೆಂಗಳೂರಿನ ವೆದರ್ಗೆ ಜನರು ಪುಲ್ ಹೈರಾಣಾಗುತ್ತಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿ ವೈರಸ್ಗಳ ಹಬ್ ಆಗ್ತಿದ್ದು ಜನರಲ್ಲಿ ಸಾಂಕ್ರಾಮಿಕ ರೋಗಗಳ (Virus) ಜೊತೆ ಜ್ವರದ ಪ್ರಕರಣ ಹೆಚ್ಚಾಗಿದೆ.
ರಾಜಧಾನಿಯಲ್ಲಿ ಡೆಂಘಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು ಇದರ ಜೊತೆ ಝಿಕಾ ಸೇರಿದಂತೆ ಸಾಂಕ್ರಾಮಿಕ ಖಾಯಿಲೆಗಳ ಆತಂಕ ಹೆಚ್ಚಾಗಿದೆ. ಮಕ್ಕಳಲ್ಲಿ ಹಾಗೂ ದೊಡ್ಡವರಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಶೀತ, ನೆಗಡಿ, ವಾಂತಿ ಪ್ರಕರಣಗಳು ಹೆಚ್ಚಾಗಿವೆ. ಬದಲಾದ ವಾತಾವರಣ ಹಿನ್ನಲೆ ಡೆಂಘಿ, ಟೈಫಾಯ್ಡ್, ವೈರಲ್ ಜ್ವರ ಕೂಡಾ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆ ರಾಜ್ಯದಲ್ಲಿ ಝಿಕಾ ಹಾಗೂ ಮೆದಳು ತಿನ್ನುವ ಅಮೀಬಾ ವೈರಸ್ ಆತಂಕವು ಹೆಚ್ಚಾಗಿದ್ದು ಸರ್ಕಾರಿ ಆಸ್ಪತ್ರೆಗಳು ಹೈ ಅಲರ್ಟ್ ಆಗಿವೆ.
ಡೆಂಘಿ ಹಾಗೂ ಝಿಕಾ ವೈರಸ್ ಎರಡು ರೋಗ ಲಕ್ಷಣಗಳಲ್ಲೂ ಸಾಮ್ಯತೆ ಇದ್ದು ವೈದ್ಯರು ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ. ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಮತ್ತಿತರ ಲಕ್ಷಣಗಳು ಕಾಣಿಸಿಕೊಂಡ್ರೆ ನಿರ್ಲಕ್ಷ್ಯವಹಿಸದಂತೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ಬಹುತೇಕ ಸೋಂಕು ಪೀಡಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಇನ್ನು ಕೆಲವು ರೋಗಿಗಳಿಗೆ ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪದಲ್ಲಿದ್ದು, 2-7 ದಿನಗಳ ವರೆಗೆ ಕಂಡು ಬರ್ತಿದೆ. ಹೀಗಾಗಿ ವೈದ್ಯರು ಆರೋಗ್ಯ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಜ್ವರ ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯಲು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು! ಇದಕ್ಕೆ ಕಡಿವಾಣ ಹೇಗೆ?
ಇನ್ನು ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರತ್ತಿದೆ. ಈ ಡೆಂಘಿಗೆ ಕಡಿವಾಣ ಹಾಕಲು ಡೆಂಘಿ ವ್ಯಾಕ್ಸಿನ್ ಗಾಗಿ ವೈದ್ಯರಿಂದ ಬೇಡಿಕೆ ಕೇಳಿ ಬಂದಿದೆ. ಆದರೆ ಈ ಡೆಂಘಿ ವ್ಯಾಕ್ಸಿನ್ ಭಾರತದಲ್ಲಿಲ್ಲ. ಆದರೆ ಅಮೇರಿಕಾ, ಬ್ರೇಜಿಲ್, ಮೆಕ್ಸಿಕೋ, ಥೈಲ್ಯಾಂಡ್ , ಫಿಲಿಫಿನ್ಸ್ ನಲ್ಲಿ ಡೆಂಗ್ಯೂ ವ್ಯಾಕ್ಸಿನ್ ಗಳು ಯಶಸ್ವಿಯಾಗಿವೆ. Dengvaxia,q denga, ಎಂಬ ಎರಡು ಡೆಂಘಿ ವ್ಯಾಕ್ಸೀನ್ ನ್ನು ಅಮೇರಿಕಾ ಕಂಡುಹಿಡಿದಿದೆ. ಆದ್ರೇ ಭಾರತದ ಸೀರಮ್ ಇನ್ಸಿಟಿಟ್ಯೂಟ್ ವೊಂದ್ರಲ್ಲಿ ಡೆಂಘಿ ವ್ಯಾಕ್ಸಿನ್ ಬಗ್ಗೆ ಪ್ರಯೋಗ ನಡೆಯುತ್ತಿದ್ದು, ಮೊದಲ ಸುತ್ತಿನ ಟ್ರಯಲ್ ಯಶಸ್ವಿಯಾಗಿದೆ.
ಫೇಸ್ 2 ಹಾಗೂ ಫೇಸ್-3 ಟ್ರಯಲ್ ಗಳು ಸಕ್ಸಸ್ ಆದ್ರೇ ಭಾರತದಲ್ಲಿಯೂ ಡೆಂಘಿ ವ್ಯಾಕ್ಸಿನ್ ದೊರೆಯಲಿದೆ. ಹೀಗಾಗಿ ಡಿಮ್ಯಾಂಡ್ ಇದೆ. ಆದ್ರೆ ಆರೋಗ್ಯ ಸಚಿವರು ಸದ್ಯ ಕೇಂದ್ರ ಯಾವುದೇ ಈ ಬಗ್ಗೆ ಮಾಹಿತಿ ನೀಡಿಲ್ಲ ಅಂತಿದ್ದಾರೆ. ಸದ್ಯ ರಾಜ್ಯದಲ್ಲಿ ಡೆಂಘಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಸೊಳ್ಳೆ ಉತ್ಪತಿಯನ್ನ ತಡೆಯಲು ಹಾಗೂ ಸೊಳ್ಳೆ ನಾಶಪಡಸಿಲು ಸಲಹೆ ನೀಡಿದ್ದು ಜ್ವರ ನಿಯಂತ್ರಣಕ್ಕೆ ತಪಾಸಣೆಗೆ ಸೂಕ್ತ ಮುನ್ನೆಚ್ಚರಿಕೆಗೂ ಸಲಹೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ