ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು! ಇದಕ್ಕೆ ಕಡಿವಾಣ ಹೇಗೆ?

Financial Frauds And Cybercrime: ಸೈಬರ್ ವಂಚನೆಯ ವಹಿವಾಟಿನ ಬಗ್ಗೆ ದೂರು ನೀಡುವಾಗ ಅದು ದೇಶೀಯ ವಹಿವಾಟಾ ಅಥವಾ ಅಂತರಾಷ್ಟ್ರೀಯ ವಹಿವಾಟಾ ಎಂಬುದನ್ನು ಆಧರಿಸಿ ಈ ಕೆಳಗಿನ ದಾಖಲೆಗಳ ಒದಗಿಸಬೇಕು. ನೆನಪಿಡಿ, ಒಮ್ಮೆ ನಿಮ್ಮ ಕಾರ್ಡ್ ಅನ್ನು ನಿರ್ಬಂಧಿಸಿದರೆ, ಅದನ್ನು ಮತ್ತೆ ಸ್ವತಃ ನೀವೂ ಸಹ ಬಳಸಲಾಗುವುದಿಲ್ಲ. ಆದರೆ ನೀವು ಬ್ಲಾಕ್ ಮಾಡಿಸಿರುವ ಕಾರ್ಡ್‌ನ ಖಾತೆಯು ಸಕ್ರಿಯವಾಗಿರುತ್ತದೆ.

ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು! ಇದಕ್ಕೆ ಕಡಿವಾಣ ಹೇಗೆ?
ಕಳೆದ 3 ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಸೈಬರ್ ವಂಚನೆಗಳು!
Follow us
ಸಾಧು ಶ್ರೀನಾಥ್​
|

Updated on:Jul 09, 2024 | 5:10 AM

ಕಳೆದ ಮೂರು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ ಡಿಜಿಟಲ್ ಹಣಕಾಸು ವಂಚನೆಗಳು ನಡೆದಿವೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ( The Indian Cybercrime Coordination Centre – I4C) ವರದಿ ಮಾಡಿದೆ. ಮೌಲ್ಯ ನೊಡಿದರೆ ದಿಗ್ಭ್ರಮೆಯಾಗುತ್ತದೆ; ದಿಕ್ಕುತೋಚದಂತಾಗುತ್ತದೆ. 2023 ರಲ್ಲಿ 13,000 ಕ್ಕೂ ಹೆಚ್ಚು ಸೈಬರ್ ಹಣಕಾಸಿನ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅರ್ಧದಷ್ಟು ಡಿಜಿಟಲ್ ಪಾವತಿ ವಂಚನೆ (ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್) ಆಗಿದೆ. ಡಿಜಿಟಲ್ ಹಣಕಾಸು ವಂಚನೆಯ ಸಂತ್ರಸ್ತರು ಕನಿಷ್ಠ 10,319 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಮೊತ್ತ ಹೆಚ್ಚಾದಷ್ಟೂ ಇಂತಹ ಹಣಕಾಸಿನ ವಂಚನೆಗಳು ವೈಯಕ್ತಿಕ ಹಣಕಾಸಿನ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ನೇರ ವಿತ್ತೀಯ ನಷ್ಟಗಳು ಭಾರೀ ಒತ್ತಡ ಉಂಟುಮಾಡುತ್ತವೆ. ಬಲಿ ಪಶುಗಳ/ ಸಂತ್ರಸ್ತರ ಖಾತೆಗಳು ಇಂತಹ ವಂಚನೆಗಳಿಂದ ಖಾಲಿಯಾದಾಗ ಕ್ರೆಡಿಟ್ ಸ್ಕೋರ್‌ಗಳು ಪಾತಾಳ ಕಚ್ಚುತ್ತವೆ. ಹಣಕಾಸು ಸಂಸ್ಥೆಗಳು ನಂಬಿಕಾರ್ಹತೆ ಪ್ರಶ್ನೆಯನ್ನು ಎದುರಿಸುತ್ತವೆ. ಭಾವನಾತ್ಮಕ ಟೋಲ್ ಆತಂಕ ಮತ್ತು ಅಪನಂಬಿಕೆಯನ್ನು ಒಳಗೊಂಡಿರುತ್ತದೆ, ವಂಚನೆಯ ಪರಿಹಾರವನ್ನು ಮೀರಿ ಇರುತ್ತದೆ.

ಆರ್ಥಿಕ ಚಿತ್ರಣವನ್ನೇ ಛಿದ್ರಗೊಳಿಸುವ ಇಂತಹ ಮಹಾವಂಚನೆಗಳಿಗೆ ನೀವು (UPI or bank fraud) ಬಲಿಯಾಗಿದ್ದೀರಾ? ಭೀತಿಗೊಳಗಾಗಬೇಡಿ, ಹಾಗಂತ ಅಧೀರರಾಗಬೇಡಿ. ಹಾನಿಯನ್ನು ಕಡಿಮೆ ಮಾಡಲು ಮತ್ತು ನಿಮ್ಮ ಹಣವನ್ನು ಮರುಪಡೆಯಲು ಒಂದಷ್ಟು ತ್ವರಿತ ಮಾರ್ಗದರ್ಶಿ ಇಲ್ಲಿದೆ, ಗಮನಿಸಿ:

ಕ್ಷಿಪ್ರವಾಗಿ ಕಾರ್ಯಮಗ್ನರಾಗಿ, ತಕ್ಷಣ ವರದಿ ಮಾಡಿ: ಪ್ರತಿ ಕ್ಷಣವೂ ಮಹತ್ವದ್ದಾಗಿರುತ್ತದೆ. ನೀವು ವಂಚಕನ ಜಾಲದಲ್ಲಿ ಸಿಲುಕಿದ್ದೀರಿ ಎಂದು ಗೊತ್ತಾದ ಮರುಘಳಿಗೆಯೇ ಒಂದು ಕ್ಷಣವೂ ಹಾಳುಮಾಡದೆ ನಿಮ್ಮ ಬ್ಯಾಂಕ್ ಅಥವಾ UPI ಅಪ್ಲಿಕೇಶನ್ ಪೂರೈಕೆದಾರರನ್ನು ಸಂಪರ್ಕಿಸಿ. ಹೀಗೆ Golden Hour ನಲ್ಲಿ ಕಾರ್ಯಗತವಾದರೆ ನಿಮ್ಮ ಹಣವನ್ನು ಪೂರ್ಣವಾಗಿ ವಾಪಸ್​ ಪಡೆಯುವ ಸಾಧ್ಯತೆಗಳು ಹೆಚ್ಚಿರುತ್ತದೆ (ಇದು ಆಯಾ ಬ್ಯಾಂಕ್ ನೀತಿಗಳಿಗೆ ಒಳಪಟ್ಟಿರುತ್ತದೆ).

ನಿಮ್ಮ ಖಾತೆಗಳಲ್ಲಿ ನಡೆಯುವ ಯಾವುದೇ ವ್ಯವಹಾರವನ್ನು ನಿರ್ಬಂಧಿಸಿ: ಮೋಸ, ವಂಚನೆ, ಅನಧಿಕೃತ ವಹಿವಾಟುಗಳನ್ನು ತಡೆಯಲು ನಿಮ್ಮ ಖಾತೆಗಳನ್ನು ಫ್ರೀಜ್ ಮಾಡಲು ಮತ್ತು ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ಬಂಧಿಸಲು ನಿಮ್ಮ ಬ್ಯಾಂಕ್‌ಗೆ ಮನವಿ ಮಾಡಿಕೊಳ್ಳಿ.

Also Read: Political Crime Thriller – ಭಾರತದ ಚೊಚ್ಚಲ ಲೈಂಗಿಕ ಹಗರಣದಿಂದಾಗಿ ಆ ನಾಯಕನಿಗೆ ಪ್ರಧಾನಿ ಖುರ್ಚಿ ಜಸ್ಟ್​​ ಮಿಸ್​ ಆಗಿತ್ತು! ಸಂಜಯ್​ ಗಾಂಧಿ ‘ಕೈ’ವಾಡ ಏನಿತ್ತು?

ಪುರಾವೆಗಳನ್ನು ಸಂಗ್ರಹಿಸಿ: ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿ. ಅದು ನಿಮಗೆ ಬಂದಿರುವ ಇ ಮೇಲ್‌ಗಳು, SMS ಸಂದೇಶಗಳು, ವಹಿವಾಟಿನ ವಿವರಗಳು, ಸ್ಕ್ರೀನ್‌ಶಾಟ್‌ಗಳು, ಮೊಬೈಲ್ ಕರೆ ವಿವರಗಳು, ಅಥವಾ ಘಟನೆಗೆ ಸಂಬಂಧಿಸಿದ ಯಾವುದಾದರೂ ವಿವರ ಒಳಗೊಂಡಿರುತ್ತದೆ. ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇವೆಲ್ಲಾ ಮಹತ್ವದ್ದು ಮತ್ತು ನಿರ್ಣಾಯಕವೂ ಆಗಿರುತ್ತವೆ.

ವಿವಾದ ಪರಿಹಾರ ಪ್ರಕ್ರಿಯೆ: ನಿಮ್ಮ ಬ್ಯಾಂಕ್‌ನ ವ್ಯಾಜ್ಯ ಪರಿಹಾರ ಕಾರ್ಯವಿಧಾನಗಳನ್ನು ಶ್ರದ್ಧೆಯಿಂದ ಅನುಸರಿಸಿ. ನಿಮ್ಮ ಪ್ರಕರಣವನ್ನು ಬಲಪಡಿಸಲು, ತನಿಖೆಯನ್ನು ಮುಂದುವರಿಸಲು ಎಲ್ಲಾ ದಾಖಲೆಗಳನ್ನು ಒದಗಿಸಿ.

ಪೊಲೀಸ್ ದೂರನ್ನು ದಾಖಲಿಸಿ: ಕೆಲವು ಸಂದರ್ಭಗಳಲ್ಲಿ, ಸ್ಥಳೀಯ ಸೈಬರ್ ಕ್ರೈಮ್ ಘಟಕ (Cybercrime, Economic offences, Narcotics -CEN) ಅಥವಾ ಪೊಲೀಸರಿಗೆ ದೂರು ಸಲ್ಲಿಸುವುದು ಅಗತ್ಯವಾಗಬಹುದು. ಈ ಅಧಿಕೃತ ದಾಖಲೆಯು ಹೆಚ್ಚಿನ ತನಿಖೆಗಳಿಗೆ ಸಹಾಯ ಮಾಡುತ್ತದೆ.

ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ರಕ್ಷಿಸಿಕೊಳ್ಳಿ: ನಿಮ್ಮ ಕ್ರೆಡಿಟ್ ಸ್ಕೋರ್‌ಗೆ (Credit Score) ಹಾನಿಯಾಗದಂತೆ ತಡೆಯಲು ಮೋಸದ ಚಟುವಟಿಕೆಯ ಬಗ್ಗೆ ನಿಮ್ಮ ಕ್ರೆಡಿಟ್ ಬ್ಯೂರೋಗೆ ತಿಳಿಸಿ.

ಜಾಗರೂಕರಾಗಿರಿ: ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತ್ವರಿತವಾಗಿ ಗುರುತಿಸಲು ನಿಮ್ಮ ಖಾತೆಯಲ್ಲಿ ನಡೆಯುತ್ತಿರುವ ವಂಚಕ ವಹಿವಾಟನ್ನು ಗಮನಿಸುತ್ತಿರಿ. ಇದು ತ್ವರಿತವಾಗಿ ವರದಿ ಮಾಡಲು ಮತ್ತು ಹೆಚ್ಚಿನ ನಷ್ಟವನ್ನು ಕಡಿಮೆ ಮಾಡಲು ನಿಮಗೆ ಅನುಕೂಲವಾಗುತ್ತದೆ.

ನೆನಪಿಡಿ: ಹೀಗೆ ತ್ವರಿತವಾಗಿ ಕಾರ್ಯನಿರ್ವಹಿಸುವ ಮೂಲಕ ಮತ್ತು ಈ ಹಂತಗಳನ್ನು ಅನುಸರಿಸುವ ಮೂಲಕ, ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಮರುಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಮತ್ತು ಭವಿಷ್ಯದ ವಂಚನೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

ನಿಮಗೆ ಅಗತ್ಯವಿರುವ ದಾಖಲೆಗಳು ವಂಚನೆಯ ವಹಿವಾಟಿನ ಬಗ್ಗೆ ದೂರು ನೀಡುವಾಗ ಆ ವಂಚನೆಯು ದೇಶೀಯ ವಹಿವಾಟಾ ಅಥವಾ ಅಂತರಾಷ್ಟ್ರೀಯ ವಹಿವಾಟಾ ಎಂಬುದನ್ನು ಆಧರಿಸಿ ನೀವು ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು. ನೆನಪಿಡಿ, ಒಮ್ಮೆ ನಿಮ್ಮ ಕಾರ್ಡ್ ಅನ್ನು ನಿರ್ಬಂಧಿಸಿದರೆ, ಅದನ್ನು ಮತ್ತೆ ಸ್ವತಃ ನೀವೂ ಸಹ ಬಳಸಲಾಗುವುದಿಲ್ಲ. ಬ್ಯಾಂಕ್ ನಿಮಗೆ ಹೊಸ ಬದಲಿ ಕಾರ್ಡ್ ಅನ್ನು ಬೇರೆ ಸಂಖ್ಯೆಯೊಂದಿಗೆ ನೀಡುತ್ತದೆ ಅಷ್ಟೆ. ಆದರೆ ನೀವು ಬ್ಲಾಕ್ ಮಾಡಿಸಿರುವ ಕಾರ್ಡ್‌ನ ಖಾತೆಯು ಸಕ್ರಿಯವಾಗಿರುತ್ತದೆ.

ದೇಶೀಯ ವಹಿವಾಟುಗಳಿಗಾಗಿ – ವಹಿವಾಟಿನ ವಿವರಗಳೊಂದಿಗೆ ಮತ್ತು ನಿಮ್ಮಿಂದ ಸಹಿ ಮಾಡಲಾದ ದೇಶೀಯ ವಹಿವಾಟುಗಳ ಕಾರ್ಡ್ ಹೋಲ್ಡರ್ ವ್ಯಾಜ್ಯದ ಅರ್ಜಿ (Cardholder Dispute Form -CDF).

ದಿನಾಂಕ ಮತ್ತು ನಿಮ್ಮ ಸಹಿಯನ್ನು ಹೊಂದಿರುವ ಘಟನೆ ಪತ್ರವನ್ನು (Incident Letter) ನಿಮ್ಮ ಬ್ಯಾಂಕ್​​ಗೆ ನೀಡಬೇಕು. ಇದು (ಎ) ಖಾತೆ ಸಂಖ್ಯೆ, ಕಾರ್ಡ್ ಸಂಖ್ಯೆ ಮತ್ತು ವಂಚನೆ/ನಷ್ಟದ ದಿನಾಂಕದ ಬಗ್ಗೆ ವಿವರಗಳನ್ನು ಹೊಂದಿರಬೇಕು, (ಬಿ) ವಂಚನೆ ಸಂಭವಿಸಿದಾಗ ಕಾರ್ಡ್ ಯಾರ ಬಳಿ ಇತ್ತು ಮತ್ತು ವಂಚನೆಯ ವಹಿವಾಟಿನ ಬಗ್ಗೆ ನೀವು ಹೇಗೆ ತಿಳಿದು ಕೊಂಡಿರಿ, ಮತ್ತು (ಸಿ) ವಂಚನೆಯ ಬಗ್ಗೆ ಯಾವುದೇ ಹೆಚ್ಚುವರಿ ಮಾಹಿತಿ ಇದ್ದರೂ ಆದ್ಯವಾಗಿ ಬ್ಯಾಂಕಿಗೆ ತಿಳಿಸಿ.

ವಂಚನೆಯ ವಹಿವಾಟು 20,000 ರೂ. ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿದ್ದರೆ ಕಾರ್ಡ್ ಮತ್ತು ವಹಿವಾಟಿನ ವಿವರಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಅದಾದಮೇಲೆ ಮೂಲ ಎಫ್‌ಐಆರ್ / ಆನ್‌ಲೈನ್ ಎಫ್‌ಐಆರ್ / ಘಟನೆಯ ಪತ್ರವನ್ನು ಪೊಲೀಸರು ಸ್ವೀಕಾರ ಮಾಡಿರುವ ಬಗ್ಗೆ ಮಾಹಿತಿ ನೀಡಬೇಕು.

ವಿದೇಶದಲ್ಲಿ ನಡೆದ ವಂಚನೆಯ ಬಗ್ಗೆ: ಅಂತರರಾಷ್ಟ್ರೀಯ ವಂಚನೆಯ ಸಂದರ್ಭದಲ್ಲಿ ಭರ್ತಿ ಮಾಡಿದ ಗ್ರಾಹಕ ವಿವಾದ ಫಾರ್ಮ್ ಮತ್ತು ಘಟನೆ ಪತ್ರದ (Customer Dispute Form and Incident Letter) ಜೊತೆಗೆ ನೀವು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು:

ಅಂತರರಾಷ್ಟ್ರೀಯ ವಹಿವಾಟಿನ ಮೂಲಕ ವಂಚನೆ ನಡೆದಿದ್ದರೆ ಮತ್ತು ಗ್ರಾಹಕರು ವಂಚನೆ ನಡೆದಾಗ ಆ ವಿದೇಶಿ ಸ್ಥಳದಲ್ಲಿದ್ದರೆ ಸಾಗರೋತ್ತರ ಸ್ಥಳೀಯ ಪೊಲೀಸರಿಂದ ಎಫ್‌ಐಆರ್ ಕಡ್ಡಾಯವಾಗಿದೆ. ಗ್ರಾಹಕರು ಭಾರತದಲ್ಲಿದ್ದಾಗ ವಂಚನೆಯು ಅಂತರರಾಷ್ಟ್ರೀಯ ವಹಿವಾಟು ಮೂಲಕ ನಡೆದಿದ್ದರೆ ಎಫ್‌ಐಆರ್ ಅಗತ್ಯವಿಲ್ಲ.

ಇನ್ನಷ್ಟು  ಪ್ರೀಮಿಯಂ ಲೇಖನಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ

Published On - 4:42 am, Tue, 9 July 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ