ಹೈ ಬೀಮ್‌ ಲೈಟ್‌ ಹಾಕಿಕೊಂಡು ಓಡಾಡುವ ವಾಹನಗಳಿಗೆ ಶಾಕ್, ಕರ್ನಾಟಕದಾದ್ಯಂತ 8244 ಕೇಸ್ ಬುಕ್

High Beam Lights: ರಾತ್ರಿ ವೇಳೆ ಹೈ ಬೀಮ್ ಲೈಟ್ ಉಪಯೋಗದಿಂದ ಅಪಘಾತ ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಪೊಲೀಸರು ಜುಲೈ 1ರಿಂದ ಕಾರ್ಯಾಚರಣೆಗೆ ಇಳಿದಿದ್ದು, ಹೀಗೆ ಕಣ್ಣು ಕುಕ್ಕುವ ಹೈ ಬೀಮ್​ ಲೈಟ್ ಹಾಕಿಕೊಂಡು ಚಲಾಯಿಸಿದವರ ವಿರುದ್ಧ ಕೇಸು ಜಡಿಯುತ್ತಿದ್ದಾರೆ. ಹಾಗಾದ್ರೆ, ಈ ವಾರ ಅಂದರೆ ಜುಲೈ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಎಷ್ಟು ಕೇಸ್​ಗಳು ದಾಖಲಾಗಿವೆ? ಯಾವ ಜಿಲ್ಲೆಯಲ್ಲಿ ಎಷ್ಟು ಎನ್ನುವ ವಿವರ ಇಲ್ಲಿದೆ.

ಹೈ ಬೀಮ್‌ ಲೈಟ್‌ ಹಾಕಿಕೊಂಡು ಓಡಾಡುವ ವಾಹನಗಳಿಗೆ ಶಾಕ್, ಕರ್ನಾಟಕದಾದ್ಯಂತ 8244 ಕೇಸ್ ಬುಕ್
ಹೈ ಬೀಮ್‌ ಲೈಟ್‌
Follow us
ರಮೇಶ್ ಬಿ. ಜವಳಗೇರಾ
|

Updated on:Jul 08, 2024 | 11:01 PM

ಬೆಂಗಳೂರು, (ಜುಲೈ 08): ವಾಹನಕ್ಕೆ ಬೇಕಾಬಿಟ್ಟಿ ಎಕ್ಸ್‌ಟ್ರಾ ಲೈಟ್ ಅಳವಡಿಸಿಕೊಂಡು ಚಲಾಯಿಸುವ ವಾಹನ ಚಾಲಕರು ಇನ್ನು ಮುಂದೆ ಎಚ್ಚರ ವಹಿಸಬೇಕಿದೆ. ಹೈ ಬೀಮ್ ಲೈಟ್ ಉಪಯೋಗಿಸುತ್ತಿದ್ದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕರ್ನಾಟಕದಾದ್ಯಂತ ಈ ವಾರ ಅಂದರೆ ಜುಲೈ 01ರಿಂದ ಜುಲೈ 7ರ ವರೆಗೆ 8244 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ರಾತ್ರಿ ವೇಳೆ ಹೈ ಬೀಮ್ ಲೈಟ್ ಉಪಯೋಗದಿಂದ ಅಪಘಾತ (Accidents) ಪ್ರಕರಣಗಳು ಹೆಚ್ಚಿವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಹೀಗೆ ಹಾಕಿಕೊಂಡು ಚಲಾಯಿಸಿದವರ ವಿರುದ್ಧ ಕೇಸ್ ಜಡಿದಿದ್ದಾರೆ. ಈ ಮೂಲಕ ಹೈ ಬೀಮ್ ಎಲ್ ಇಡಿ ಹೆಡ್ ಲೈಟ್ ಹೊಂದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕ ಎನಿಸಿಕೊಂಡಿದೆ.

ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್​ಇಡಿ ಲೈಟ್​ಗಳನ್ನು ಅಳವಡಿಸಿ ಇತರರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಜುಲೈನಿಂದ ಕಾರ್ಯಾಚರಣೆ ರಂಭಿಸುವುದಾಗಿ ತಿಳಿಸಿದ್ದ ಕರ್ನಾಟಕ ಸಂಚಾರ ಪೊಲೀಸರು ಇದೀಗ ಬಿಸಿಮುಟ್ಟಿಸಲು ಆರಂಭಿಸಿದ್ದು, ಕೇವಲ ಒಂದೇ ವಾರದಲ್ಲಿ (ಏಳು ದಿನ) ಎಲ್ಲಾ ಜಿಲ್ಲೆಗಳಲ್ಲಿ ಸೇರಿಸಿದಂತೆ ಕರ್ನಾಟಕದಲ್ಲಿ ಒಟ್ಟು 8244 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ. ಅಲ್ಲದೇ ಕ್ರಮ ಕೈಗೊಂಡ ಅಧಿಕಾರಿಗಳಿಗೆ, ಸಿಬ್ಬಂದಿಗೆ ಅಲೋಕ್ ಕುಮಾರ್ ಅವರು ಎಕ್ಸ್​ನಲ್ಲಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ವಾಹನದಲ್ಲಿದೆಯಾ ಕಣ್ಣುಕುಕ್ಕುವ ಎಲ್​ಇಡಿ ಲೈಟ್? ಇನ್ನು ಮುಂದೆ ಬೀಳಲಿದೆ ಕೇಸ್, ಸರ್ಕಾರದಿಂದ ಹೊಸ ಆದೇಶ

ಬೆಂಗಳೂರಿನಲ್ಲೇ ಅತಿಹೆಚ್ಚು

ತೀಕ್ಷ್ಣ ಬೆಳಕು ಸೂಸುವಂಥ ಎಲ್​ಇಡಿ ಲೈಟ್​ಗಳನ್ನು ಅಳವಡಿಸಿದ ಅತಿಹೆಚ್ಚು ಪ್ರಕರಣಗಳು ಬೆಂಗಳೂರಿನ ನಗರ ಜಿಲ್ಲೆಯಲ್ಲೇ ಎನ್ನುವುದು ವರದಿಯಾಗಿವೆ. ನಗರದಲ್ಲಿ ಏಳು ದಿನಗಳಲ್ಲಿ ಅಂದರೆ ಜುಲೈ 01 ರಿಂದ ಜುಲೈ 7ರ ವರೆಗೆ ಬರೋಬ್ಬರಿ 3354 ಕೇಸ್​ ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ರಾಯಚೂರು (386, ಮೈಸೂರು ನಗರ (381), ಮಂಗಳೂರು ನಗರ (325) ಇವೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ಪ್ರಕರಣ ದಾಖಲಾಗಿದ್ದು, ನಿಮ್ಮ ಜಿಲ್ಲೆಗಳಲ್ಲಿ ಎಷ್ಟು ಕೇಸ್ ದಾಖಲಾಗಿವೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿಕೊಳ್ಳಿ.

ಯಾವ ಜಿಲ್ಲೆಗಳಲ್ಲಿ? ಯಾವಾಗ ಎಷ್ಟೆಷ್ಟು ಕೇಸ್?

High Beam Lights‌

Published On - 10:47 pm, Mon, 8 July 24

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ