ದೇವಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ಹೆಚ್ ಡಿ ದೇವೇಗೌಡ
ಪೂಜೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ದೇವೇಗೌಡರು, ಇವತ್ತು ಮಧ್ಯಾಹ್ನ 1.30 ರ ಸುಮಾರು ನಿಖಿಲ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿ ಪೂಜೆಯಲ್ಲಿ ನಿಖಿಲ್ ಅವರಲ್ಲದೆ, ಹೆಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಪತ್ನಿ ರೇವತಿ ಸಹ ಭಾಗಿಯಾಗಿದ್ದರೆಂದು ಹೇಳಿದರು.
ಬೆಂಗಳೂರು: ಜೆಡಿಎಸ್ ಪಿತಾಮಹ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ದೈವಭಕ್ತರು. ಯಾವುದೇ ಕೆಲಸ ಮಾಡುವ ಮೊದಲು ದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಇಂದು ಮಧ್ಯಾಹ್ನ ಚನ್ನಪಟ್ಟಣ ಉಪ ಚುನಾವಣೆಗಾಗಿ ಸಲ್ಲಿಸಲಿರುವ ನಾಮಪತ್ರವನ್ನು ದೇವೇಗೌಡರು ಜೆಪಿ ನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿಟ್ಟು ಪೂಜೆ ನೆರವೇರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಜೊತೆ ಮೈತ್ರಿಗೆ ಧಕ್ಕೆಯಾಗದ ಹಾಗೆ ವ್ಯವಹರಿಸುವಂತೆ ದೇವೇಗೌಡ ಹೇಳಿದ್ದಾರೆ: ನಿಖಿಲ್ ಕುಮಾರಸ್ವಾಮಿ