ಪ್ರಜಾಪ್ರಭುತ್ವ ಹಬ್ಬಕ್ಕೆ ಹೆಚ್ಚಾದ ಮೆರೆಗು; ಚಿತ್ರದುರ್ಗದಲ್ಲಿ ತಲೆ ಎತ್ತಿದೆ ಏಳು ಸುತ್ತಿನ ಕೋಟೆ

|

Updated on: May 09, 2023 | 2:55 PM

ಕೋಟೆನಾಡು ಚಿತ್ರದುರ್ಗದಲ್ಲಿ ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಮತಗಟ್ಟೆ ಸಂಖ್ಯೆ 221ಕ್ಕೆ ಏಳುಸುತ್ತಿನ ಕೋಟೆ ಮಾದರಿ ಮೆರುಗು ನೀಡಲಾಗಿದೆ.

ಮೇ 10ರ ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನಕ್ಕೆ ರಾಜ್ಯದೆಲ್ಲೆಡೆ ಭರ್ಜರಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕೋಟೆನಾಡು ಚಿತ್ರದುರ್ಗದಲ್ಲಿ ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಮತಗಟ್ಟೆ ಸಂಖ್ಯೆ 221ಕ್ಕೆ ಏಳುಸುತ್ತಿನ ಕೋಟೆ ಮಾದರಿ ಮೆರುಗು ನೀಡಲಾಗಿದೆ. ಕೆಳಗೋಟೆ ಬಡಾವಣೆಯ ಸರಸ್ವತಿ ಲಾ ಕಾಲೇಜಿನ ಮತಗಟ್ಟೆಯನ್ನು ಕೋಟೆ ಮಾದರಿಯಲ್ಲಿ ಮತದಾನಕ್ಕೆ‌ ಸಿದ್ಧ ಮಾಡಲಾಗಿದೆ.

ಚಿತ್ರದುರ್ಗದ ಕಲಾ‌ ಕಾಲೇಜಿನಲ್ಲಿ ಮತಯಂತ್ರ ವಿತರಣೆ ಮಾಡಲಾಗಿದ್ದು ಇವಿಎಂ ಪಡೆದು ಮತಗಟ್ಟೆಗಳತ್ತ ಸಿಬ್ಬಂದಿ ಹೊರಡಿದ್ದಾರೆ. 6ವಿಧಾನಸಭೆ ಕ್ಷೇತ್ರಗಳ ಮತಗಟ್ಟೆ ಸಿಬ್ಬಂದಿಗೆ ಇವಿಎಂ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1648 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ. ಒಟ್ಟು 7648 ಮತಗಟ್ಟೆ ಅಧಿಕಾರಿಗಳಿಂದ ಕಾರ್ಯ ನಿರ್ವಹಣೆ.

Published on: May 09, 2023 02:53 PM