AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲೊಂದು ವಿಚಿತ್ರ ಮನೆ, ಈ ಅಪರೂಪದ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!

ಬೆಂಗಳೂರಿನಲ್ಲೊಂದು ವಿಚಿತ್ರ ಮನೆ, ಈ ಅಪರೂಪದ ಮನೆ ನೋಡಿದ್ರೆ ನೀವು ಶಾಕ್ ಆಗ್ತಿರಿ!

ರಮೇಶ್ ಬಿ. ಜವಳಗೇರಾ
|

Updated on: May 15, 2026 | 3:40 PM

Share

ಅನೇಕರು 30*40 ಸೈಟ್ ನಲ್ಲಿ ಮನೆ ಕಟ್ಟಿದ್ದವರೇ ಜಾಗ ಸಾಕಾಗಲ್ಲ, ಮನೆ ಸಣ್ಣದಾಯ್ತು ಎಂದು ಗೋಳಾಡುತ್ತಾರೆ. ಹೀಗಿರುವಾಗ ಬೆಂಗಳೂರಿನಲ್ಲಿ (Bengaluru) ಕೇವಲ 250 ಚದರ ಅಡಿಯಲ್ಲೇ ಬರೋಬ್ಬರಿ 4 ಮಹಡಿ ಮನೆ ತಲೆ ಎತ್ತಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಹೌದು...ರಾಜರಾಜೇಶ್ವರಿ ನಗರದ ಜವರೇಗೌಡ ನಗರದಲ್ಲಿರುವ ಈ ಅಪರೂಪದ ಮನೆ, ಮುಂದಕ್ಕೆ 4 ಅಡಿ, ಹಿಂದಕ್ಕೆ 12 ಅಡಿ ಅಗಲ, 20 ಅಡಿ ಉದ್ದದಲ್ಲಿ ತಲೆ ಎತ್ತಿದೆ.

ಬೆಂಗಳೂರು, (ಮೇ 15): ಅನೇಕರು 30*40 ಸೈಟ್ ನಲ್ಲಿ ಮನೆ ಕಟ್ಟಿದ್ದವರೇ ಜಾಗ ಸಾಕಾಗಲ್ಲ, ಮನೆ ಸಣ್ಣದಾಯ್ತು ಎಂದು ಗೋಳಾಡುತ್ತಾರೆ. ಹೀಗಿರುವಾಗ ಬೆಂಗಳೂರಿನಲ್ಲಿ (Bengaluru) ಕೇವಲ 250 ಚದರ ಅಡಿಯಲ್ಲೇ ಬರೋಬ್ಬರಿ 4 ಮಹಡಿ ಮನೆ ತಲೆ ಎತ್ತಿದ್ದು, ನೋಡುಗರನ್ನು ಆಶ್ಚರ್ಯಕ್ಕೀಡು ಮಾಡಿದೆ. ಹೌದು…ರಾಜರಾಜೇಶ್ವರಿ ನಗರದ ಜವರೇಗೌಡ ನಗರದಲ್ಲಿರುವ ಈ ಅಪರೂಪದ ಮನೆ, ಮುಂದಕ್ಕೆ 4 ಅಡಿ, ಹಿಂದಕ್ಕೆ 12 ಅಡಿ ಅಗಲ, 20 ಅಡಿ ಉದ್ದದಲ್ಲಿ ತಲೆ ಎತ್ತಿದ್ದು, ಇದೀಗ ಸ್ಥಳೀಯರಿಗೆ ಅಪಾಯ ತಂದೊಡ್ಡಿದೆ.

ಇಷ್ಟು ಸಣ್ಣ ಜಾದಲ್ಲೇ ನಾಲ್ಕು ಮಹಡಿ ಮನೆ 7 ವರ್ಷದ ಹಿಂದೆಯೇ ಕಟ್ಟಿದ್ದು, ನಿರ್ಮಾಣವಾದ ಒಂದೇ ವರ್ಷದಲ್ಲಿ ಬಿರುಕು ಬಿಟ್ಟಿದೆ. ಮನೆ ಅರ್ಧ ಅಡಿ ಮುಂದಕ್ಕೆ ವಾಲಿದ್ದು, ಪಕ್ಕದ ಮನೆಗೂ ಅಪಾರ ಹಾನಿ ಆತಂಕ ಎದುರಾಗಿದೆ. ಇದರಿಂದ ಪಕ್ಕದ ಮನೆಯವರು ಕಳೆದ 5 ವರ್ಷ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದು, ಶಿಥಿಲಗೊಂಡಿರುವ ಮನೆ ತೆರವು ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯ ಈ ಮನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಇದೇ ಮೇ 28ರಂದು ಸ್ಥಳ ಮಹಜರು ಮಾಡುವುದಾಗಿ ಮನೆಗೆ ನೋಟೀಸ್ ಅಂಟಿಸಿದ್ದಾರೆ. ಮನೆಯ ಹೊರಭಾಗ, ಒಳಭಾಗದ ಹತ್ತಾರು ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವ ಸಮಯದಲ್ಲಿ ಬೀಳುತ್ತೋ ಎನ್ನುವ ಆತಂಕದಲ್ಲಿ ಸ್ಥಳೀಯರಿದ್ದಾರೆ. ಇನ್ನು ಮನೆ ಹೇಗಿದೆ ಎನ್ನುವುದನ್ನು ನೀವು ಒಂದು ಸಲ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Ramesh B Jawalagera
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More