ಆನೆಕಲ್: ಯೂನಿವರ್ ಕಾಯಿನ್ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ತಮಿಳುನಾಡಿನ ಅರುಣ್ ಕುಮಾರ್ ಎಂಬಾತ ಆನೇಕಲ್‌ನಲ್ಲಿ ಯೂನಿಕಾಯಿನ್ ಕ್ರಿಪ್ಟೋ ಕರೆನ್ಸಿ ಹೂಡಿಕೆಯಲ್ಲಿ ಸಾವಿರಾರು ಜನರನ್ನು ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಎ.ಕೆ. ಟ್ರೇಡರ್ಸ್ ಎಂಬ ಹೆಸರಿನಲ್ಲಿ ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ, 77,000 ರೂ. ಹೂಡಿಕೆ ಮಾಡಿದವರಿಗೆ ವಾರಕ್ಕೆ 6375 ರೂ. ಲಾಭ ನೀಡುವುದಾಗಿ ಹೇಳಿ ವಂಚಿಸಿದ್ದಾನೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಆನೆಕಲ್, ಮೇ 24: ಯೂನಿವರ್ ಕಾಯಿನ್ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ, ಹಣ ಡಬಲ್ ಆಗುತ್ತದೆ ಎಂದು ತಮಿಳುನಾಡು ಮೂಲದ ವ್ಯಕ್ತಿ ಆನೇಕಲ್ನ ಸಾವಿರಾರು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ. ತಮಿಳುನಾಡು ಮೂಲದ ಅರುಣ್ ಕುಮಾರ್ ವಂಚಿಸಿದ ಆರೋಪಿ. ಎ.ಕೆ.ಟ್ರೇಡರ್ಸ್ನಲ್ಲಿ ಒಮ್ಮೆ ಹಣ ಹೂಡಿಕೆ ಮಾಡಿದರೆ ಹಣ ಡಬಲ್ ಆಗುತ್ತದೆ. 77 ಸಾವಿರ ಹಣ ಹೂಡಿಕೆಮಾಡಿದರೆ ವಾರಕ್ಕೆ 6375 ರಂತೆ ₹1,20,000 ಬರುತ್ತೆ. 7,70,000 ಲಕ್ಷ ಹಣ ಹೂಡಿಕೆ ಮಾಡಿದರೆ 95 ಸಾವಿರದಂತೆ 20 ವಾರಗಳಲ್ಲಿ 19 ಲಕ್ಷ ಹಣವನ್ನು ಗಳಿಸಬಹುದೆಂದು ನಂಬಿಸಿ ಆರೋಪಿ ಅರುಣ್ ಕುಮಾರ್ ವಂಚಿಸಿದ್ದಾನೆ ಎನ್ನಲಾಗಿದೆ.