ಮಹಿಳೆಯರ “ಶಕ್ತಿ” ಗೆ ಮುರಿದ ಸರ್ಕಾರಿ ಬಸ್ ಡೋರ್, ಹೆಣ್ಮಕ್ಳೆ ಸ್ಟ್ರಾಂಗು ಗುರು..! ಇಲ್ಲಿದೆ ವಿಡಿಯೋ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಮಹಿಳಾ ಮಣಿಗಳು ಶಕ್ತಿ ಪ್ರದರ್ಶನ ಮಾಡಿದ್ದು, ಬಸ್ ಬಾಗಿಲನ್ನೇ ಮುರಿದು ಹಾಕಿದ್ದಾರೆ.
ಚಾಮರಾಜನಗರ: ಶಕ್ತಿ ಯೋಜನೆ (Shakti Yojana) ಅಡಿ ರಾಜ್ಯ ಸರ್ಕಾರ (Karnataka Government) ನಾನ್ ಎಸಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus Travel) ಅವಕಾಶ ಮಾಡಿಕೊಟ್ಟಿದೆ. ಜೂ.11 ರಂದು ಈ ಯೋಜನೆಗೆ ಚಾಲನೆ ದೊರೆತಿದ್ದು, ಅಂದಿನಿಂದ-ಇಂದಿನವರೆಗು ನಾನ್ ಎಸಿ ಬಸ್ಗಳು ಫುಲ್ ರಶ್ ಆಗಿವೆ. ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರು ದೇಗುಲ ಹಾಗೂ ಇನ್ನೀತರ ಸ್ಥಳಕ್ಕೆ ತೆರಳುತ್ತಿದ್ದು, ಬಸ್ ಫುಲ್ ಆಗಿವೆ. ಹೀಗೆ ರಶ್ ಆದ ಚಾಮರಾಜನಗರ (Chamarajanagar) ಜಿಲ್ಲೆಯ ಕೊಳ್ಳೇಗಾಲದಲ್ಲಿ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಮಹಿಳಾ ಮಣಿಗಳು ಶಕ್ತಿ ಪ್ರದರ್ಶನ ಮಾಡಿದ್ದು, ಬಸ್ ಬಾಗಿಲನ್ನೇ ಮುರಿದು ಹಾಕಿದ್ದಾರೆ.
ಹೌದು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಇಂದು (ಜೂ.17) ಮಲೈ ಮಹದೇಶ್ವರ ಬೆಟ್ಟದತ್ತ ಮಹಿಳೆಯರು ಹೆಚ್ಚಾಗಿ ಹೊರಟಿದ್ದಾರೆ. ಕೊಳ್ಳೇಗಾಲದಲ್ಲಿ ಮಹಿಳೆಯರು ನೂಕು ನುಗ್ಗಲಿನಿಂದ ಜಿದ್ದಿಗೆ ಬಿದ್ದು ಬಸ್ ಹತ್ತಲು ಹೋಗಿ ಬಾಗಿಲನ್ನೇ ಮುರಿದು ಹಾಕಿದ್ದಾರೆ. ಈ ಘಟನೆಯಿಂದ ಬಸ್ ಕಂಡಕ್ಟರ್ ಅವರು, ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿ ನಿಂತುಕೊಂಡಿದ್ದರು.