ಫ್ರಾನ್ಸ್ ಅಧ್ಯಕ್ಷರ ಕಪಾಳಕ್ಕೆ ಹೊಡೆದರಾ ಹೆಂಡತಿ? ವಿಮಾನದಲ್ಲಿ ಆಗಿದ್ದೇನು?
ಭಾನುವಾರ ಸಂಜೆ ಹನೋಯ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ ವಿಡಿಯೋ ಭಾರೀ ವೈರಲ್ ಆಗಿದೆ. ಬ್ರಿಗಿಟ್ ಅವರು ತಮ್ಮ ಪತಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವಿಮಾನದಿಂದ ಇಳಿಯುವಾಗ ಮ್ಯಾಕ್ರನ್ ಅವರಿಗೆ ಅವರ ಪತ್ನಿ ಕೆನ್ನೆಗೆ ಹೊಡೆದಿರುವ ರೀತಿಯ ಕ್ಷಣವನ್ನು ಕ್ಯಾಮೆರಾಗಳು ಸೆರೆಹಿಡಿದಿವೆ.
ನವದೆಹಲಿ, ಮೇ 26: ಕೆಲವೊಮ್ಮೆ ನಮಗೆ ಅರಿಯದೆ ಆದ ಕೆಲವು ಘಟನೆಗಳಿಂದ ನಾವು ತೀವ್ರ ಮುಜುಗರಕ್ಕೆ ಸಿಲುಕಬೇಕಾಗುತ್ತದೆ. ನಿನ್ನೆ ಸಂಜೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ (French President Emmanuel Macron)
ವಿಷಯದಲ್ಲಿ ಆಗಿದ್ದೂ ಇದೇ. ಭಾನುವಾರ ಸಂಜೆ ಹನೋಯ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ ವಿಡಿಯೋ ಭಾರೀ ವೈರಲ್ ಆಗಿದೆ. ಬ್ರಿಗಿಟ್ ಅವರು ತಮ್ಮ ಪತಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವಿಮಾನದಿಂದ ಇಳಿಯುವಾಗ ಮ್ಯಾಕ್ರನ್ ಅವರಿಗೆ ಅವರ ಪತ್ನಿ ಕೆನ್ನೆಗೆ ಹೊಡೆದಿರುವ ರೀತಿಯ ಕ್ಷಣವನ್ನು ಕ್ಯಾಮೆರಾಗಳು ಸೆರೆಹಿಡಿದಿವೆ. ಇದರಿಂದ ಮುಜುಗರಕ್ಕೀಡಾದ ಮ್ಯಾಕ್ರನ್ ಕೆಲಕಾಲ ಒಳಗೆ ಹೋಗಿ ನಂತರ ತಮ್ಮ ಪತ್ನಿಯೊಂದಿಗೆ ಕೆಳಗೆ ಇಳಿದು ಬಂದಿದ್ದಾರೆ.
ಮ್ಯಾಕ್ರನ್ ಭಾನುವಾರ ಸಂಜೆ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಹನೋಯ್‌ಗೆ ಬಂದರು. ವಿಯೆಟ್ನಾಂನಲ್ಲಿ ವಿಮಾನದಿಂದ ಇಳಿಯುವ ಮೊದಲು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪತ್ನಿ ಬ್ರಿಗಿಟ್ ಅವರನ್ನು ಕೆನ್ನೆಗೆ ಬಾರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ವೈರಲ್ ಆಗಿದೆಯೆಂದರೆ ಇದಕ್ಕೆ ಫ್ರೆಂಚ್ ಅಧ್ಯಕ್ಷರೇ ಸ್ಪಷ್ಟೀಕರಣ ನೀಡಿದ್ದಾರೆ. ನಾವು ಮೋಜಿನಿಂದ ಕೆಳಗೆ ಇಳಿಯುತ್ತಿದ್ದೆವು. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ. ನಾವು ತಮಾಷೆಯಿಂದ ವರ್ತಿಸುತ್ತಿದ್ದಾಗ ಈ ರೀತಿ ಆಗಿದೆ. ಅದನ್ನು ಹೊರಗಿನಿಂದ ನೋಡಿದವರು ಆಶ್ಚರ್ಯಕ್ಕೀಡಾಗಿದ್ದಾರೆ. ಜನರ ಪ್ರತಿಕ್ರಿಯೆ ನೀಡಿ ನಮಗೂ ಅಚ್ಚರಿಯಾಗಿದೆ. ಜನರು ಮನಸಿಗೆ ಬಂದಂತೆ ಊಹೆ ಮಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ಶಾಂತ ರೀತಿಯಿಂದ ವರ್ತಿಸಬೇಕು! ಎಂದು ಮ್ಯಾಕ್ರನ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ