ರಾಮನಗರ ಇವತ್ತಿನಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಕರೆಸಿಕೊಳ್ಳುವುದು: ಡಿಕೆ ಶಿವಕುಮಾರ್, ಡಿಸಿಎಂ

Updated on: May 22, 2025 | 5:11 PM

ಬಿಡಿಎ ವಿನ್ಯಾಸಗೊಳಿಸಿರುವ ಲೇಔಟ್​​ಗಳಲ್ಲಿ ನಿವೇಶನಗಳನ್ನು ಖರೀದಿಸಿರುವ ಕೆಲ ಸಂಘಸಂಸ್ಥೆಗಳು ಹಣವನ್ನು ಪಾವತಿಸದೆ ಬಾಕಿಯುಳಿಸಿಕೊಂಡಿವೆ, ಅವರ ಬಾಕಿಯ ಮೇಲಿನ ಬಡ್ಡಿಯನ್ನು ಒಮ್ಮೆ ಮನ್ನಾ ಮಾಡಲು ಸಂಪುಟ ನಿರ್ಧರಿಸಿದೆ, ಬಾಕಿಯುಳಿಸಿಕೊಂಡವರು 120 ದಿನಗಳಲ್ಲಿ ಅದನ್ನು ಚುಕ್ತಾ ಮಾಡಿದರೆ ಬಡ್ಡಿ ಮನ್ನಾ ಆಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು, ಮೇ 22: ಇವತ್ತಿನ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಇವತ್ತಿನಿಂದ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ (Bengaluru South District) ಎಂದು ಕರೆಯಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಇದಕ್ಕೆ ಸಂಬಂಧಿಸಿದಂತೆ ಆದೇಶ ಕೂಡ ಹೊರಬೀಳಲಿದೆ, ಜಿಲ್ಲಾ ಕೇಂದ್ರ ರಾಮನಗರದಲ್ಲೇ ಉಳಿಯುತ್ತದೆ, ಹೆಡ್​​ಕ್ವಾರ್ಟರ್ಸ್ ನಲ್ಲಿ ಬದಲಾವಣೆ ಇರೋದಿಲ್ಲ, ಕೆಲಸ ಕಾರ್ಯ, ಕೋರ್ಟು-ಕಚೇರಿ ಎಂದಿನಂತೆ ರಾಮನಗರದಲ್ಲೇ ಮುಂದುವರಿಯುತ್ತವೆ, ಎಂದು ಹೇಳಿದ ಶಿವಕುಮಾರ್ ಈ ಸಂತಸದಾಯಕ ಘೋಷಣೆಗಾಗಿ ಎಲ್ಲರೂ ಕಾತುರದಿಂದ ಎದುರು ನೋಡುತ್ತಿದ್ದರು ಎಂದರು.

ಇದನ್ನೂ ಓದಿ:  ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ