ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಮ್ಮ ನಿಯಂತ್ರಣದಲ್ಲಿಲ್ಲ, ಆದರೂ ಪ್ರಧಾನಿ ಮೋದಿ ಕಡಿಮೆ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 04, 2021 | 6:32 PM

ಬೇರೆ ದೇಶಗಳಲ್ಲಿ ಇಂಧನದ ಬೆಲೆ ಇಳಿಸುವ ಪ್ರಯತ್ನ ನಡೆದಿಲ್ಲ. ಆದರೆ ಪ್ರಧಾನಿ ಮೋದಿ ಅವರು ಅದನ್ನು ಮಾಡಿ ದೇಶದ ಜನರ ಬಗ್ಗೆ ತಮಗಿರುವ ಕಾಳಜಿಯನ್ನು ಮತ್ತೊಮ್ಮೆ ಪ್ರದರ್ಶಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಭಾರತೀಯರು ಪೆಟ್ರೋಲಿಯಂ ಪದಾರ್ಥಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಾಗಿರುವ ಇಳಿಕೆಯನ್ನೂ ಸಂಭ್ರಮಿಸುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತೀಯರಿಗೆ ದೀಪಾವಳಿ ಹಬ್ಬದ ಉಡುಗರೆಯಾಗಿ ಇಂಧನಗಳ ಮೇಲಿನ ಅಬ್ಕಾರಿ ಸುಂಕವನ್ನು ಕಡಿಮೆ ಮಾಡಿರುವುದರಿಂದ ದೇಶದಾದ್ಯಂತ ಪೆಟ್ರೋಲ್ ಬೆಲೆ ರೂ. 7 ರಷ್ಟು ಮತ್ತು ಡೀಸೆಲ್ ಬೆಲೆ ರೂ. 12 ರಷ್ಟು ಕಡಿಮೆಯಾಗಿದೆ. ಪ್ರಧಾನಿ ಮೋದಿಯವರ ಈ ಕ್ರಮವನ್ನು ಕೇಂದ್ರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಯವರು ಗುರುವಾರ ಉಡುಪಿಯಲ್ಲಿ ಶ್ಲಾಘಿಸಿದರು.

‘ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಮೋಘವಾದ ಉಡುಗೊರೆ ನೀಡಿದ್ದಾರೆ. ಅಸಲಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ನಮ್ಮ ಕೈಯಲ್ಲಿಲ್ಲ. ಅವುಗಳ ದರ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ಅವಲಂಬಿತಗೊಂಡಿರುತ್ತದೆ. ಹಾಗೆಯೇ, ಪೆಟ್ರೋಲ್ ಮತ್ತು ಡೀಸೆಲ್ ನಮ್ಮ ದೇಶದಲ್ಲಿ ಉತ್ಪಾದನೆಯಾಗುವುದಿಲ್ಲ. ಅವುಗಳನ್ನು ನಾವು ಆಮದು ಮಾಡಿಕೊಳ್ಳುತ್ತೇವೆ. ಆದಾಗ್ಯೂ ಮೋದಿ ಸರ್ಕಾರ ಬೆಲೆಗಳನ್ನು ಇಳಿಸಿದೆ,’ ಎಂದು ಉಡಪಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡುತ್ತಾ ಶೋಭಾ ಅವರು ಹೇಳಿದರು.

ಇಂಧನಗಳ ಬೆಲೆ ಹೆಚ್ಚಾದರೆ, ಬೇರೆ ಎಲ್ಲವೂ ತುಟ್ಟಿಯಾಗುತ್ತವೆ. ಬಸ್ ಪ್ರಯಾಣದ ದರ ಹೆಚ್ಚುತ್ತದೆ, ಕ್ಯಾಬ್ ಮತ್ತು ಟ್ಯಾಕ್ಸಿ ಓಡಿಸುವವರು ಹೆಚ್ಚಿಸುತ್ತಾರೆ. ಬೇರೆ ದೇಶಗಳಲ್ಲಿ ಇಂಧನದ ಬೆಲೆ ಇಳಿಸುವ ಪ್ರಯತ್ನ ನಡೆದಿಲ್ಲ. ಆದರೆ ಪ್ರಧಾನಿ ಮೋದಿ ಅವರು ಅದನ್ನು ಮಾಡಿ ದೇಶದ ಜನರ ಬಗ್ಗೆ ತಮಗಿರುವ ಕಾಳಜಿಯನ್ನು ಮತ್ತೊಮ್ಮೆ ಪ್ರದರ್ಶಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಇದನ್ನೂ ಓದಿ:   Puneeth Rajkumar: ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ; ಅಪ್ಪು ಜೊತೆ ಹಾಡಿದ ಕೊನೆಯ ವಿಡಿಯೋಗಳಲ್ಲಿ ಒಂದನ್ನು ಹಂಚಿಕೊಂಡ ರಾಘವೇಂದ್ರ ರಾಜಕುಮಾರ್

Published on: Nov 04, 2021 06:22 PM