Fujifilm Instax Mini: ಕ್ಲಿಕ್ ಮಾಡುತ್ತಿದ್ದಂತೆ ಇನ್ಸ್ಟಂಟ್ ಫೋಟೊ ಪ್ರಿಂಟ್ | ಫ್ಯುಜಿಫಿಲ್ಮ್ ಕ್ಯಾಮೆರಾ
ಫ್ಯುಜಿಫಿಲ್ಮ್ ನೂತನ ಮಾದರಿಯ ಇನ್ಸ್ಟಂಟ್ ಕ್ಯಾಮೆರಾ ಪರಿಚಯಿಸಿದೆ. ಫ್ಯುಜಿಫಿಲ್ಮ್ ಇನ್ಸ್ಟಾಕ್ಸ್ ಮಿನಿ ಎಸ್ಇ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಇನ್ಸ್ಟಂಟ್ ಫೋಟೊ ಪ್ರಿಂಟ್ ಆವೃತ್ತಿಯ ಕ್ಯಾಮೆರಾಗಳಲ್ಲಿ ಫ್ಯುಜಿಫಿಲ್ಮ್ ಸದಾ ಮುಂದು.
ಈಗಿನ ಯುವಜನತೆಗೆ ಎಲ್ಲವೂ ಇನ್ಸ್ಟಂಟ್ ಆಗಿರಬೇಕು. ಕಾಯುವಷ್ಟು ತಾಳ್ಮೆ ಇರುವುದಿಲ್ಲ, ಎಲ್ಲವೂ ಕ್ಷಣದಲ್ಲೇ ಸಿಗಬೇಕು, ಬುಕ್ ಮಾಡಿದ ಕೂಡಲೇ ಡೆಲಿವರಿ ಆಗಬೇಕು, ಸ್ಮಾರ್ಟ್ಫೋನ್ನಲ್ಲಿ ಆ್ಯಪ್ ಮೂಲಕ ಆರ್ಡರ್ ಕೊಟ್ಟ ಕೂಡಲೇ ಸಿಗಬೇಕು ಎನ್ನುವ ಮನಸ್ಥಿತಿ. ಅಂತಹವರಿಗಾಗಿಯೇ ಫ್ಯುಜಿಫಿಲ್ಮ್ ನೂತನ ಮಾದರಿಯ ಇನ್ಸ್ಟಂಟ್ ಕ್ಯಾಮೆರಾ ಪರಿಚಯಿಸಿದೆ. ಫ್ಯುಜಿಫಿಲ್ಮ್ ಇನ್ಸ್ಟಾಕ್ಸ್ ಮಿನಿ ಎಸ್ಇ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಇನ್ಸ್ಟಂಟ್ ಫೋಟೊ ಪ್ರಿಂಟ್ ಆವೃತ್ತಿಯ ಕ್ಯಾಮೆರಾಗಳಲ್ಲಿ ಫ್ಯುಜಿಫಿಲ್ಮ್ ಸದಾ ಮುಂದು. ಹೊಸ ಹೊಸ ಮಾದರಿಗಳನ್ನು ಬಜೆಟ್ ದರದಲ್ಲಿ ದೇಶದಲ್ಲಿ ಬಿಡುಗಡೆ ಮಾಡುತ್ತಿರುತ್ತದೆ. ನೂತನ Fujifilm Instax Mini SE ಐದು ಆಕರ್ಷಕ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ಡೀಟೇಲ್ಸ್ ವಿಡಿಯೊದಲ್ಲಿದೆ.
Latest Videos