Dissent in KPCC | ಜಿ ಪರಮೇಶ್ವರ್ ಬೇಜಾರೇನೂ ಮಾಡಿಕೊಂಡಿಲ್ಲ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ: ಎಂ ವೀರಪ್ಪ ಮೊಯ್ಲಿ

Dissent in KPCC | ಜಿ ಪರಮೇಶ್ವರ್ ಬೇಜಾರೇನೂ ಮಾಡಿಕೊಂಡಿಲ್ಲ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ: ಎಂ ವೀರಪ್ಪ ಮೊಯ್ಲಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 04, 2023 | 12:17 PM

ಪಕ್ಷದ ನಾಯಕರ ನಡುವೆ ಏನೂ ನಡೆದೇ ಇಲ್ಲ ಎಲ್ಲವೂ ಸರಿಯಾಗಿದೆ, ಅಸಮಾಧಾನ, ಬಂಡಾಯ, ಭಿನ್ನಮತ ಯಾವುದೂ ಇಲ್ಲ ಎಂಬ ಚಿತ್ರಣ ನೀಡಲು ಮೊಯ್ಲಿ ಪ್ರಯತ್ನಿಸಿದರು.

ಮೈಸೂರು:  ಶುಕ್ರವಾರ ನಾವು ಈ ಬಗ್ಗೆ ಚರ್ಚೆ ಮಾಡಿದ್ದೆವು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ ಜಿ ಪರಮೇಶ್ವರ್ (G Parameshwara) ಅವರು ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ಅಸಮಾಧಾನ ಬಹಿರಂಗಗೊಳಿಸಿದ್ದರು. ಶನಿವಾರ ಮೈಸೂರಿಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಮ್ ವೀರಪ್ಪ ಮೊಯ್ಲಿ (Veerappa Moily) ಅವರಿಗೆ ಪಕ್ಷದಲ್ಲಿ ಹೆಚ್ಚುತ್ತಿರುವ ಭಿನ್ನಮತದ ಬಗ್ಗೆ ಪ್ರಶ್ನಿಸಿದಾಗ, ಪಕ್ಷದ ನಾಯಕರ ನಡುವೆ ಏನೂ ನಡೆದೇ ಇಲ್ಲ ಎಲ್ಲವೂ ಸರಿಯಾಗಿದೆ, ಅಸಮಾಧಾನ, ಬಂಡಾಯ, ಭಿನ್ನಮತ (dissent) ಯಾವುದೂ ಇಲ್ಲ ಎಂಬ ಚಿತ್ರಣ ನೀಡಲು ಪ್ರಯತ್ನಿಸಿದರು. ತಾವು ಖುದ್ದು, ಪರಮೇಶ್ವರ್ ಅವರೊಂದಿಗೆ ಮಾತಾಡಿದ್ದು ಅವರು ಬೇಜಾರು ಮಾಡಿಕೊಂಡಿಲ್ಲ ಎಂದು ಮೊಯ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ