ಕಾರು ಓಡಿಸಿ ಅಭ್ಯಾಸವಿರುವ ಕಾಂಗ್ರೆಸ್ ನಾಯಕ ಜಿ ಪರಮೇಶ್ವರ ಎತ್ತಿನಗಾಡಿ ಓಡಿಸುವಲ್ಲಿ ಎಡವಿದರು!
ಪರಮೇಶ್ವರ್ ಅವರು ಹಗ್ಗ ಎಳೆದಾಕ್ಷಣ ಎತ್ತುಗಳು ಗಾಬರಿಯಿಂದ ಓಡಲಾರಂಭಿಸುತ್ತವೆ. ಅಲ್ಲಿದ್ದ ರೈತರು ಕೂಡಲೇ ಓಡುತ್ತಿದ್ದ ಎತ್ತುಗಳನ್ನು ನಿಲ್ಲಿಸತ್ತಾರೆ.
ತುಮಕೂರು: ಬೆಂಗಳೂರಂಥ ‘ಮಹಾಗುಂಡಿಗಳ’ ನಗರದಲ್ಲೇ ಕಾರು ಓಡಿಸ್ತೀನಿ, ಕೊರಟೆಗೆರೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಎತ್ತಿನಗಾಡಿ ಓಡಿಸುವುದೇನು ಮಹಾ ಅಂತ ಚಕ್ಕಡಿ ಹತ್ತಿದ ಮಾಜಿ ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ ಪಕ್ಷದ ಹಿರಿಯ ನಾಯಕ ಡಾ ಜಿ ಪರಮೇಶ್ವರ ಅವರಿಗೆ ಹಗ್ಗವನ್ನು ಕೈಯಲ್ಲಿ ಹಿಡಿದು ಹಚ್ಚಾ ಅಂತ ಹೇಳಿದಾಗಲೇ ವಾಸ್ತವ ಅರಿವಾಗಿದ್ದು. ಗೇರ್ ಹಾಕಿ ಕಾರು ಓಡಿಸುವುದೇ ಬೇರೆ, ಎತ್ತುಗಳಿಗೆ ಕಟ್ಟಿದ ಹಗ್ಗವನ್ನು ಎಳೆದು ಎತ್ತಿನ ಬಂಡಿಯನ್ನು ಓಡಿಸುವುದೇ ಬೇರೆ. ಅವರು ಹಗ್ಗ ಎಳೆದಾಕ್ಷಣ ಎತ್ತುಗಳು ಗಾಬರಿಯಿಂದ ಓಡಲಾರಂಭಿಸುತ್ತವೆ. ಅಲ್ಲಿದ್ದ ರೈತರು ಕೂಡಲೇ ಓಡುತ್ತಿದ್ದ ಎತ್ತುಗಳನ್ನು ನಿಲ್ಲಿಸಿದರು. ಕೊರಟೆಗೆರೆಯಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಕ್ರೀಡಾಕೂಟದಲ್ಲಿ ಈ ಘಟನೆ ನಡೆಯಿತು.