Mandya: ಕೋರ್ಟ್ ತಡೆಯಾಜ್ಞೆಗೂ ಡೋಂಟ್ ಕೇರ್; ಮಂಡ್ಯದಲ್ಲಿ ಅಧಿಕಾರಿಗಳ ಅಂಧ ದರ್ಬಾರ್

Mandya: ಕೋರ್ಟ್ ತಡೆಯಾಜ್ಞೆಗೂ ಡೋಂಟ್ ಕೇರ್; ಮಂಡ್ಯದಲ್ಲಿ ಅಧಿಕಾರಿಗಳ ಅಂಧ ದರ್ಬಾರ್

TV9 Web
| Updated By: Rakesh Nayak Manchi

Updated on:Oct 21, 2022 | 11:20 AM

Mandya News: ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಕ್ಯಾರೇ ಎನ್ನದ ಮಂಡ್ಯ ತಾಲೂಕಿನ ತಹಶೀಲ್ದಾರ್ ಸಾಗುವಳಿ ಮಾಡುತ್ತಿರುವ ಜಮೀನನ್ನು ತೆರವುಗೊಳಿಸಿದ್ದಾರೆ.

ಮಂಡ್ಯ: ಸಕ್ಕರಿನಗರಿ ಮಂಡ್ಯದಲ್ಲಿ ಅಧಿಕಾರಿಗಳ ಅಂಧ ದರ್ಬಾರ್ ನಡೆದಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಜಮೀನು ತೆರವಿಗೆ ತಹಸೀಲ್ದಾರ್ ಮುಂದಾದ ಘಟನೆಯೊಂದು ನಡೆದಿದೆ. ಮಂಡ್ಯ ತಾಲೂಕಿನ ಹಳೆ ಬೂದನೂರಿನಲ್ಲಿ ಈ ಅಂಧದರ್ಬಾರ್​ ನಡೆದಿದೆ. ಕೋರ್ಟ್ ಆರ್ಡರ್​ಗೂ ಕವಡೆ ಕಾಸಿನ ಕಿಮ್ಮತ್ತು ಕೊಡದ ತಹಶೀಲ್ದಾರ್ ಮೊಹಮ್ಮದ್, ಸಾಗುವಳಿ ಮಾಡುತ್ತಿರುವ ಸರೋಜಮ್ಮನ ಜಮೀನನ್ನು ತೆರವುಗೊಳಿಸಿದ್ದಾರೆ. ಹೊಲ ಗದ್ದೆಗೆ ಜೆಸಿಬಿ ನುಗ್ಗಿಸಿ ಟೊಮೆಟೋ ಬೆಳೆ ನಾಶಗೊಳಿಸಿದ್ದು, ತಹಶೀಲ್ಧಾರ್ ವಿರುದ್ದ ಸರೋಜಮ್ಮ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 21, 2022 11:18 AM