ಪ್ರಧಾನಿ ಮೋದಿಗೆ ಪತ್ರ ಬರೆದ ಗದಗ ವಿದ್ಯಾರ್ಥಿ: ಬಾಲಕನ ಮನವಿ ಏನು ಗೊತ್ತಾ?
ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಹಲವು ವರ್ಷಗಳಿಂದ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದೆ. ಹದಗೆಟ್ಟ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ನರಳುತ್ತಿದ್ದಾರೆ. ನಗರಸಭೆಯ ನಿರ್ಲಕ್ಷ್ಯದ ಬಗ್ಗೆ 8ನೇ ತರಗತಿಯ ವಿದ್ಯಾರ್ಥಿ ಸಾಯಿರಾಮ್ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ. ಸಮಸ್ಯೆ ಪರಿಹಾರಕ್ಕೆ ಪ್ರಧಾನಿ ಸ್ಪಂದಿಸುತ್ತಾರೆಂಬ ಭರವಸೆಯಲ್ಲಿ ಗ್ರಾಮಸ್ಥರಿದ್ದಾರೆ.
ಗದಗ, (ನವೆಂಬರ್ 17): ಗದಗ ಜಿಲ್ಲೆಯ ಬೆಟಗೇರಿಯಲ್ಲಿ ಹಲವು ವರ್ಷಗಳಿಂದ ಮೂಲಸೌಕರ್ಯಗಳ ಕೊರತೆ ತೀವ್ರವಾಗಿದೆ. ಹದಗೆಟ್ಟ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ಗ್ರಾಮಸ್ಥರು ನರಳುತ್ತಿದ್ದಾರೆ. ನಗರಸಭೆಯ ನಿರ್ಲಕ್ಷ್ಯದ ಬಗ್ಗೆ 8ನೇ ತರಗತಿಯ ವಿದ್ಯಾರ್ಥಿ ಸಾಯಿರಾಮ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾನೆ.
ಸಾಯಿರಾಮ್ ಸೇಂಟ್ ಜಾನ್ಸ್ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಮನೆಯ ಮುಂದಿನ ರಸ್ತೆ ಹಾಗೂ ಓಣಿಯ ರಸ್ತೆ ಹದಗೆಟ್ಟಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಪರಿಹಾರ ಒದಗಿಸುವಂತೆ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾನೆ. ಇನ್ನು ಬಾಲಕ ಪತ್ರಕ್ಕೆ ಪ್ರಧಾನಿ ಸ್ಪಂದಿಸುತ್ತಾರೆಂಬ ಭರವಸೆಯಲ್ಲಿ ಗ್ರಾಮಸ್ಥರಿದ್ದಾರೆ.
ಇದನ್ನೂ ಓದಿ: ‘ನಮಗೆ ಮನೆಯ ಮುಂದೆ ಆಟವಾಡಲು ಸಾಧ್ಯವಾಗುತ್ತಿಲ್ಲ’; ಪ್ರಧಾನಿಗೆ ಪತ್ರ ಬರೆದ 8 ನೇ ತರಗತಿ ಬಾಲಕ
Published on: Nov 17, 2025 06:18 PM
