ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಯೋಗ್ಯತೆ ಇಲ್ಲದಿದ್ದರೂ ಬಿಗ್ ಬಾಸ್ ಮನೆಯ ಒಳಗೆ ಉಳಿದುಕೊಂಡಿರುವ ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡಲು ಸೂಚಿಸಲಾಗಿದೆ. ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಧ್ರುವಂತ್, ರಕ್ಷಿತಾ ಶೆಟ್ಟಿ ಮುಂತಾದವರ ಹೆಸರುಗಳು ಬಂದಿವೆ. ನವೆಂಬರ್ 17ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ 50 ದಿನಗಳ ಕಳೆದಿವೆ. ಈಗಾಗಲೇ ಹಲವರು ಎಲಿಮಿನೇಟ್ ಆಗಿದ್ದಾರೆ. ಇನ್ನುಳಿದವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಯಾರು ಫಿನಾಲೆ ತಲುಪುತ್ತಾರೆ ಎಂಬ ಕೌತುಕ ಹೆಚ್ಚುತ್ತಿದೆ. ಯೋಗ್ಯತೆ ಇಲ್ಲದವರು ಒಬ್ಬೊಬ್ಬರಾಗಿಯೇ ಎಲಿಮಿನೇಟ್ (BBK 12 Elimination) ಆಗುತ್ತಾರೆ. ಸದ್ಯಕ್ಕೆ ಯೋಗ್ಯತೆ ಇಲ್ಲದಿದ್ದರೂ ಬಿಗ್ ಬಾಸ್ ಒಳಗೆ ಉಳಿದುಕೊಂಡಿರುವ ಸ್ಪರ್ಧಿಗಳ ಹೆಸರನ್ನು ನಾಮಿನೇಟ್ ಮಾಡಲು ಸೂಚಿಸಲಾಗಿದೆ. ಮಾಳು ನಿಪನಾಳ, ರಾಶಿಕಾ ಶೆಟ್ಟಿ, ಧ್ರುವಂತ್, ರಕ್ಷಿತಾ ಶೆಟ್ಟಿ ಮುಂತಾದವರ ಹೆಸರುಗಳು ಬಂದಿವೆ. ಅಂತಿಮವಾಗಿ ಈ ವಾರ ಎಲಿಮಿನೇಷನ್ಗೆ ಯಾರೆಲ್ಲ ನಾಮಿನೇಟ್ (Bigg Boss Nomination) ಆಗಲಿದ್ದಾರೆ ಎಂಬುದು ನವೆಂಬರ್ 17ರ ಸಂಚಿಕೆಯಲ್ಲಿ ತಿಳಿಯಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ನವೆಂಬರ್ 16ರ ಎಪಿಸೋಡ್ನಲ್ಲಿ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆದರು. ಅವರನ್ನು ಸ್ಟ್ರಾಂಗ್ ಸ್ಪರ್ಧಿ ಎಂದು ಊಹಿಸಲಾಗಿತ್ತು. ಆದರೆ ಅದು ನಿಜವಾಗಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

