ಸರ್ಕಲ್ ಮಧ್ಯೆ ಕೈಕೊಟ್ಟ ಡಕೋಟಾ ಸರ್ಕಾರಿ ಬಸ್: ಪ್ರಯಾಣಿಕರು ಮಾಡಿದ್ದೇನು ನೋಡಿ
ಗದಗ ನಗರದ ಪುಟ್ಟರಾಜ್ ಸರ್ಕಲ್‌ನಲ್ಲಿ ರಾಯಚೂರು ವಿಭಾಗದ ಕಲ್ಯಾಣ ಕರ್ನಾಟಕ ಸಾರಿಗೆಯ ಡಕೋಟಾ ಬಸ್ ನಡುರಸ್ತೆಯಲ್ಲೇ ಕೆಟ್ಟು ನಿಂತಿತ್ತು. ಲಿಂಗಸಗೂರ-ಕುಷ್ಟಗಿ-ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ಬಸ್ ಅನ್ನು ಕಂಡಕ್ಟರ್ ಮತ್ತು ಪ್ರಯಾಣಿಕರು ಸೇರಿ ತಳ್ಳುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಚಾಲಕನ ಪ್ರಯತ್ನದಿಂದ ಬಸ್ ಕೊನೆಗೂ ಸ್ಟಾರ್ಟ್ ಆಗಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.
ಗದಗ, ಡಿ23: ಗದಗ ನಗರದ ಪುಟ್ಟರಾಜ್ ಸರ್ಕಲ್‌ನಲ್ಲಿ ರಾಯಚೂರು ವಿಭಾಗಕ್ಕೆ ಸೇರಿದ ಕಲ್ಯಾಣ ಕರ್ನಾಟಕ ಸಾರಿಗೆಯ ಡಕೋಟಾ ಬಸ್ ನಡುರಸ್ತೆಯಲ್ಲೇ ಕೆಟ್ಟು ನಿಂತ ಘಟನೆಯೊಂದು ನಡೆದಿದೆ. ಲಿಂಗಸಗೂರ-ಕುಷ್ಟಗಿ-ಗದಗ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿದ್ದ ಈ ಬಸ್, ಸಿಗ್ನಲ್‌ನಲ್ಲಿ ಕೆಟ್ಟು ನಿಂತ ಕಾರಣ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಬಸ್ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಈ ಸಂದರ್ಭದಲ್ಲಿ, ಬಸ್‌ನ ಕಂಡಕ್ಟರ್ ಮತ್ತು ಪ್ರಯಾಣಿಕರು ಬಸ್ ಅನ್ನು ತಳ್ಳಿದ್ದಾರೆ. ಟಿಕೆಟ್ ಖರೀದಿಸಿದ್ದ ಪ್ರಯಾಣಿಕರು ಬಸ್ ಮುಂದೆ ಹೋಗಲಿ ಎಂದು ಬಸ್ ಅನ್ನು ತಳ್ಳಲು ಹರಸಾಹಸ ಪಟ್ಟರು. ಇನ್ನು ಬಸ್ ಚಾಲಕ ಕೂಡ ಸ್ಟಾರ್ಟ್ ಮಾಡಲು ಪರದಾಡಿದ್ದಾರೆ. ಕೊನೆಗೂ ಚಾಲಕನ ಪ್ರಯತ್ನದಿಂದ ಬಸ್ ಮತ್ತೆ ಸ್ಟಾರ್ಟ್ ಆಗಿ ಮುಂದಕ್ಕೆ ಹೋಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

