ಗದಗ ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ಇಲ್ಲಿದೆ ಸಿಸಿಟಿವಿ ದೃಶ್ಯ

Edited By:

Updated on: Dec 04, 2025 | 10:41 PM

ಗದಗದ ಚಿನ್ನದಂಗಡಿ ದೋಚಿದ್ದ ಗುಜರಾತ್​​ ಮೂಲದ ಕಳ್ಳ ಕೊನೆಗೂ ಸೆರೆಸಿಕ್ಕಿದ್ದಾನೆ. ಕಳ್ಳತನ ನಡೆದ 6 ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಅಂತಾರಾಜ್ಯ ಕಳ್ಳನನ್ನು ಸದ್ಯ ಗದಗ ಜಿಲ್ಲಾ ಪೊಲೀಸ ಬಂಧಿಸಿದ್ದಾರೆ. ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಕಳ್ಳನ ಚಲನವನಲದ ದೃಶ್ಯ ಸೆರೆಯಾಗಿತ್ತು. ವಿಡಿಯೋ ನೋಡಿ.

ಗದಗ, ಡಿಸೆಂಬರ್​​ 04: ಗದಗ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನ ನಡೆದ 6 ಗಂಟೆಯಲ್ಲಿ ಸಿನಿಮೀಯ ರೀತಿಯಲ್ಲಿ ಅಂತಾರಾಜ್ಯ‌ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಜರಾತ್​ನ ಹುಸೇನ್ ಸಿದ್ದಿಕಿ ಬಂಧಿತ ಆರೋಪಿ. ಗದಗ ಎಸ್​ಪಿ ರೋಹನ್ ಜಗದೀಶ್ ಚಾಣಾಕ್ಷತನದಿಂದ ಕಳ್ಳನನ್ನು ಬಂಧಿಸಲಾಗಿದ್ದು, ಚಿನ್ನ, ಬೆಳ್ಳಿ ಆಭರಣ, ನಗದು ಸೇರಿ 80 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಕಳ್ಳನ ಚಲನವನಲದ ದೃಶ್ಯ ಸೆರೆಯಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.