ಗದಗ: ಮುಸುಕುಧಾರಿ ಗ್ಯಾಂಗ್ ಹಾವಳಿ, 20 ಸೆಕೆಂಡ್ಗಳಲ್ಲಿ ಅಂಗಡಿ ಬಾಗಿಲು ಮುರಿದು ಕಳ್ಳತನ
ಫೆಬ್ರವರಿ 16ರ ಮಧ್ಯರಾತ್ರಿ ಮುಸುಕುಧಾರಿ ಗ್ಯಾಂಗ್ ಗದಗ-ಬೆಟಗೇರಿ ಅವಳಿ ನಗರಗಳ 8 ಅಂಗಡಿಗಳಿಗೆ ಕನ್ನ ಹಾಕಿದೆ. 6 ಕಳ್ಳರ ಗ್ಯಾಂಗ್ ಇದಾಗಿದೆ. ಪೊಲೀಸ್ ಸೆಕ್ಯೂರಿಟಿ ಇದ್ದರೂ ಕೃತ್ಯವೆಸಗಿದೆ. ಬಡಾವಣೆ ಠಾಣೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ರಾತ್ರಿ ರೌಂಡ್ಸ್ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಗದಗ, ಫೆಬ್ರವರಿ 18: ಗದಗ ಜಿಲ್ಲೆಗೂ ಖತರ್ನಾಕ್ ಮುಸುಕುಧಾರಿ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು, ಗದಗ-ಬೆಟಗೇರಿ ಅವಳಿ ನಗರದಲ್ಲಿ ಒಂದೇ ರಾತ್ರಿ ಸರಣಿ ಕಳ್ಳತನ ನಡೆದಿದೆ. ಅಂಗಡಿ ಶಟರ್ ಮುರಿದು ಅಂಗಡಿಗಳಲ್ಲಿದ್ದ 25 ಸಾವಿರ ರೂಪಾಯಿ ಹಣ ದೋಚಿ ಗ್ಯಾಂಗ್ ಪರಾರಿಯಾಗಿದೆ. ಗದಗ-ಬೆಟಗೇರಿ ಅವಳಿ ನಗರದ ಹಾತಲಗೇರಿ, ಕೆ.ಸಿ.ರಾಣಿ ರೋಡ್, ಹಾಳಕೇರಿ ಮಠದ ಬಳಿ ಹಲವು ಕಿರಾಣಿ ಅಂಗಡಿಗಳಲ್ಲಿ ಕಳ್ಳತನ ಮಾಡಲಾಗಿದೆ. ಪೊಲೀಸರ ವೈಫಲ್ಯವೇ ಸರಣಿ ಕಳ್ಳತನಕ್ಕೆ ಕಾರಣ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸುಕುಧಾರಿ ಗ್ಯಾಂಗ್ ಕಳ್ಳತನದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.