ಗದಗ: ವರುಣ ದೇವನನ್ನು ಮೆಚ್ಚಿಸಲು ಗೊಂಬೆಗಳ ಮದುವೆ; ಮಳೆಗಾಗಿ ರೈತರ ಪ್ರಾರ್ಥನೆ

Edited By:

Updated on: Jun 27, 2023 | 3:02 PM

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮೈಸೂರು ಮಠದಲ್ಲಿ ಗೊಂಬೆಗಳ ಮದುವೆ ನಡೆದಿದೆ. ಮಳೆಗಾಗಿ ಅನ್ನದಾತರು ಸಂಪ್ರದಾಯ ಬದ್ದವಾಗಿ ಗೊಂಬೆಗಳಿಗೆ ಮದುವೆ ಮಾಡಿಸಿದ್ದಾರೆ.

ಗದಗ: ಮಳೆ ಇಲ್ಲದೆ ಬರಗಾಲ ಆವರಿಸುವ ಸೂಚನೆ ಸಿಕ್ಕಾಗ ವರುಣ ದೇವನನ್ನು ಮೆಚ್ಚಿಸಲು ಜನ ನಾನಾ ರೀತಿಯ ಆಚರಣೆಗಳನ್ನು ಕೈಗೊಳ್ಳುತ್ತಾರೆ. ಕಪ್ಪೆ ಮದುವೆ, ಕತ್ತೆ ಮದುವೆಗಳನ್ನು ಮಾಡಿಸಿ ಪ್ರಾರ್ಥನೆ ಮಾಡುತ್ತಾರೆ. ಅದೇ ರೀತಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮೈಸೂರು ಮಠದಲ್ಲಿ ಗೊಂಬೆಗಳ ಮದುವೆ ನಡೆದಿದೆ. ಮಳೆಗಾಗಿ ಅನ್ನದಾತರು ಸಂಪ್ರದಾಯ ಬದ್ದವಾಗಿ ಗೊಂಬೆಗಳಿಗೆ ಮದುವೆ ಮಾಡಿಸಿದ್ದಾರೆ. ಗಂಡು ಗೊಂಬೆಗೆ ಹೊಸ ಪಂಚೆ, ಟವಲ್, ಬಾಸಿಂಗ್ ಕೊರಳಿಗೆ ಹಾರ ಹಾಕಿಸಿ ಹೆಣ್ಣು ಗೊಂಬೆಗೆ ಸೀರೆ, ಅರಿಶಿಣ ಹಚ್ಚಿ ಸುರಗಿ ಶಾಸ್ತ್ರ ಮಾಡಿದ್ದಾರೆ. ಬಳಿಕ ಗಂಡು ಹೆಣ್ಣು ಗೊಂಬೆಗಳ ಮೆರವಣಿಗೆ ಮಾಡಿ‌ ಮದುವೆ ಕಾರ್ಯ ಮುಗಿದಿದೆ. ಗೊಂಬೆಗಳ ಮದುವೆ ಮಾಡುವ ಮೂಲಕ ಮಳೆಗಾಗಿ ರೈತರು ಪ್ರಾರ್ಥನೆ ಮಾಡಿದ್ದಾರೆ.